ನಾವು ಕ್ರಿಸ್ತನಲ್ಲಿ ಯಾರಾಗಿರಬೇಕು ಮತ್ತು ಕ್ರಿಸ್ತನಲ್ಲಿ ಇತರರೊಂದಿಗೆ ಹೇಗೆ ಸಂಬಂಧವನ್ನು ನಿರೀಕ್ಷಿಸಬೇಕು ಎಂಬುದನ್ನು ತಿಳಿಯಲು, "ಶಿಷ್ಯನು" ಮತ್ತು "ಸಭೆ"ಯ ಸರಳವ್ಯಾಖ್ಯಾನವನ್ನು ಹೊಂದಿಕೊಳ್ಳುವುದು ಪ್ರಾಮುಖ್ಯವಾಗಿದೆ.

ಶಿಷ್ಯನು ಎಂದರೇನು?

ಶಿಷ್ಯನು ಎಂಬ ಪದದ ಅರ್ಥ ಹಿಂಬಾಲಕನು. ಶಿಷ್ಯನು ದೇವರ ಹಿಂಬಾಲಕನಾಗಿದ್ದಾನೆ. ಯೇಸು ಹೇಳಿದ್ದು, "ಭೂಪರಲೋಕಗಳಲ್ಲಿ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ."ಆದುದರಿಂದ ದೇವರ ರಾಜ್ಯದಲ್ಲಿ ಯೇಸು ನಮ್ಮ ಅರಸನಾಗಿದ್ದಾನೆ. ನಾವು ಆತನ ಪ್ರಜೆಗಳು, ಆತನ ಚಿತ್ತಕ್ಕೆ ಅಧೀನರಾಗಿದ್ದೇವೆ. ಆತನ ಆಸೆಗಳು, ಸಂಕಲ್ಪಗಳು, ಉದ್ದೇಶಗಳು, ಆದ್ಯತೆಗಳು ಮತ್ತು ಮೌಲ್ಯಗಳು ಅತ್ಯುನ್ನತವಾದವು ಮತ್ತು ಅತ್ಯುತ್ತಮವಾದವು ಆಗಿವೆ. ಆತನ ವಾಕ್ಯವೇ ಧರ್ಮಶಾಸ್ತ್ರ.

ದೇವರ ರಾಜ್ಯದ ನಿಬಂಧನೆ ಏನಾಗಿದೆ? ಯೇಸು ತನ್ನ ಪ್ರಜೆಗಳಿಗೆ ಏನು ಮಾಡಬೇಕೆಂದು ಹೇಳುತ್ತಿದ್ದಾನೆ?

ಹಳೆಯ ಒಡಂಬಡಿಕೆಯಿಂದ ದೇವರ ಆಜ್ಞೆಗಳನ್ನು, ಅಂದರೆ ಎಲ್ಲಾ ಧರ್ಮಶಾಸ್ತ್ರ ಮತ್ತು ಪ್ರವಾದನೆಗಳನ್ನು ಈ ಎರಡು ವಿಷಯಗಳಲ್ಲಿ ಸಂಕ್ಷಿಪ್ತಗೊಳಿಸಬಹುದು ಎಂದುಯೇಸು ಬೋಧಿಸಿದನು: ದೇವರನ್ನು ಪ್ರೀತಿಸಬೇಕು ಮತ್ತು ಜನರನ್ನು ಪ್ರೀತಿಸಬೇಕು.

ಯೇಸು ನಮಗೆ ಶಿಷ್ಯರನ್ನಾಗಿ ಮಾಡುವಂತೆ ಮತ್ತು ತಾನು ಆಜ್ಞಾಪಿಸಿದ ಎಲ್ಲವುಗಳಿಗೆ ವಿಧೇಯರಾಗಬೇಕೆಂದು ಅವರಿಗೆ ಉಪದೇಶಿಸುವಂತೆಯೂ ಆಜ್ಞಾಪಿಸಿದನು. ಶಿಷ್ಯರನ್ನಾಗಿ ಮಾಡುವುದು ಯೇಸು ಆಜ್ಞಾಪಿಸಿದ ಎಲ್ಲವನ್ನೂ ಅವರಿಗೆ ಉಪದೇಶಿಸುವುದನ್ನು ಒಳಗೊಂಡಿರುವುದರಿಂದ, ಹೊಸ ಒಡಂಬಡಿಕೆಯನ್ನು ಈ ಒಂದುವಿಷಯದಲ್ಲಿ ಸಂಕ್ಷಿಪ್ತಗೊಳಿಸಬಹುದು: ಶಿಷ್ಯರನ್ನಾಗಿ ಮಾಡುವುದು.

ಆದ್ದರಿಂದ, ಒಬ್ಬ ಶಿಷ್ಯನು ದೇವರನ್ನು ಪ್ರೀತಿಸುವ, ಜನರನ್ನು ಪ್ರೀತಿಸುವ ಮತ್ತು ಶಿಷ್ಯರನ್ನಾಗಿ ಮಾಡುವ ಯೇಸುವಿನ ಹಿಂಬಾಲಕನಾಗಿದ್ದಾನೆ.

ಈ ವಿಡಿಯೋ ವೀಕ್ಷಿಸಿ

ಸಭೆ ಎಂದರೇನು?

ನೀವು ಸಭೆಯನ್ನು ಕಟ್ಟಡವೆಂದು – ಅಂದರೆ ನೀವು ಹೋಗುವ ಸ್ಥಳವೆಂದು ಯೋಚಿಸಿರಬಹುದು. ಆದರೆ ದೇವರ ವಾಕ್ಯವು ಸಭೆಯನ್ನು ಒಟ್ಟುಗೂಡುವುದು – ಅಂದರೆನೀವು ಸೇರಿರುವ ಜನರ ಗುಂಪು ಎಂದು ಹೇಳುತ್ತದೆ.

"ಸಭೆ" ಎಂಬ ಪದವನ್ನು ಸತ್ಯವೇದದಲ್ಲಿ ಮೂರು ವಿಭಿನ್ನ ರೀತಿಯಲ್ಲಿ ಬಳಸಲಾಗಿದೆ:

  •   ಸಾರ್ವತ್ರಿಕ ಸಭೆ -- ಇದ್ದವರು, ಇರುವವರು ಮತ್ತು ಎಂದಾದರು ಯೇಸುವಿನ ಹಿಂಬಾಲಕರಾಗುವವರು ಆಗಿದ್ದಾರೆ.
  •   ನಗರ ಅಥವಾ ಪ್ರಾದೇಶಿಕ ಸಭೆ -- ಯೇಸುವನ್ನು ಹಿಂಬಾಲಿಸುವ ಮತ್ತು ಪ್ರಪಂಚದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಸುತ್ತಮುತ್ತ ವಾಸಿಸುವ ಎಲ್ಲಾ ಜನರು.
  •   ಮನೆಯಲ್ಲಿರುವ ಸಭೆ -- ಯೇಸುವನ್ನು ಹಿಂಬಾಲಿಸುವ ಎಲ್ಲಾ ಜನರು ಮತ್ತು ಅವರಲ್ಲಿ ಒಬ್ಬರು ಅಥವಾ ಹೆಚ್ಚಿನ ಜನರು ವಾಸಿಸುವಲ್ಲಿ ಭೇಟಿಯಾಗುವವರು

ಸರಳ ಸಭೆಗಳು ಆತ್ಮೀಕ ಕುಟುಂಬಗಳಾಗಿದ್ದು, ಯೇಸುವೇ ಅವರ ಕೇಂದ್ರ ಮತ್ತು ಅವರ ಅರಸನಾಗಿರುವನು. ಅವರು ದೇವರನ್ನು ಪ್ರೀತಿಸುವ, ಇತರರನ್ನು ಪ್ರೀತಿಸುವಮತ್ತು ಶಿಷ್ಯರನ್ನು ಮಾಡುವ ಆತ್ಮೀಕ ಕುಟುಂಬಗಳಾಗಿವೆ. ಈ ಸರಳ ಸಭೆಗಳ ಗುಂಪುಗಳು ಒಟ್ಟಾಗಿ ಏನಾದರೂ ದೊಡ್ಡದನ್ನು ಮಾಡಲು ಸಂಪರ್ಕಿಸಿದಾಗ, ಅವರು ನಗರಅಥವಾ ಪ್ರಾದೇಶಿಕ ಸಭೆಯನ್ನು ರಚಿಸಬಹುದು. ಸಾರ್ವತ್ರಿಕ ಸಭೆ ಎಲ್ಲಾ ಸರಳ ಸಭೆಗಳಿಂದ ಮಾಡಲ್ಪಟ್ಟಿದೆ, ಇದು ಪ್ರದೇಶಗಳಾಗಿ ಒಟ್ಟಿಗೆ ಅಂತರ್ಜಾಲವಾಗಿ ಮಾಡಲ್ಪಟ್ಟಿದೆಮತ್ತು ಇತಿಹಾಸದಾದ್ಯಂತ ವ್ಯಾಪಿಸಿದೆ.

ನಿಮ್ಮನ್ನೇ ಕೇಳಿ

  •     ನೀವು ಸಭೆಯನ್ನು ಕುರಿತಾಗಿ ಆಲೋಚಿಸಿದಾಗ, ನಿಮ್ಮ ಮನಸ್ಸಿಗೆ ಯಾವ ಸಂಗತಿ ಬರುತ್ತದೆ?
  •     ಚಿತ್ರ ಮತ್ತು ವೀಡಿಯೊದಲ್ಲಿ 'ಸರಳ ಸಭೆ' ಎಂದು ವಿವರಿಸಿರುವುದರ ನಡುವಿನ ವ್ಯತ್ಯಾಸವೇನು?
  •  ಯಾವುದನ್ನು ಹೆಚ್ಚಿಸುವುದು ಸುಲಭ ಎಂದು ನೀವು ಭಾವಿಸುತ್ತೀರಿ ಮತ್ತು ಏಕೆ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress