ಯೇಸುವಿನ ಹಿಂಬಾಲಕರಾಗಿ, ನಾವು ಪ್ರತಿದಿನ ವಾಕ್ಯವನ್ನು ಓದಬೇಕು. ಪ್ರತಿ ವಾರ ಸತ್ಯವೇದದಲ್ಲಿ ಕನಿಷ್ಠ 25-30 ಅಧ್ಯಾಯಗಳನ್ನು ಓದುವುದು ಉತ್ತಮಮಾರ್ಗದರ್ಶಿಯಾಗಿದೆ. ಎಸ್.ಓ.ಎ.ಪಿ.ಎಸ್ ಬಳಸಿಕೊಂಡು ದೈನಂದಿನ ದಿನಚರಿಯನ್ನು ಇಟ್ಟುಕೊಳ್ಳುವುದು ಸತ್ಯವೇದ ಓದುವಿಕೆಯ ಸ್ವರೂಪವು ನಿಮಗೆಅರ್ಥಮಾಡಿಕೊಳ್ಳಲು, ವಿಧೇಯರಾಗಲು ಮತ್ತು ಇನ್ನಷ್ಟು ಸಾರಲು ಸಹಾಯ ಮಾಡುತ್ತದೆ.

ಎಸ್.ಓ.ಎ.ಪಿ.ಎಸ್. ನಿಂತಿದೆ:

  •     ವಾಕ್ಯ: ಇಂದು ನಿಮಗೆ ವಿಶೇಷವಾಗಿ ಅರ್ಥಭರಿತವಾದ ಒಂದು ಅಥವಾ ಹೆಚ್ಚಿನ ವಚನಗಳನ್ನು ಬರೆಯಿರಿ.
  •     ಅವಲೋಕನ: ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಸ್ವಂತ ಪದಗಳಲ್ಲಿ ಆ ವಚನಗಳನ್ನು ಅಥವಾ ಪ್ರಮುಖ ಅಂಶಗಳನ್ನು ಪುನಃ ಬರೆಯಿರಿ.
  •     ಅನ್ವಯ: ನಿಮ್ಮ ಸ್ವಂತ ಜೀವನದಲ್ಲಿ ಈ ಆಜ್ಞೆಗಳಿಗೆ ವಿಧೇಯರಾಗುವುದರ ಅರ್ಥವೇನೆಂದು ಯೋಚಿಸಿ.
  •     ಪ್ರಾರ್ಥನೆ: ನೀವು ಕಲಿತದ್ದನ್ನು ದೇವರಿಗೆ ತಿಳಿಸುವ ಪ್ರಾರ್ಥನೆಯನ್ನು ಬರೆಯಿರಿ ಮತ್ತು ನೀವು ಹೇಗೆ ವಿಧೇಯರಾಗಬೇಕೆಂದು ಯೋಜಿಸುತ್ತೀರಿ.
  •     ಹಂಚಿಕೊಳ್ಳುವುದು: ನೀವು ಕಲಿತ/ಅನ್ವಯಿಸಿದ ವಿಷಯಗಳನ್ನು ಕುರಿತು ನೀವು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಾನೆ ಎಂದು ಕೇಳಿ.

ಯೇಸುವಿನ ಯಾವುದೇ ಹಿಂಬಾಲಕರು ಬಳಸಬಹುದಾದ ಪರಿಣಾಮಕಾರಿ ಸತ್ಯವೇದ ಅಧ್ಯಯನದ ವಿಧಾನವನ್ನು ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಇದು ಸರಳಮಾರ್ಗವಾಗಿದೆ.

ಕೆಲಸದಲ್ಲಿನ ಎಸ್.ಓ.ಎ.ಪಿ.ಎಸ್ ನ ಉದಾಹರಣೆ ಇಲ್ಲಿದೆ:

ಎಸ್ - "ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂವಿುಯ ಮೇಲೆ ಆಕಾಶವು ಎಷ್ಟುಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ." ಯೆಶಾಯ 55:8-9

ಓ - ಮಾನವನಾಗಿ, ನನಗೆ ತಿಳಿದಿರುವ ಮತ್ತು ಹೇಗೆ ಮಾಡಬೇಕೆಂದು ನನಗೆ ತಿಳಿದಿರುವುದರಲ್ಲಿ ನಾನು ಸೀಮಿತವಾಗಿದ್ದೇನೆ. ದೇವರು ಯಾವುದೇ ರೀತಿಯಲ್ಲಿಸೀಮಿತವಾಗಿಲ್ಲ. ಆತನು ಎಲ್ಲವನ್ನೂ ನೋಡುತ್ತಾನೆ ಮತ್ತು ತಿಳಿದಿರುತ್ತಾನೆ. ಆತನು ಏನು ಬೇಕಾದರೂ ಮಾಡಬಲ್ಲನು.

ಎ - ದೇವರು ಎಲ್ಲವನ್ನೂ ತಿಳಿದಿರುವ ಕಾರಣ ಮತ್ತು ಆತನ ಮಾರ್ಗಗಳು ಅತ್ಯುತ್ತಮವಾದವುಗಳಾಗಿರುವುದರಿಂದ, ನನ್ನ ಸ್ವಂತ ರೀತಿಯಲ್ಲಿ ಕೆಲಸ ಮಾಡುವುದಕ್ಕೆಬದಲಾಗಿ ನಾನು ಆತನನ್ನು ಅನುಸರಿಸಿದರೆ ನಾನು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದುತ್ತೇನೆ.

ಪಿ - ಕರ್ತನೇ, ನಿನ್ನನ್ನು ಮೆಚ್ಚಿಸುವ ಮತ್ತು ಇತರರಿಗೆ ಸಹಾಯ ಮಾಡುವ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆಕಾರಣವಾಗುತ್ತವೆ. ನನ್ನ ಆಲೋಚನೆಗಳು ನೋವುಂಟುಮಾಡುತ್ತವೆ. ಬದಲಾಗಿ ನಿನ್ನ ಮಾರ್ಗಗಳನ್ನು ಮತ್ತು ನಿನ್ನ ಆಲೋಚನೆಗಳನ್ನು ನನಗೆ ಬೋಧಿಸು. ನಾನು ನಿನ್ನನ್ನುಹಿಂಬಾಲಿಸುವಾಗ ನಿನ್ನ ಪವಿತ್ರಾತ್ಮನು ನನಗೆ ಮಾರ್ಗದರ್ಶನ ಕೊಡಲಿ.

ಎಸ್ - ನಾನು ಈ ವಚನಗಳನ್ನು ಮತ್ತು ಈ ಅನ್ವಯವನ್ನು ನನ್ನ ಸ್ನೇಹಿತನಾದ ಸ್ಟೀವ್ ಅವರೊಂದಿಗೆ ಹಂಚಿಕೊಳ್ಳುತ್ತೇನೆ, ಅವರು ಕಷ್ಟಕರ ಸಮಯವನ್ನು ಎದುರಿಸುತ್ತಿದ್ದಾರೆಮತ್ತು ಅವರು ಎದುರಿಸುತ್ತಿರುವ ಪ್ರಮುಖ ನಿರ್ಧಾರಗಳಿಗೆ ಮಾರ್ಗದರ್ಶನದ ಅಗತ್ಯವಿದೆ.

ನಿಮ್ಮನ್ನೇ ಕೇಳಿ

  •     ನನ್ನ ಸತ್ಯವೇದ ಅಧ್ಯಯನದ ಸಮಯದಲ್ಲಿ ನಾನು ದೇವರಿಂದ ಕೇಳಿಸಿಕೊಳ್ಳುವದನ್ನು ಹಂಚಿಕೊಳ್ಳುವುದು ನನಗೆ ಎಷ್ಟು ಪ್ರಾಮುಖ್ಯವಾಗಿದೆ?
  •     ನಾನು ಈಗ ಈ ಸಾಧನವನ್ನು ಹಂಚಿಕೊಳ್ಳಬಹುದಾದ ನನ್ನ ವಲಯದಲ್ಲಿರುವ ಜನರು ಯಾರು?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress