ಪ್ರಾರ್ಥನಾ ನಡಿಗೆ ಎಂದರೆ ಅದು ಹೀಗೆ ಅರ್ಥಕೊಡುತ್ತದೆ - ನಡೆಯುವಾಗ ದೇವರಲ್ಲಿ ಪ್ರಾರ್ಥಿಸುವುದು. ನಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ತಲೆಬಾಗುವ ಬದಲು, ನಾವುನಮ್ಮ ಸುತ್ತಲೂ ಕಾಣುವ ಅಗತ್ಯಗಳಿಗೆ ನಮ್ಮ ಕಣ್ಣುಗಳನ್ನು ತೆರೆದುಕೊಳ್ಳುತ್ತೇವೆ ಮತ್ತು ದೇವರು ಮಧ್ಯಪ್ರವೇಶಿಸುವಂತೆ ನಮ್ರತೆಯಿಂದ ಕೇಳಲು ನಮ್ಮ ಹೃದಯಗಳನ್ನುತಗ್ಗಿಸುತ್ತೇವೆ.

ನೀವು ಎರಡು ಅಥವಾ ಮೂರು ಚಿಕ್ಕ ಗುಂಪುಗಳಲ್ಲಿ ಪ್ರಾರ್ಥನೆ ನಡೆಸಬಹುದು ಅಥವಾ ನೀವೇ ಪ್ರಾರ್ಥನೆ ಮಾಡಬಹುದು. ನೀವು ನಡೆಯುವಾಗ ಮತ್ತು ಪ್ರಾರ್ಥಿಸುವಾಗ, ಅವಕಾಶಗಳಿಗಾಗಿ ಎಚ್ಚರದಿಂದಿರಿ ಮತ್ತು ದಾರಿಯುದ್ದಕ್ಕೂ ನೀವು ಭೇಟಿಯಾಗುವ ವ್ಯಕ್ತಿಗಳು ಮತ್ತು ಗುಂಪುಗಳಿಗಾಗಿ ಪ್ರಾರ್ಥಿಸಲು ದೇವರ ಆತ್ಮನ ಪ್ರೇರಣೆಗಳಿಗೆಕಿವಿಗೊಡಿ.

ದೇವರ ವಾಕ್ಯವು ಹೇಳುವುದೇನೆಂದರೆ, “ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.”

ಇತರರಿಗಾಗಿ ಪ್ರಾರ್ಥಿಸುವ ದೇವರ ಆಜ್ಞೆಗೆ ವಿಧೇಯರಾಗಲು ಪ್ರಾರ್ಥನಾ ನಡಿಗೆ ಒಂದು ಸರಳ ಮಾರ್ಗವಾಗಿದೆ. ಮತ್ತು ಹೊರಗೆ ನಡೆಯುವಾಗ ದೇವರಲ್ಲಿ ಪ್ರಾರ್ಥಿಸುವುದುಎಂದು ಇದು ಅರ್ಥಕೊಡುತ್ತದೆ.

ನಿಮ್ಮ ಪ್ರಾರ್ಥನೆಗೆ ಮಾರ್ಗದರ್ಶನ ಕೊಡುವ ನಾಲ್ಕು ಮೂಲಗಳು:

ವೀಕ್ಷಣೆ

ನೀವು ಏನನ್ನು ನೋಡುತ್ತೀರಿ? ನೀವು ಅಂಗಳದಲ್ಲಿ ಮಗುವಿನ ಆಟಿಕೆಯನ್ನು ನೋಡಿದರೆ, ನೆರೆಹೊರೆಯ ಮಕ್ಕಳಿಗಾಗಿ, ಕುಟುಂಬಗಳಿಗಾಗಿ ಅಥವಾ ಆ ಪ್ರದೇಶದಶಾಲೆಗಳಿಗಾಗಿ ಪ್ರಾರ್ಥಿಸಲು ನಿಮ್ಮನ್ನು ಪ್ರೇರೇಪಿಸಬಹುದು.

ಸಂಶೋಧನೆ

ನಿಮಗೆ ಏನು ತಿಳಿದಿದೆ? ನೀವು ನೆರೆಹೊರೆಯ ಬಗ್ಗೆ ಓದಿದ್ದರೆ, ಅಲ್ಲಿ ವಾಸಿಸುವ ಜನರ ಬಗ್ಗೆ ನಿಮಗೆ ಏನಾದರೂ ತಿಳಿದಿರಬಹುದು ಅಥವಾ ಆ ಪ್ರದೇಶವುಅಪರಾಧ ಅಥವಾ ಅನ್ಯಾಯದಿಂದ ನರಳುತ್ತಿದ್ದರೆ. ಈ ವಿಷಯಗಳ ಬಗ್ಗೆ ಪ್ರಾರ್ಥಿಸಿ ಮತ್ತು ಕಾರ್ಯನಿರ್ವಹಿಸಲು ದೇವರನ್ನು ಕೇಳಿರಿ.

ಪ್ರಕಟನೆ

ಪವಿತ್ರಾತ್ಮನು ನಿಮ್ಮ ಹೃದಯವನ್ನು ಕೆಲವು ಸಂಗತಿಗಳ ಕಡೆಗೆ ನಡೆಸಬಹುದು ಅಥವಾ ಪ್ರಾರ್ಥನೆಯ ನಿರ್ದಿಷ್ಟ ಅಗತ್ಯತೆ ಅಥವಾ ಪ್ರದೇಶಕ್ಕಾಗಿಆಲೋಚನೆಯನ್ನು ಮನಸ್ಸಿಗೆ ತರಬಹುದು. ಕಿವಿಗೊಡಿ  ಮತ್ತು ಪ್ರಾರ್ಥಿಸಿ!

ವಾಕ್ಯ

         ನಿಮ್ಮ ನಡಿಗೆಯ ಸಿದ್ಧತೆಯಲ್ಲಿ ನೀವು ದೇವರ ವಾಕ್ಯದ ಭಾಗವನ್ನು ಓದಿರಬಹುದು ಅಥವಾ ನೀವು ನಡೆಯುವಾಗ, ಪವಿತ್ರಾತ್ಮನು ವಾಕ್ಯವನ್ನು ಮನಸ್ಸಿಗೆತರಬಹುದು. ಆ ಭಾಗದ ಬಗ್ಗೆ ಮತ್ತು ಆ ಪ್ರದೇಶದ ಜನರ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಕುರಿತು ಪ್ರಾರ್ಥಿಸಿ.

 

ಪ್ರಾರ್ಥನೆಯನ್ನು ಕೇಂದ್ರೀಕರಿಸಲು ಪ್ರಭಾವ ಬೀರುವ ಐದು ಕ್ಷೇತ್ರಗಳು:

         ಸರ್ಕಾರ

         ನ್ಯಾಯಾಲಯಗಳು, ಆಯೋಗದ ಕಟ್ಟಡಗಳು ಅಥವಾ ಕಾನೂನು ಜಾರಿ ಕಚೇರಿಗಳಂತಹ ಸರ್ಕಾರಿ ಕೇಂದ್ರಗಳನ್ನು ನೋಡಿ ಮತ್ತು ಪ್ರಾರ್ಥಿಸಿ. ಆ ಕ್ಷೇತ್ರದರಕ್ಷಣೆಗಾಗಿ, ನ್ಯಾಯಕ್ಕಾಗಿ ಮತ್ತು ಅದರ ನಾಯಕರಿಗೆ ದೈವಿಕ ಜ್ಞಾನಕ್ಕಾಗಿ ಪ್ರಾರ್ಥಿಸಿ.

ವ್ಯಾಪಾರ ಮತ್ತು ವಾಣಿಜ್ಯ

         ಆರ್ಥಿಕ ಜಿಲ್ಲೆಗಳು ಅಥವಾ ಮಾರುಕಟ್ಟೆ ಕ್ಷೇತ್ರದಂತಹ ವಾಣಿಜ್ಯ ಕೇಂದ್ರಗಳನ್ನು ನೋಡಿ ಮತ್ತು ಪ್ರಾರ್ಥಿಸಿ. ನೀತಿವಂತ ಹೂಡಿಕೆಗಳು ಮತ್ತು ಸಂಪನ್ಮೂಲಗಳಉತ್ತಮ ಉಸ್ತುವಾರಿಕೆಗಾಗಿ ಪ್ರಾರ್ಥಿಸಿ. ಆರ್ಥಿಕ ನ್ಯಾಯ ಮತ್ತು ಅವಕಾಶಕ್ಕಾಗಿ ಮತ್ತು ಲಾಭಕ್ಕಿಂತ ಮೊದಲು ಜನರಿಗೆ ಆಧ್ಯತೆ ಕೊಡವ ಉದಾರ ಮತ್ತು ದೈವಿಕದಾನಿಗಳಿಗಾಗಿ ಪ್ರಾರ್ಥಿಸಿ.

ಶಿಕ್ಷಣ

   ಶಾಲೆಗಳು ಮತ್ತು ಆಡಳಿತ ಕಟ್ಟಡಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಸಮುದಾಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಂತಹ ಶೈಕ್ಷಣಿಕಕೇಂದ್ರಗಳನ್ನು ನೋಡಿ ಮತ್ತು ಪ್ರಾರ್ಥಿಸಿ. ದೇವರ ಸತ್ಯವನ್ನು ಕಲಿಸಲು ಮತ್ತು ಅವರ ವಿದ್ಯಾರ್ಥಿಗಳ ಮನಸ್ಸನ್ನು ರಕ್ಷಿಸಲು ನೀತಿವಂತ ಶಿಕ್ಷಕರಿಗೆ ಪ್ರಾರ್ಥಿಸಿ. ಸುಳ್ಳುಅಥವಾ ಗೊಂದಲವನ್ನು ಉತ್ತೇಜಿಸುವ ಪ್ರತಿಯೊಂದು ಪ್ರಯತ್ನದಲ್ಲೂ ದೇವರು ಮಧ್ಯಪ್ರವೇಶಿಸಲಿ ಎಂದು ಪ್ರಾರ್ಥಿಸಿ. ಸೇವೆ ಮಾಡಲು ಮತ್ತು ಮುನ್ನಡೆಸಲುಹೃದಯವನ್ನು ಹೊಂದಿರುವ ಬುದ್ಧಿವಂತ ನಾಗರಿಕರನ್ನು ಈ ಕ್ಷೇತ್ರಗಳು ಕಳುಹಿಸಲಿ ಎಂದು ಪ್ರಾರ್ಥಿಸಿ.

         ಸಂಭಾಷಣೆ

         ರೇಡಿಯೋ ಕೇಂದ್ರಗಳು, ಟಿವಿ ಕೇಂದ್ರಗಳು ಮತ್ತು ವೃತ್ತಪತ್ರಿಕೆ ಪ್ರಕಾಶಕರಂತಹ ಸಂಭಾಷಣೆಯ ಕೇಂದ್ರಗಳನ್ನು ನೋಡಿ ಮತ್ತು ಪ್ರಾರ್ಥಿಸಿ. ದೇವರ ಕಥೆ ಮತ್ತುಆತನ ಹಿಂಬಾಲಕರ ಸಾಕ್ಷಿಯು ನಗರದಾದ್ಯಂತ ಮತ್ತು ಪ್ರಪಂಚದಾದ್ಯಂತ ಹರಡಲು ಪ್ರಾರ್ಥಿಸಿ. ಆತನ ಸಂದೇಶವನ್ನು ಆತನ ಮಾಧ್ಯಮದ ಮೂಲಕ ಆತನಬಹುಸಂಖ್ಯೆಗೆ ತಲುಪಿಸಬೇಕೆಂದು ಪ್ರಾರ್ಥಿಸಿ ಮತ್ತು ಎಲ್ಲೆಡೆ ದೇವರ ಜನರು ದೇವರ ಕೆಲಸವನ್ನು ನೋಡುತ್ತಾರೆ.

         ಆತ್ಮೀಕತೆ

         ಸಭಾ ಕಟ್ಟಡಗಳು, ಮಸೀದಿಗಳು ಅಥವಾ ದೇವಾಲಯಗಳಂತಹ ಆತ್ಮೀಕ ಕೇಂದ್ರಗಳನ್ನು ನೋಡಿ ಮತ್ತು ಪ್ರಾರ್ಥಿಸಿ. ಪ್ರತಿಯೊಬ್ಬ ಆತ್ಮೀಕ ಅನ್ವೇಷಕನುಯೇಸುವಿನಲ್ಲಿ ಶಾಂತಿ ಮತ್ತು ಆಧರಣೆಯನ್ನು ಕಂಡುಕೊಳ್ಳಲಿ ಮತ್ತು ಯಾವುದೇ ಸುಳ್ಳು ಧರ್ಮದಿಂದ ವಿಚಲಿತರಾಗಬಾರದು ಅಥವಾಗೊಂದಲಕ್ಕೊಳಗಾಗಬಾರದು ಎಂದು ಪ್ರಾರ್ಥಿಸಿ.

ನಿಮ್ಮನ್ನೇ ಕೇಳಿ

  •     ನಿಮ್ಮ ದೈನಂದಿನ ಜೀವನದಲ್ಲಿ ನೀವು ಸ್ವಾಭಾವಿಕವಾಗಿ ಪ್ರಾರ್ಥನಾ ನಡಿಗೆಗಾಗಿ ಇರಬಹುದಾದ ಸಾಮಾನ್ಯ ಸ್ಥಳಗಳು ಯಾವುವು?
  •     "ಅಂಧಕಾರ" ಇರುವ ಮತ್ತು ನಿಮ್ಮ ಪ್ರಾರ್ಥನೆಯಿಂದ ಪ್ರಯೋಜನ ಪಡೆಯಬಹುದಾದ ಹತ್ತಿರದ ಯಾವ ಸ್ಥಳಗಳಲ್ಲಿ ನೀವು ಪ್ರಾರ್ಥನಾ ನಡಿಗೆಯನ್ನುಮಾಡಬಹುದು?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress