ಜೂಮ್ ತರಬೇತಿ
ಆತನ ಮಹಾ ಆದೇಶಕ್ಕೆ ಹೇಗೆ ವಿಧೇಯರಾಗಬೇಕೆಂದು ಮತ್ತು ಹೇಗೆ ಹೆಚ್ಚಿಸುವ ಶಿಷ್ಯರನ್ನು ಮಾಡಬೇಕೆಂದು ಕಲಿಯಲು ಯೇಸುವನ್ನು ಹಿಂಬಾಲಿಸುವ ಚಿಕ್ಕ ಗುಂಪುಗಳಿಗಾಗಿ ಜುಮ್ ತರಬೇತಿಯು ಆನ್ ಲೈನ್ ಮತ್ತು ಇನ್ ಲೈಫ್ ಕಲಿಯುವ ಅನುಭವವನ್ನು ರೂಪಿಸಲಾಗಿದೆ.
ಜುಮ್ 10 ಅಧಿವೇಶನಗಳನ್ನು ಒಳಗೊಂಡಿದೆ, ಪ್ರತಿಯೊಂದು 2 ಗಂಟೆಗಳು:
ಶಿಷ್ಯರನ್ನು ಹೆಚ್ಚಿಸುವ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಗುಂಪಿಗೆ ಸಹಾಯ ಮಾಡಲು ವೀಡಿಯೋ ಮತ್ತು ಆಡಿಯೋ.
ಯಾವ ವಿಷಯವನ್ನು ಹಂಚಿಕೊಳ್ಳಲಾಗಿದೆ ಎಂದು ನಿಮ್ಮ ಗುಂಪು ಆಲೋಚಿಸುವದಕ್ಕಾಗಿ ಗುಂಪಿನ ಚರ್ಚೆಗಳು.
ನೀವು ಕಲಿಯುತ್ತಿರುವ ಸಂಗತಿಗಳನ್ನು ಅಭ್ಯಾಸಕ್ಕೆ ಹಾಕಲು ನಿಮ್ಮ ಗುಂಪಿಗೆ ಸಹಾಯ ಮಾಡುವದಕ್ಕಾಗಿ ಸರಳ ಚಟುವಟಿಕೆಗಳು.
ಅಧಿವೇಶನಗಳ ನಡುವೆ ನಿಮ್ಮ ಗುಂಪು ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವದಕ್ಕಾಗಿ ಅಧಿವೇಶನದ ಸವಾಲುಗಳು.