ಕೆಳಗಿನ ಭಾಗಗಳು, ಯೇಸುವಿನ ಹಿಂಬಾಲಕರು (ಶಿಷ್ಯನು) ಎಂದರೆ ಏನೆಂದು ನಿಮಗೆ ಕಲಿಸುತ್ತದೆ
ನೋಂದಾಯಿಸಿ
ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
ದೊಡ್ಡ ಪ್ರಭಾವ ಬೀರಲು ಸರಳ ಕೆಲಸಗಳನ್ನು ಮಾಡುವ ಸಾಮಾನ್ಯ ಜನರನ್ನು ದೇವರು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನೀವು ನೋಡುತ್ತೀರಿ.
ಶಿಷ್ಯನು ಮತ್ತು ಸಭೆಯ ಸರಳ ನಿರೂಪಣೆ
ಶಿಷ್ಯರಾಗಿರುವುದು, ಶಿಷ್ಯರನ್ನಾಗಿ ಮಾಡುವುದು ಮತ್ತು ಸಭೆ ಎಂದರೇನು ಎಂಬ ಮುಖ್ಯಾಂಶಗಳನ್ನು ಕಂಡುಕೊಳ್ಳಿರಿ.
ದರ್ಶನವನ್ನು ತಿಳಿಸುವುದು ಅತಿಶ್ರೇಷ್ಠವಾದ ಆಶೀರ್ವಾದವಾಗಿದೆ
ಯೇಸುವಿನ ಒಬ್ಬ ಹಿಂಬಾಲಕನನ್ನು ಮಾತ್ರವಲ್ಲದೆ ಮುಂದಿನ ತಲೆಮಾರುಗಳವರೆಗೆ ಹೆಚ್ಚಿಸುವ ಸಂಪೂರ್ಣ ಆತ್ಮೀಕ ಕುಟುಂಬಗಳನ್ನು ಮಾಡುವ ಸರಳ ಮಾದರಿಯನ್ನು ಕಲಿಯಿರಿ.
ಗ್ರಾಹಕ ಮತ್ತು ಉತ್ಪಾದಕರ ಜೀವನಶೈಲಿ
ದೇವರು ದಿನನಿತ್ಯ ಹಿಂಬಾಲಿಸುವವರನ್ನು ಯೇಸುವಿನ ಹಾಗೆ ಮಾಡಲು ನಾಲ್ಕು ಮುಖ್ಯ ಮಾರ್ಗಗಳನ್ನು ನೀವು ಕಂಡುಕೊಳ್ಳುವಿರಿ.
ಆತ್ಮೀಕ ಉಸಿರಾಟ ಎಂದರೆ ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದು
ಶಿಷ್ಯರಾಗಿರುವುದು ಎಂದರೆ ನಾವು ದೇವರಿಂದ ಕೇಳಿಸಿಕೊಳ್ಳುತ್ತೇವೆ ಮತ್ತು ನಾವು ದೇವರಿಗೆ ವಿಧೇಯರಾಗುತ್ತೇವೆ.
ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಎಷ್ಟು ಸುಲಭ ಎಂದು ನೋಡಿರಿ.
ಬಿ.ಎಲ್.ಇ.ಇ.ಎಸ್ ಪ್ರಾರ್ಥನೆ ಮಾದರಿ
ಇತರರಿಗಾಗಿ ಪ್ರಾರ್ಥಿಸುವ ವಿಧಾನಗಳನ್ನು ನಿಮಗೆ ನೆನಪಿಸಲು ಸರಳ ರೀತಿಯನ್ನು ಅಭ್ಯಾಸ ಮಾಡಿರಿ.
ಎಸ್.ಓ.ಎ.ಪಿ.ಎಸ್. ಸತ್ಯವೇದವನ್ನು ಓದುವುದು
ದೈನಂದಿನ ಸತ್ಯವೇದ ಅಧ್ಯಯನಕ್ಕಾಗಿ ಈ ಸಾಧನವು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು, ವಿಧೇಯರಾಗಲು ಮತ್ತು ಸಾರಲು ಸಹಾಯ ಮಾಡುತ್ತದೆ.
ನಂಬಿಗಸ್ತಿಕೆಯು ತಿಳುವಳಿಕೆಗಿಂತ ಉತ್ತಮ
ಶಿಷ್ಯರಿಗೆ ಏನು ತಿಳಿದಿದೆ ಎಂಬುದು ಪ್ರಾಮುಖ್ಯ - ಆದರೆ ಅವರು ತಿಳಿದಿರುವ ವಿಷಯದಿಂದ ಏನು ಮಾಡುತ್ತಾರೆ ಎಂಬುದು ಇನ್ನು ಹೆಚ್ಚು ಪ್ರಾಮುಖ್ಯವಾಗಿದೆ.
3/3 ಗುಂಪಿನ ಕೂಟದ ಮಾದರಿ
3/3 ಗುಂಪು ಯೇಸುವಿನ ಹಿಂಬಾಲಕರಿಗೆ ಕೂಡಿಬರಲು, ಪ್ರಾರ್ಥಿಸಲು, ಕಲಿಯಲು, ಬೆಳೆಯಲು, ಅನ್ಯೋನ್ಯತೆಗಾಗಿ ಮತ್ತು ಅವರು ಕಲಿತದ್ದಕ್ಕೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅಭ್ಯಾಸ ಮಾಡಲು ಒಂದು ಮಾರ್ಗವಾಗಿದೆ. ಈ ರೀತಿಯಲ್ಲಿ, 3/3 ಗುಂಪು ಕೇವಲ ಒಂದು ಸಣ್ಣ ಗುಂಪು ಅಲ್ಲ ಆದರೆ ಸರಳ ಸಭೆ ಆಗಿದೆ.
ಹೊಣೆಗಾರಿಕೆಯ ಗುಂಪುಗಳು
ಇದು ಒಂದೇ ಲಿಂಗದ ಇಬ್ಬರು ಅಥವಾ ಮೂವರು ಜನರಿಗೆ ವಾರಕ್ಕೊಮ್ಮೆ ಭೇಟಿಯಾಗಲು ಮತ್ತು ಉತ್ತಮವಾಗಿ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪರಸ್ಪರ ಪ್ರೋತ್ಸಾಹಿಸಲು ಮತ್ತು ತಿದ್ದುಪಡಿ ಅಗತ್ಯವಿರುವ ಭಾಗಗಳನ್ನು ತಿಳಿಯಪಡಿಸುವ ಸಾಧನವಾಗಿದೆ.
ಯಾವಾಗಲೂ ಎರಡು ಸಭೆಗಳ ಭಾಗವಾಗಿದೆ
ಹೋಗಿ ಮತ್ತು ಉಳಿದುಕೊಳ್ಳುವ ಮೂಲಕ ಯೇಸುವಿನ ಆಜ್ಞೆಗಳಿಗೆ ಹೇಗೆ ವಿಧೇಯರಾಗಬೇಕೆಂದು ತಿಳಿಯಿರಿ.
ಕರ್ತನ ಭೋಜನ ಮತ್ತು ಅದನ್ನು ನಡೆಸುವುದು ಹೇಗೆ
ಇದು ಯೇಸುವಿನೊಂದಿಗೆ ನಮ್ಮ ನಿಕಟ ಸಂಪರ್ಕ ಮತ್ತು ಪ್ರಸ್ತುತ ಸಂಬಂಧವನ್ನು ಆಚರಿಸಲು ಸರಳವಾದ ಮಾರ್ಗವಾಗಿದೆ. ಆಚರಿಸಲು ಸರಳವಾದ ಮಾರ್ಗವನ್ನು ತಿಳಿಯಿರಿ.
ದೀಕ್ಷಾಸ್ನಾನ ಮತ್ತು ಅದನ್ನು ನಡೆಸುವುದು ಹೇಗೆ
ಯೇಸು ಹೇಳಿದ್ದು, “ಹೋಗಿರಿ ಎಲ್ಲಾ ದೇಶದವರನ್ನು ಶಿಷ್ಯರನ್ನಾಗಿ ಮಾಡಿ, ಅವರನ್ನು ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ…” ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ಕಲಿಯಿರಿ.
ಆತ್ಮೀಕ ಆರ್ಥಿಕತೆ
ದೇವರ ಆರ್ಥಿಕತೆಯು ಲೋಕಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿದುಕೊಳ್ಳಿರಿ. ಈಗಾಗಲೇ ತಮಗೆ ಕೊಡಲ್ಪಟ್ಟವುಗಳಿಗೆ ನಂಬಿಗಸ್ತರಾಗಿರುವವರಿಗೆ ದೇವರು ಇನ್ನು ಹೆಚ್ಚಾಗಿ ಕೊಡುವನು.
ದೇವರರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಪ್ರಾರಂಭಿಸಿ. ಇವು ಸಾಮಾನ್ಯವಾಗಿ ದೇವರು ಹೆಚ್ಚಾಗಿ ಕೆಲಸ ಮಾಡಲು ಬಯಸುವ ಸ್ಥಳಗಳಾಗಿವೆ.
ನಂತರ ಯೇಸು ಅವರ ಬಳಿಗೆ ಬಂದು, "ಆಗ ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.” (ಮತ್ತಾಯ 28:18-20 )
ಮರಿಬಾತುಕೋಳಿ ಶಿಷ್ಯತ್ವ - ತಕ್ಷಣವೇ ನಡೆಸುವುದು
ಮರಿಬಾತುಕೋಳಿಗಳ ಮಾದರಿಯು ಶಿಷ್ಯರನ್ನಾಗಿ-ಮಾಡುವ ವಿಷಯದಲ್ಲಿ ಹೇಗೆ ಕಾರ್ಯ ಮಾಡಬೇಕೆಂದು ತಿಳಿಯಿರಿ
ಪರಿಪಕ್ವವಾಗುತ್ತಿರುವ ಶಿಷ್ಯರಿಗೆ ತರಬೇತಿ ಕಾಲಚಕ್ರ
ತರಬೇತಿ ಕಾಲಚಕ್ರವನ್ನು ಕಲಿಯಿರಿ ಮತ್ತು ಶಿಷ್ಯರನ್ನಾಗಿ ಮಾಡಲು ಅದು ಹೇಗೆ ಅನ್ವಯಿಸುತ್ತದೆ ಎಂಬುದನ್ನು ಪರಿಗಣಿಸಿ.
ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
ಶಿಷ್ಯರನ್ನಾಗಿ ಮಾಡುವುದು ಹೇಗೆ ರೇಖಾತ್ಮಕವಾಗಿರಬೇಕಾಗಿಲ್ಲ ಎಂಬುದನ್ನು ನೋಡಿ. ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳು ಸಂಭವಿಸಬಹುದು.
ಹೆಚ್ಚಿಸುವ ವೇಗವು ಪ್ರಾಮುಖ್ಯವಾಗಿದೆ
ಹೆಚ್ಚಿಸುವುದು ಪ್ರಾಮುಖ್ಯ ಮತ್ತು ತ್ವರಿತವಾಗಿ ಹೆಚ್ಚಿಸುವುದು ಇನ್ನಷ್ಟು ಪ್ರಾಮುಖ್ಯವಾಗುತ್ತದೆ. ವೇಗ ಯಾಕೆ ಮುಖ್ಯವಾದದ್ದು ಎಂದು ನೋಡಿರಿ.
ಸಂಬಂಧಿತ ಉಸ್ತುವಾರಿ - 100 ಮಂದಿಯ ಪಟ್ಟಿ
ನಿಮ್ಮ ಸಂಬಂಧಗಳ ಉತ್ತಮ ಮೇಲ್ವಿಚಾರಕರಾಗಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸಾಧನ.
ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
ದೇವರ ಸುವಾರ್ತೆಯನ್ನು ಮಾನವ ಕುಲದ ಆದಿಯಿಂದ ಈ ಯುಗದ ಅಂತ್ಯದವರೆಗೆ ಹಂಚಿಕೊಳ್ಳುವ ರೀತಿಯನ್ನು ಕಲಿಯಿರಿ.
ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
ಯೇಸು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದನು ಎಂಬುದನ್ನು ಹಂಚಿಕೊಳ್ಳುವ ಮೂಲಕ ಮೂರು ನಿಮಿಷಗಳಲ್ಲಿ ನಿಮ್ಮ ಸಾಕ್ಷಿಯನ್ನು ಹೇಗೆ ಹಂಚಿಕೊಳ್ಳಬೇಕೆಂದು ಕಲಿಯಿರಿ.
ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಕೊಳ್ಳುವುದು ಹೇಗೆ
ಸಮಾಧಾನದ ವ್ಯಕ್ತಿ ಯಾರಾಗಿರಬಹುದು ಮತ್ತು ನೀವು ಒಬ್ಬರನ್ನು ಕಂಡುಕೊಂಡಿದ್ದೀರಿ ಎಂದು ಹೇಗೆ ತಿಳಿಯುವುದೆಂದು ಕಲಿಯಿರಿ.
ಪ್ರಾರ್ಥನಾ ನಡಿಗೆ ಮತ್ತು ಅದನ್ನು ನಡೆಸುವುದು ಹೇಗೆ
ಇತರರಿಗಾಗಿ ಪ್ರಾರ್ಥಿಸಲು ದೇವರ ಆಜ್ಞೆಗೆ ವಿಧೇಯರಾಗಲು ಇದು ಸರಳ ಮಾರ್ಗವಾಗಿದೆ. ಮತ್ತು ಅದು ಹೀಗೆ ಧ್ವನಿಸುತ್ತದೆ - ನಡೆಯುವಾಗ ದೇವರಿಗೆ ಪ್ರಾರ್ಥಿಸುವುದು!
ಆಪ್ತ ಸಲಹೆಗಾರರ ಗುಂಪುಗಳು
ಇದು 3/3 ಗುಂಪುಗಳನ್ನು ನಡೆಸುತ್ತಿರುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುವ ಗುಂಪಾಗಿದೆ. ಇದು 3/3 ಮಾದರಿಯನ್ನು ಸಹ ಅನುಸರಿಸುತ್ತದೆ ಮತ್ತು ನಿಮ್ಮ ಪ್ರದೇಶದಲ್ಲಿ ದೇವರ ಕೆಲಸದ ಆತ್ಮೀಕ ಆರೋಗ್ಯವನ್ನು ನಿರ್ಣಯಿಸಲು ಪ್ರಬಲ ಮಾರ್ಗವಾಗಿದೆ.
ತರಬೇತಿಯ ಪರಿಶೀಲನಾಪಟ್ಟಿ
ಇದು ಹೆಚ್ಚು ಶಿಷ್ಯರನ್ನು ಮಾಡುವ ವಿಷಯಕ್ಕೆ ಬಂದಾಗ ನಿಮ್ಮ ಸ್ವಂತ ಸಾಮರ್ಥ್ಯ ಮತ್ತು ದುರ್ಬಲತೆಗಳನ್ನು ತ್ವರಿತವಾಗಿ ನಿರ್ಣಯಿಸಲು ನೀವು ಉಪಯೋಗಿಸಬಹುದಾದ ಪ್ರಬಲ ಸಾಧನವಾಗಿದೆ.
ನಾಯಕತ್ವದ ಚಿಕ್ಕಗುಂಪುಗಳು
ನಾಯಕತ್ವದ ಚಿಕ್ಕಗುಂಪು ಸೇವೆಯನ್ನು ಅಭ್ಯಾಸ ಮಾಡುವ ಮೂಲಕ ತಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಭಾವಿಸುವ ಯಾರಾದರೂ ನಡೆಸುವ ಮಾರ್ಗವಾಗಿದೆ.
ಜಾಲಬಂಧದಲ್ಲಿ ನಾಯಕತ್ವ
ಹೆಚ್ಚಾಗಿ ಮಾಡುವ ಸಭೆಗಳು ಹೇಗೆ ಸಂಪರ್ಕದಲ್ಲಿರುತ್ತವೆ ಮತ್ತು ವಿಸ್ತರಿಸಲ್ಪಟ್ಟ ಆತ್ಮೀಕ ಕುಟುಂಬವಾಗಿ ಒಟ್ಟಾಗಿ ಜೀವನವನ್ನು ನಡೆಸುತ್ತವೆ ಎಂಬುದನ್ನು ತಿಳಿಯಿರಿ.