ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
ಯೇಸು ತನ್ನ ಹಿಂಬಾಲಕರಿಗೆ ಹೀಗೆ ಹೇಳಿದನು - "ನೀವು ಈ ಸಂಗತಿಗಳಿಗೆ ಸಾಕ್ಷಿಗಳು."
ಪ್ರತಿಯೊಬ್ಬರಲ್ಲೂ ಒಂದೊಂದು ಕಥೆ ಇರುತ್ತದೆ. ನಿಮ್ಮ ಅಭ್ಯಾಸ ಮಾಡಲು ಇದು ಒಂದು ಅವಕಾಶ.
ಯೇಸುವಿನ ಹಿಂಬಾಲಕರಾಗಿ, ನಾವು ಸಹ "ಸಾಕ್ಷಿಗಳು", - ಯೇಸು ನಮ್ಮ ಜೀವನದ ಮೇಲೆ ಬೀರಿದ ಪ್ರಭಾವವನ್ನು ಕುರಿತಾಗಿ "ಸಾಕ್ಷಿ" ಹೇಳುತ್ತೇವೆ. ದೇವರೊಂದಿಗಿನ ನಿಮ್ಮಸಂಬಂಧದ ಕಥೆಯನ್ನು ನಿಮ್ಮ ಸಾಕ್ಷಿ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಥೆ ಇರುತ್ತದೆ. ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳುವುದಕ್ಕಾಗಿ ಅಭ್ಯಾಸಮಾಡಲು ಒಂದು ಅವಕಾಶವಾಗಿದೆ.
3 ಮೂಲ ವಿಧಗಳ ಸಾಕ್ಷಿಗಳು
ನಿಮ್ಮ ಕಥೆಯನ್ನು ರೂಪಿಸಲು ಅಂತ್ಯವಿಲ್ಲದ ಮಾರ್ಗಗಳಿವೆ, ಆದರೆ ಇಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವು ವಿಧಾನಗಳಿವೆ:
- ಒಂದು ಸರಳ ಹೇಳಿಕೆ - ನೀವು ಯೇಸುವನ್ನು ಹಿಂಬಾಲಿಸಲು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದನ್ನು ಕುರಿತು ಸರಳವಾದ ಹೇಳಿಕೆಯನ್ನು ನೀವುಹಂಚಿಕೊಳ್ಳಬಹುದು. ಹೊಚ್ಚ ಹೊಸ ನಂಬಿಕೆಯುಳ್ಳವರಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
- ಮೊದಲು ಮತ್ತು ನಂತರ - ನಿಮ್ಮ "ಮೊದಲು" ಮತ್ತು "ನಂತರ" ಕಥೆಯನ್ನು ನೀವು ಹಂಚಿಕೊಳ್ಳಬಹುದು - ನೀವು ಯೇಸುವನ್ನು ತಿಳಿದುಕೊಳ್ಳುವ ಮೊದಲುನಿಮ್ಮ ಜೀವನ ಹೇಗಿತ್ತು ಮತ್ತು ನಿಮ್ಮ ಜೀವನವು ಈಗ ಹೇಗಿದೆ. ಸರಳ ಮತ್ತು ಶಕ್ತಿಯುತ.
- ಇದ್ದರೂ ಮತ್ತು ಇಲ್ಲದಿದ್ದರೂ - ನಿಮ್ಮ ಕಥೆ "ಇದ್ದರೂ" ಮತ್ತು "ಇಲ್ಲದಿದ್ದರೂ" ನೀವು ಕಥೆಯನ್ನು ಹಂಚಿಕೊಳ್ಳಬಹುದು - ನಿಮ್ಮ ಜೀವನವು"ಯೇಸುವಿನೊಂದಿಗೆ" ಹೇಗಿರುತ್ತದೆ ಮತ್ತು ಅದು "ಆತನಿಲ್ಲದೆ" ಹೇಗಿರುತ್ತದೆ. ನೀವು ಚಿಕ್ಕ ವಯಸ್ಸಿನಲ್ಲಿ ನಂಬಿಕೆಗೆ ಬಂದರೆ ನಿಮ್ಮ ಕಥೆಯ ಈ ಆವೃತ್ತಿಯುಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಲು 3 ಭಾಗಗಳು
ನಿಮ್ಮ ಕಥೆಯನ್ನು ಹಂಚಿಕೊಳ್ಳುವಾಗ, ಮೂರು-ಭಾಗದ ಪ್ರಕ್ರಿಯೆಯ ಭಾಗವಾಗಿ ಯೋಚಿಸುವುದು ಸಹಾಯಕವಾಗಿದೆ:
- ಅವರ ಕಥೆ - ಅವರ ಆತ್ಮೀಕ ಪ್ರಯಾಣದ ಬಗ್ಗೆ ಹಂಚಿಕೊಳ್ಳಲು ನೀವು ಮಾತನಾಡುತ್ತಿರುವ ವ್ಯಕ್ತಿಯನ್ನು ಕೇಳಿ.
- ನಿಮ್ಮ ಕಥೆ - ನಂತರ ಅವರ ಅನುಭವಕ್ಕೆ ತಕ್ಕಂತೆ ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿ.
- ದೇವರ ಕಥೆ - ಅಂತಿಮವಾಗಿ ದೇವರ ಕಥೆಯನ್ನು ಅವರ ಜಗತ್ತಿನ ದೃಷ್ಟಿಕೋನ, ಮೌಲ್ಯಗಳು ಮತ್ತು ಆದ್ಯತೆಗಳೊಂದಿಗೆ ಸಂಪರ್ಕಿಸುವ ರೀತಿಯಲ್ಲಿ ಹಂಚಿಕೊಳ್ಳಿ.
ನಿಮ್ಮ ಸಾಕ್ಷಿಯು ದೀರ್ಘವಾಗಿರಬೇಕಾಗಿಲ್ಲ ಅಥವಾ ಪ್ರಭಾವ ಬೀರಲು ಹಲವಾರು ವಿವರಗಳನ್ನು ಹಂಚಿಕೊಳ್ಳಬೇಕಾಗಿಲ್ಲ. ವಾಸ್ತವವಾಗಿ, ನಿಮ್ಮ ಕಥೆಯನ್ನು ಸುಮಾರು 3 ನಿಮಿಷಗಳವರೆಗೆ ಇಟ್ಟುಕೊಳ್ಳುವುದು ಪ್ರಶ್ನೆಗಳಿಗೆ ಮತ್ತು ಆಳವಾದ ಸಂಭಾಷಣೆಗೆ ಸಮಯವನ್ನು ಕೊಡುತ್ತದೆ.
ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಕುರಿತು ನೀವು ಚಿಂತೆ ಮಾಡುತ್ತಿದ್ದರೆ - ಅದನ್ನು ಸರಳವಾಗಿ ಇಡಿ. ಜೀವನವನ್ನು ಬದಲಾಯಿಸಲು ದೇವರು ನಿಮ್ಮ ಕಥೆಯನ್ನುಬಳಸಬಹುದು, ಆದರೆ ನೆನಪಿಡಿ – ನೀವೇ ಹೇಳಲು ಅದನ್ನು ಪಡೆದುಕೊಳ್ಳುವಿರಿ.
ನಿಮ್ಮನ್ನೇ ಕೇಳಿ
- ಯಾವ ಸುಳ್ಳು ಭಯಗಳು ನಮ್ಮ ಸಾಕ್ಷಿಯನ್ನು ಹಂಚಿಕೊಳ್ಳದಂತೆ ನಮ್ಮನ್ನು ತಡೆಯುತ್ತವೆ?
- ಸಾಕ್ಷಿಯನ್ನು ಯಾವುದು ಪರಿಣಾಮಕಾರಿಯಾಗಿ ಮಾಡುತ್ತದೆ? ಅದರ ಶಕ್ತಿ ಎಲ್ಲಿಂದ ಬರುತ್ತದೆ?
ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!
- ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
- ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
- ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
- ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!
ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.
ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.