ಜುಮ್ ಎಫ್.ಎ.ಕ್ಯೂ


ಇದು ನಿಜವಾಗಿ 100 ಶೇಕಡ ಉಚಿತವೋ?

ಹೌದು. ಯಾವುದೇ ಬೆಲೆಯುಳ್ಳ ಆವೃತ್ತಿಗಳು ಇಲ್ಲ, ಪ್ರಾಯೋಗಿಕ ಅವಧಿಗಳಿಲ್ಲ, ಉತ್ಪನ್ನಗಳ ಮಾರಾಟದ ಅನುಸರಣೆಯಿಲ್ಲ. ನಾವು ಮುಕ್ತವಾಗಿ ಸ್ವೀಕರಿಸಿದ್ದೇವೆ. ನಾವು ಉಚಿತವಾಗಿ ನೀಡುತ್ತೇವೆ.

ನೀವು ತರಬೇತಿಯನ್ನು ಪಡೆದುಕೊಳ್ಳಲು ನೀವು ಎಷ್ಟು ವಯಸ್ಸಿನವರಾಗಿರಬೇಕು?

13 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಾವು ತರಬೇತಿಯನ್ನು ಶಿಫರಸು ಮಾಡುತ್ತೇವೆ. ನೀವು ಪ್ರಯೋಜನ ಪಡೆಯುವವರಿಗಿಂತ ಕಿರಿಯ ಮಗುವನ್ನು ಹೊಂದಿದ್ದೀರಿ ಎಂದು ಭಾವಿಸಿದರೆ, ಎಲ್ಲಾ ರೀತಿಯಿಂದ ಅವರು ಭಾಗವಹಿಸಲು ಅವಕಾಶ ಕೊಡಿ.

ಯಾರಾದರು ತರಬೇತಿ ಪಡೆದುಕೊಳ್ಳಬೇಕೆಂದು ಬಯಸಿ, ಆದರೆ ಇಮೇಲ್ ವಿಳಾಸ ವಿಲ್ಲದಿದ್ದರೆ ಏನು ಮಾಡುವುದು?

ಗುಂಪಿನಲ್ಲಿರುವ ಕನಿಷ್ಠ ಒಬ್ಬ ವ್ಯಕ್ತಿಯು ಇಮೇಲ್ ವಿಳಾಸವನ್ನು ಹೊಂದಿರಬೇಕು, ಹೀಗೆ ಅವರು ವೆಬ್ ಸೈಟ್ ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳನ್ನು ನೋಡಲು ಲಾಗಿನ್ ಆಗಬಹುದು. ಗುಂಪಿನೊಂದಿಗಿರುವ ಭಾಗಿಗಳು ಮಾದ್ಯಮವನ್ನು ವೀಕ್ಷಿಸುವವರು ಗುಂಪನ್ನು ಪ್ರಾರಂಭಿಸಲು ಲಾಗಿನ್ ಮಾಡುವದಕ್ಕಾಗಿ ಇಮೇಲ್ ವಿಳಾಸದ ಅಗತ್ಯವಿರುವದಿಲ್ಲ.

ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವದಕ್ಕಿಂತ ಮುಂಚಿತವಾಗಿ ನಾನು ಪಾಠಗಳನ್ನು ಮೊದಲೇ ವೀಕ್ಷಿಸುವದು ಹೇಗೆ?

"ಅವಲೋಕನ" ವಿಭಾಗವನ್ನು ಪರಿಶೀಲಿಸಿ. ಇದು ಪರಿಕಲ್ಪನೆಗಳು, ಸಾಧನಗಳನ್ನು ಮತ್ತು ಪ್ರತಿ ಅಧಿವೇಶನಕ್ಕೆ ನಿಮ್ಮ ಗುಂಪು ಯಾವ ಅಭ್ಯಾಸವನ್ನು ಮಾಡುತ್ತದೆ ಎಂಬ ಮುಖ್ಯಾಂಶಗಳನ್ನು ತೋರಿಸುತ್ತದೆ.

ತರಬೇತಿಯ ವಿಷಯ ಯಾವುದು?

ನೀವು ಅನುಕ್ರಮಣಿಕೆಯ ಭಾಗದಲ್ಲಿ ವಿಷಯಗಳ ಹೊರನೋಟವನ್ನು ನೋಡಬಹುದು, ಅಥವಾ ಮಾರ್ಗದರ್ಶಿ ಪುಸ್ತಕವನ್ನು ಡೌನ್ ಲೋಡ್ ಮಾಡಿ ಕೋರ್ಸಿನ ವಿಷಯಗಳನ್ನು ವಿಮರ್ಶಿಸಬಹುದು, ಅಥವಾ ಲಾಗಿನ್ ಆಗಿ ಗುಂಪನ್ನು ಪ್ರಾರಂಭಿಸಿ ಆದರೆ ಅಧಿವೇಶನದ ಮೊದಲ ಪುಟದಲ್ಲಿ "ಅಧಿವೇಶನವನ್ನು ಅನ್ವೇಷಣೆ" ಎಂಬುದನ್ನು ಆಯ್ಕೆಮಾಡಿ. ಪೂರ್ಣಗೊಳಿಸಿ ಎಂದು ಗುರುತಿಸದೆ ಕೋರ್ಸಿನ ವಿಷಯಗಳನ್ನು ನೋಡಲು ಇದು ನಿಮಗೆ ಅವಕಾಶ ಕೊಡುತ್ತದೆ.

ತರಬೇತಿಗಿಂತ ಮುಂಚಿತವಾಗಿ ಕೈಪಿಡಿಯ (ಮಾರ್ಗದರ್ಶಿ ಪುಸ್ತಕ) ಪ್ರತಿಗಳನ್ನು ಮಾಡಲು ನಾನು ಬಯಸುತ್ತೇನೆ. ನಾನು ಇದನ್ನು ಮಾಡುವದು ಹೇಗೆ?

ಪ್ರತಿಯೊಂದು ಪುಟದ ಮೇಲಿರುವ "ಕುರಿತು" ಟ್ಯಾಬ್ ಕ್ಲಿಕ್ ಮಾಡುವದರ ಮೂಲಕ ಮಾರ್ಗದರ್ಶಿ ಪುಸ್ತಕವನ್ನು ಕಂಡುಕೊಳ್ಳಬಹುದು.

ನಾನು ಆಕಸ್ಮಿಕವಾಗಿ ಮುಂದಿನ ಬಟನ್ ಒತ್ತಿ ಮತ್ತು ನಾನು ಹಿಂತಿರುಗಿ ಮತ್ತೆ ವಿಡಿಯೋವನ್ನು ನೋಡಲು ಬಯಸುತ್ತೇನೆ. ನಾನು ಹೇಗೆ ಹಿಂದಿರುಗುವದು?

ಅಧಿವೇಶನವನ್ನು ಅತ್ತಿತ್ತ ನೋಡಲು ಅಧಿವೇಶನದ ತಳದಲ್ಲಿರುವ "ಹಿಂದಿನ" ಮತ್ತು "ಮುಂದಿನ" ಬಟನ್ ಉಪಯೋಗಿಸಿ. ಡ್ಯಾಶ್ ಬೋರ್ಡ್ ನಿಂದ ಗುಂಪಿನ ಅಧಿವೇಶನದ ಸಂಖ್ಯೆಯನ್ನು ಕ್ಲಿಕ್ ಮಾಡಿ ನೇರವಾಗಿ ಆ ಅಧಿವೇಶನಕ್ಕೆ ಹೋಗಿ.

ಡಿ.ಎಮ್.ಎಮ್ ಅಥವಾ ಸಿ.ಪಿ.ಎಮ್ ಅನೇಕ ತರಬೇತುದಾರರಿದ್ದಾರೆ, ಹಾಗಾದರೆ ಜುಮ್ ಯಾಕೆ ಅಗತ್ಯವಾಗಿದೆ?

ಆನ್ ಲೈನ್ ತರಬೇತಿಗಿಂತ ನೇರ ತರಬೇತಿಯು ಒಳ್ಳೆಯದು. ಆನ್ ಲೈನ್ ತರಬೇತಿಯು ಎಂದಿಗೂ ನೇರ ತರಬೇತಿಯನ್ನು ಸ್ಥಳಾಂತರಿಸಬಾರದು. ಅನಾದೃಷ್ಟವಾಗಿ ಪ್ರವೇಶ, ಅರಿವು, ಲಭ್ಯತೆ, ವೇಳಾಪಟ್ಟಿ ಮಿತಗಳಿಂದ ಮತ್ತು ಇತರ ಹಲವು ಕಾರಣಗಳ ನಿಮಿತ್ತ ಅನೇಕ ಜನರು ನೇರ ತರಬೇತಿಗೆ ಅವಕಾಶವನ್ನು ಹೊಂದದೆ ಹೋಗಿದ್ದಾರೆ. ಇಂಥ ಜನರಿಗೆ ಜುಮ್ ಉನ್ನತ ಗುಣಮಟ್ಟದ ಪ್ರವೇಶ ಹಂತದ ಬದಲಿಯಾಗಿ ಪ್ರಯತ್ನಿಸುತ್ತದೆ. ಇತರರಿಂದ ಲಭ್ಯವಾಗಿರುವ ನೇರ ತರಬೇತಿಯ ಅನೇಕ ವಿಧಾನಗಳನ್ನು ಇದು ಉಪಯೋಗಿಸುತ್ತದೆ. ಒಮ್ಮೆ ಒಬ್ಬ ವ್ಯಕ್ತಿಯು ಜುಮ್ ತರಬೇತಿಯನ್ನು ಹೊಂದಿಕೊಂಡರೆ, ಅವರು ಸುಲಭವಾಗಿ ತಮ್ಮ ಸ್ವಂತ ಗುಂಪನ್ನು ಪ್ರಾರಂಭಿಸಿ ಇತರರು ಜುಮ್ ಉಪಯೋಗಿಸುವಂತೆ ತರಬೇತಿ ಕೊಡಬಹುದು. ಇದು ಶಿಷ್ಯರನ್ನಾಗಿ ಮಾಡುವ ತತ್ವಗಳನ್ನು ಹೆಚ್ಚಿಸುವದಕ್ಕಾಗಿ ಬಲವಾದ ಅವಕಾಶವಾಗಿದೆ.

ಜುಮ್ ನ ನಂಬಿಕೆಯ ಹೇಳಿಕೆ ಯಾವುದು?

ಜುಮ್ ಒಂದು ಸಂಸ್ಥೆಯಿಂದ ನಡೆಸಲಾಗುತ್ತಿಲ್ಲ, ಆದುದರಿಂದ ಅಧಿಕೃತ ನಂಬಿಕೆಯ ಹೇಳಿಕೆಯು ಇಲ್ಲ. ಭಾಗಿಯಾಗಿರುವ ನಾವೆಲ್ಲರೂ ಹೇಗಿದ್ದರೂ ಲಾಸೆನ್ನೆ ಒಡಂಬಡಿಕೆ ಒಪ್ಪಿಕೊಳ್ಳುತ್ತೇವೆ. Read the Covenant

ತರಬೇತಿಯನ್ನು ನನ್ನಷ್ಟಕ್ಕೆ ನಾನು ಮಾಡಬಹುದೋ?

ಇಲ್ಲ. ಇತರೆ ಅಭ್ಯರ್ಥಿಗಳು ಪೂರ್ಣಗೊಳಿಸಬೇಕಾದ ಮುಖ್ಯ ತರಬೇತಿ ಚಟುವಟಿಕೆಗಳು ಮತ್ತು ಅಭ್ಯಾಸದ ಅಧಿವೇಶನಗಳನ್ನು ಹೊಂದಿವೆ. ಪ್ರತಿಯೊಂದು ಅಧಿವೇಶನದಲ್ಲಿ ಕನಿಷ್ಠ 3-4 ಜನರು ಅಗತ್ಯವಾಗಿದ್ದಾರೆ, ಅಥವಾ ನೀವು ಪೂರ್ಣ ತರಬೇತಿಯನ್ನು ಅನುಭವಿಸಲು ಆಗುವದಿಲ್ಲ.

ತರಬೇತಿಯು ಯಾರಿಗೆ ಸೂಕ್ತವಾಗಿದೆ?

ಕ್ರಿಸ್ತನನ್ನು ಹಿಂಬಾಲಿಸುವ ಓದಲು ಸಾಧ್ಯವಾಗುವ 13 ವಯಸ್ಸಿನವರು ಅಥವಾ ದೊಡ್ಡವರಿಗೆ ತರಬೇತಿಯು ಸೂಕ್ತವಾಗಿದೆ. ಮುಂಬರುವ ದಿವಸಗಳಲ್ಲಿ ಅನಕ್ಷರಸ್ಥರಿಗೆ ಸೂಕ್ತವಾಗಿರುವ ಆವೃತ್ತಿಯನ್ನು ಉಂಟುಮಾಡಬಹುದು ಆದರೆ ಇದು ಆವೃತ್ತಿಯಲ್ಲ. ಈ ನಿಯಮಗಳಿಗೆ ಸರಿಹೊಂದುವ ಪ್ರತಿಯೊಬ್ಬ ವ್ಯಕ್ತಿಯು ತರಬೇತಿಯನ್ನು ತೆಗೆದುಕೊಳ್ಳಬಹುದೆಂದು ನಾವು ನಂಬುತ್ತೇವೆ.

ಜುಮ್ ಮಾಲೀಕರು ಯಾರು?

ಜುಮ್ ಪ್ರಾಜೆಕ್ಟ್ "ನಡೆಸುತ್ತಿರುವ" ಯಾವ ಸಂಸ್ಥೆಯು ಇಲ್ಲ ಮತ್ತು ಈ ಪ್ರಾಜೆಕ್ಟ್ ಒಂದು ಸಂಸ್ಥೆಯಲ್ಲ. ಭೂಮಿಯ ಮೇಲಿರುವ ಪ್ರತಿಯೊಂದು ಗುಂಪಿನ ಜನರನ್ನು ಶಿಷ್ಯರನ್ನಾಗಿ ಮಾಡುವ ಮತ್ತು ಪರಲೋಕದಲ್ಲಿ ಆತನ ಚಿತ್ತವಿರುವಂತೆ ಭೂಲೋಕದಲ್ಲಿ ನೆರವೇರುವವರೆಗೆ ಪ್ರತಿಯೊಂದು ಸ್ಥಳಕ್ಕೆ ಆತನ ರಾಜ್ಯವನ್ನು ವಿಸ್ತರಿಸುವ ಕ್ರಿಸ್ತನ ಆಜ್ಞೆಯನ್ನು ನೆರವೇರಿಸಲು ಹೃದಯವನ್ನು ಹೊಂದಿರುವ ಜನರ ಸಮ್ಮಿಶ್ರವಾಗಿದೆ. ಈ ಪ್ರಾಜೆಕ್ಟ್ ಗಾಗಿ ಆಲೋಚನೆಯು ಜೊನಾಥನ್ ಪ್ರಾಜೆಕ್ಟ್ ನಾಯಕತ್ವದ ಕೂಟದಲ್ಲಿ ಉದ್ಭವಿಸಿತು ಆದರೆ ಆ ಗುಂಪಿಗಿಂತ ಇದು ಮಿಗಿಲಾಗಿ ಹರಡಿದೆ. ಜೊನಾಥನ್ ಪ್ರಾಜೆಕ್ಟ್ ಲೋಕದೆಲ್ಲೆಡೆ ಶಿಷ್ಯರನ್ನಾಗಿ ಮಾಡಲು ಸಮರ್ಪಿಸಿಕೊಂಡಿರುವ ಜನರ ಒಕ್ಕೂಟವಾಗಿದೆ.

ಯೋಜನೆ ಮಾಡಿರುವ ಮೂರು ಹಂತಗಳು ಯಾವುವು?

ಹಂತ 1:
ಮೊದಲ ಹಂತವು ಸಂಯುಕ್ತ ರಾಷ್ಟ್ರಗಳು ಮತ್ತು ಆಂಗ್ಲ ಭಾಷೆಯನ್ನು ಕೇಂದ್ರಿಕರಿಸುತ್ತದೆ. ದೇಶದ ಪ್ರತಿ 5,000 ಜನರಿಗೆ ನಾಲ್ಕರಿಂದ ಹನ್ನೆರಡು ತರಬೇತಿ ಗುಂಪನ್ನು ವೇಗವರ್ಧಿಸುವದು ಆರಂಭಿಕ ಗುರಿಯಾಗಿದೆ. ಪ್ರತಿಯೊಂದು ತರಬೇತಿ ಗುಂಪುಗಳಿಗೆ ಮೊದಲ ಎರಡು ತಲೆಮಾರಿನ ಸಭೆಗಳನ್ನು ಪ್ರಾರಂಭಿಸಲು ಸವಾಲು ಹಾಕಲಾಗುವದು, ಅದು ಸಹ ಪುನರುತ್ಪತ್ತಿ ಮಾಡಬೇಕು. ಸಂಯುಕ್ತ ರಾಷ್ಟ್ರಗಳಿಗೆ 65,000 ಆಂಗ್ಲ ಭಾಷೆಯ ಜುಮ್ ಗುಂಪುಗಳನ್ನು ಮತ್ತು 130,000 ಸಭೆಗಳನ್ನು ಪ್ರಾರಂಭಿಸುವ ಗುರಿಯಾಗಿದೆ.

ಹಂತ 2:
ಎರಡನೇ ಹಂತವು ಈ ಹಂತ 1 ಸಭೆಗಳಿಗೆ ಪುನರುತ್ಪತ್ತಿ ಪ್ರಕ್ರಿಯೆಯ ಮೂಲಕ ತರಬೇತಿ ನೀಡುವುದರ ಜೊತೆಗೆ ವಿಶ್ವದ ಇತರ ಪ್ರಮುಖ ಭಾಷೆಗಳಲ್ಲಿ ಯೋಜನೆಯನ್ನು ತಲುಪಿಸಲು ಕೇಂದ್ರೀಕರಿಸುತ್ತದೆ. ಈ ಕೆಳಗಿನ ಭಾಷೆಗಳಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ: ಅಂಹರಿಕ್, ಅರೇಬಿಕ್, ಬಂಗಾಳಿ, ಭೋಜ್ಪುರಿ, ಬರ್ಮೀಸ್, ಚೈನೀಸ್ (ಮ್ಯಾಂಡರಿನ್), ಚೈನೀಸ್ (ಕ್ಯಾಂಟೋನೀಸ್), ಫಾರ್ಸಿ, ಫ್ರೆಂಚ್, ಜರ್ಮನ್, ಗುಜರಾತಿ, ಹೌಸಾ, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಜಪಾನೀಸ್, ಕನ್ನಡ, ಕೊರಿಯನ್ , ಕುರ್ದಿಷ್, ಲಾವೊ, ಮೈಥಿಲಿ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ (ಪೂರ್ವ), ಪಂಜಾಬಿ (ಪಾಶ್ಚಿಮಾತ್ಯ), ಪೋರ್ಚುಗೀಸ್, ರಷ್ಯನ್, ಸೊಮಾಲಿ, ಸ್ಪ್ಯಾನಿಷ್, ಸ್ವಹಿಲಿ, ತಮಿಳು, ತೆಲುಗು, ಥಾಯ್, ಟರ್ಕಿಶ್, ಉರ್ದು, ವಿಯೆಟ್ನಾಮೀಸ್, ಯೊರುಬಾ.

ಹಂತ 3:
ಪ್ರತಿ ಜನರ ಗುಂಪಿನಲ್ಲಿ ಪ್ರತಿಯೊಂದು ಸ್ಥಳದಲ್ಲೂ ಶಿಷ್ಯರನ್ನು ಮಾಡುವ ದರ್ಶನದಿಂದ ಮೂರನೆ ಹಂತವು ಹಂತ 1 ಮತ್ತು ಹಂತ 2 ಸಭೆಗಳನ್ನು ಜಾಗತಿಕವಾಗಿ ಸಜ್ಜುಗೊಳಿಸಲು ಕೇಂದ್ರಿಕರಿಸುತ್ತದೆ. ನಮ್ಮ ಪೀಳಿಗೆಯಲ್ಲಿ ಶಿಷ್ಯರನ್ನು ಹೆಚ್ಚಿಸುವದರ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಲು ಜುಮ್ ಪ್ರಾಜೆಕ್ಟ್ ಅಸ್ತಿತ್ವದಲ್ಲಿದೆ. ನಮ್ಮ ಧ್ಯೇಯವನ್ನು ವೇಗಗೊಳಿಸಲು ನಾವು ಭೂಪಟದ ಪರಿಹಾರವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ತಂಡಗಳು ಜುಮ್ ತರಬೇತಿ ಮತ್ತು ಯು.ಎಸ್ ಹೊರಗಿನ ಪ್ರತಿ 50,000 ಜನರಲ್ಲಿ ಎರಡು ಸರಳ ಸಭೆಗಳ ಗುರಿಯ ಕಡೆಗೆ ಕಾರ್ಯತಂತ್ರವಾಗಿ ಕೆಲಸ ಮಾಡಲು ಅನುವು ಮಾಡಿ ಕೊಡುತ್ತದೆ.


ಇದನ್ನು ಜುಮ್ ಎಂದು ಯಾಕೆ ಕರೆಯುವರು?

ಜುಮ್ ಎಂದರೆ ಗ್ರೀಕ್ ನಲ್ಲಿ ಕಿಣ್ವ ಎಂಬುದೇ. ಮತ್ತಾಯ 13:33 ರಲ್ಲಿ ಯೇಸು ಹೀಗೆ ಹೇಳಿದನು, “ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” ಸಾಮಾನ್ಯ ಜನರು ಸಾಮಾನ್ಯ ಸಂಪನ್ಮೂಲಗಳನ್ನು ಉಪಯೋಗಿಸಿ, ದೇವರ ರಾಜ್ಯಕ್ಕಾಗಿ ಸಾಧಾರಣವಾದ ಪ್ರಭಾವವನ್ನು ಹೊಂದಬಹುದೆಂದು ಇದು ದೃಷ್ಟಾಂತಪಡಿಸುತ್ತದೆ. ಪ್ರತಯೊಬ್ಬ ನೆರೆಯವನನ್ನು ಸಂಧಿಸಲು ಸಾಮಾನ್ಯ ವಿಶ್ವಾಸಿಗಳನ್ನು ಸಿದ್ಧಪಡಿಸಲು ಮತ್ತು ಬಲಪಡಿಸಲು ಜುಮ್ ಉದ್ಧೇಶಿಸುತ್ತದೆ.

ತರಬೇತಿಯನ್ನು ಯಾವ ಭಾಷೆಗಳಿಗೆ ಅನುವಾದಿಸಲಾಗುತ್ತದೆ?

ಈ ಯೋಜನೆಯು ಈ ಕೆಳಗಿನ ಭಾಷೆಗಳಲ್ಲಿ ಪ್ರಾರಂಭವಾಗಲಿದೆ ಮತ್ತು ತರಬೇತಿ ಮತ್ತು ಸಾಧನಗಳನ್ನು ಇತರೆ ಭಾಷೆಗಳಿಗೆ ಭಾಷಾಂತರಿಸಲು ಬಯಸುವವರಿಗೆ ಲಭ್ಯವಾಗಲಿದೆ: ಅಂಹರಿಕ್, ಅರೇಬಿಕ್, ಬಂಗಾಳಿ, ಭೋಜ್ಪುರಿ, ಬರ್ಮೀಸ್, ಚೈನೀಸ್ (ಮ್ಯಾಂಡರಿನ್), ಚೈನೀಸ್ (ಕ್ಯಾಂಟೋನೀಸ್), ಫಾರ್ಸಿ, ಫ್ರೆಂಚ್, ಜರ್ಮನ್, ಗುಜರಾತಿ, ಹೌಸಾ, ಹಿಂದಿ, ಇಂಡೋನೇಷ್ಯಾ, ಇಟಾಲಿಯನ್, ಜಪಾನೀಸ್, ಕನ್ನಡ, ಕೊರಿಯನ್, ಕುರ್ದಿಷ್, ಲಾವೊ, ಮೈಥಿಲಿ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ (ಪೂರ್ವ), ಪಂಜಾಬಿ (ಪಶ್ಚಿಮ), ಪೋರ್ಚುಗೀಸ್, ರಷ್ಯನ್, ಸೊಮಾಲಿ, ಸ್ಪ್ಯಾನಿಷ್, ಸ್ವಹಿಲಿ, ತಮಿಳು, ತೆಲುಗು, ಥಾಯ್, ಟರ್ಕಿಶ್, ಉರ್ದು, ವಿಯೆಟ್ನಾಮೀಸ್, ಯೊರುಬಾ.ಹೆಚ್ಚು ನವೀಕರಿಸಿದ ಪ್ರಗತಿಯನ್ನು ನೋಡಲು ಇದಕ್ಕೆ ಹೋಗಿಭಾಷಾ ಅನುವಾದ ಪ್ರಗತಿ.

ತರಬೇತುದಾರರಿಂದ ಪ್ರಾರಂಭಿಸಿದ ಗುಂಪುಗಳು ಹೇಗೆ ಜೋಡಣೆ ಅಥವಾ ಸಂಘಟಿತವಾಗಿವೆ?

ಇದು ಆಧಾರಗೊಳ್ಳುತ್ತದೆ. ಒಂದು ವೇಳೆ ತರಬೇತಿ ಪಡೆದುಕೊಳ್ಳುವವರು ಒಂದು ನಿರ್ಧಿಷ್ಟ ಸಭೆ ಅಥವಾ ಪಂಗಡ ಅಥವಾ ಜಾಲಬಂಧದಿಂದ ಬಂದಿದ್ದರೆ, ಹೊಸದಾಗಿ ರೂಪಿತವಾದ ಗುಂಪುಗಳಿಗೆ ಅತಿ ಸಾಮಾನ್ಯ ಸಂಗತಿಯೆಂದರೆ ಈಗಾಗಲೇ ಇರುವ ಸಭೆಗಳು, ಪಂಗಡ ಅಥವಾ ಜಾಲಬಂಧದೊಂದಿಗೆ ಜೋಡಣೆಯಾಗಿರುವದೇ ಆಗಿದೆ. ಒಂದು ವೇಳೆ ಬಯಸಿದರೆ ಪ್ರಾರಂಭಿಸುವ ಗುಂಪುಗಳಿಂದ ಹೊಸ ಜಾಲಬಂಧವನ್ನು ಉಂಟುಮಾಡಬಹುದು. ಹೊಸ ಗುಂಪುಗಳಲ್ಲಿ ಮೂರನೆಯ ಬದಲಿಯೆಂದರೆ ಈಗಾಗಲೇ ಅಸ್ತಿತ್ವದಲ್ಲಿರುವ ಸರಳ ಸಭೆಗಳ ಜಾಲಬಂಧಗಳೊಂದಿಗೆ ಸೇರಿಕೊಳ್ಳುವದಾಗಿದೆ. ಜುಮ್ ಅಭಿವೃದ್ಧಿಪಡಿಸಲು ಭಾಗಿಯಾಗಿರುವ ಅನೇಕ ಜನರು ಇಂಥ ಜಾಲಬಂಧಗಳಿಂದ ಬರುತ್ತಾರೆ. ಆದುದರಿಂದ ಬಯಸಿದರೆ ಇದನ್ನು ಏರ್ಪಡಿಸಲು ನಾವು ಇದಕ್ಕೆ ಸಹಾಯ ಮಾಡಬಹುದು.

ನನ್ನ ಮೂರು ತಿಂಗಳ ಯೋಜನೆಯನ್ನು ಯಾರು ನೋಡಬಹುದು?

ನಿಮ್ಮ ಗುಂಪಿಗೆ ನೀವು ಇದನ್ನು ಜೋಡಿಸದಿದ್ದರೆ ನೀವು ಮಾತ್ರ ನಿಮ್ಮ ಯೋಜನೆಯನ್ನು ಮಾಡಬಹುದು, ನಂತರ ನಿಮ್ಮ ಮೂರು ತಿಂಗಳ ಯೋಜನೆಯನ್ನು ಗುಂಪಿನ ನಾಯಕರು ಮತ್ತು ಸಹನಾಯಕರು ನೋಡಲು ಸಾಧ್ಯವಾಗುತ್ತದೆ. ನಿಮ್ಮ ಯೋಜನೆಯು ನಿಮ್ಮ ತರಬೇತುದಾರನಿಗೂ ಸಹ ಕಾಣಿಸುತ್ತದೆ. ನಿಮಗೆ ತರಬೇತುದಾರನು ಬೇಡವಾದರೆ ನಿಮ್ಮ ಪ್ರೊಫೈಲ್ ಗೆ ಹೋಗಿ ತರಬೇತುದಾರರ "ತರಬೇತುದಾರನನ್ನು ನಿರಾಕರಿಸು" ಎಂಬುದಕ್ಕೆ ಆದ್ಯತೆಯನ್ನು ಹೊಂದಿಸಿ.

ನನ್ನ ಮೂರು-ತಿಂಗಳ ಯೋಜನೆಯನ್ನು ಮುದ್ರಿಸಬಹುದಾ?

ಹೌದು, ನೀವು ನಿಮ್ಮ ಯೋಜನೆಯನ್ನು ಮೊದಲು ಉಳಿಸಿದ್ದೀರೆಂದು ಖಚಿತಪಡಿಸಿಕೊಳ್ಳಿ, ನಂತರ ನಿಮ್ಮ ಯೋಜನೆಯ ಕೆಳಭಾಗಕ್ಕೆ ಹೋಗಿ "ಉಳಿಸಿದ ಯೋಜನೆಯನ್ನು ಮುದ್ರಿಸು" ಬಟನ್ ಕ್ಲಿಕ್ ಮಾಡಿ.

ನನ್ನ ಮೂರು-ತಿಂಗಳ ಯೋಜನೆಯನ್ನು ನಂತರ ತಿದ್ದಬಹುದಾ?

ಹೌದು, ನೀವು ಯಾವುದೇ ಸಮಯದಲ್ಲಿ ನಿಮ್ಮ ಯೋಜನೆಗೆ ಹಿಂದಿರುಗಿ ಅದನ್ನು ತಿದ್ದಬಹುದು. ನಿಮ್ಮ ಯೋಜನೆಯ ಕೆಳಭಾಗದಲ್ಲಿ "ಉಳಿಸು" ಕ್ಲಿಕ್ ಮಾಡಬೇಕೆಂದು ಖಚಿತಪಡಿಸಿಕೊಳ್ಳಿ.

ನನ್ನ ಗುಂಪಿನಲ್ಲಿರುವ ಜನರೊಂದಿಗೆ ಚಾಟ್ ಮಾಡಲು ಜುಮ್ ನಮಗೆ ಒಂದು ಮಾರ್ಗವನ್ನು ನೀಡುತ್ತದೆಯೇ?

ಈ ಸಮಯದಲ್ಲಿ ಅಲ್ಲ. ನಿಮ್ಮ ಗುಂಪಿನ ಪ್ರತಿಯೊಬ್ಬ ಸದಸ್ಯರು ಲಾಗಿನ್ ಉಂಟು ಮಾಡಿ ನಿಮ್ಮ ಜುಮ್ ಗುಂಪಿಗೆ ಸೇರಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಈ ರೀತಿಯಾಗಿ ಪ್ರತಿಯೊಬ್ಬ ಸದಸ್ಯರಿಗೆ ಒಬ್ಬರು ಬಯಸಿದಾಗ ಎಲ್ಲಾ ಪುಸ್ತಕಗಳಿಗೆ ಪ್ರವೇಶವಿರುತ್ತದೆ. ಗುಂಪಿನ ಮುಂದಿನ ಸಂಪರ್ಕಕ್ಕಾಗಿ ಯಾವುದೇ ಸಂದೇಶದ ಮಾದರಿಯನ್ನು (ಐ ಮೆಸೇಜ್, ವಾಟ್ಸಪ್, ಫೇಸ್ ಬುಕ್ ಗುಂಪು ಇತ್ಯಾದಿ) ಉಪಯೋಗಿಸಬಹುದು.


ಜುಮ್ ಪ್ರಾಜೆಕ್ಟ್ ಗುರಿಗಳು:

ಜುಮ್ ಎಂದರೆ ಗ್ರೀಕ್ ನಲ್ಲಿ ಕಿಣ್ವ ಎಂಬುದೇ. ಮತ್ತಾಯ 13:33 ರಲ್ಲಿ ಯೇಸು ಹೀಗೆ ಹೇಳಿದನು, "“ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” ಸಾಮಾನ್ಯ ಜನರು ಸಾಮಾನ್ಯ ಸಂಪನ್ಮೂಲಗಳನ್ನು ಉಪಯೋಗಿಸಿ, ದೇವರ ರಾಜ್ಯಕ್ಕಾಗಿ ಸಾಧಾರಣವಾದ ಪ್ರಭಾವವನ್ನು ಹೊಂದಬಹುದೆಂದು ಇದು ದೃಷ್ಟಾಂತಪಡಿಸುತ್ತದೆ. ನಮ್ಮ ತಲೆಮಾರಿನಲ್ಲಿ ಶಿಷ್ಯರನ್ನು ಹೆಚ್ಚಿಸುವದರ ಮೂಲಕ ಜಗತ್ತನ್ನು ಆವರಿಸಲು ಸಾಮಾನ್ಯ ವಿಶ್ವಾಸಿಗಳನ್ನು ಸಿದ್ಧಪಡಿಸಲು ಬಲಪಡಿಸಲು ಜುಮ್ ಉದ್ಧೇಶಿಸುತ್ತದೆ.

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress