ಜೊತೆಗಾರರ ತರಬೇತುದಾರರ ಗುಂಪುಗಳು ಯೇಸುವಿನ ವೈಯಕ್ತಿಕ ಹಿಂಬಾಲಕರೊಂದಿಗೆ, ಸರಳ ಸಭೆಗಳೊಂದಿಗೆ, ಸೇವೆಯ ಸಂಸ್ಥೆಗಳೊಂದಿಗೆ ಅಥವಾ ಸರಳ ಸಭೆನೆಟ್‌ವರ್ಕ್‌ಗಳೊಂದಿಗೆ ಲೀಡರ್-ಟು-ಲೀಡರ್ ಮಾರ್ಗದರ್ಶನವನ್ನು ಬಳಸುತ್ತವೆ.

ಈ ಗುಂಪುಗಳು

3/3 Groups.

ಮುನ್ನಡೆಸುತ್ತಿರುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುತ್ತವೆ. ಇದು 3/3 ಸ್ವರೂಪವನ್ನು ಸಹ ಹಿಂಬಾಲಿಸುತ್ತದೆ ಮತ್ತುನಿಮ್ಮ ಪ್ರದೇಶದಲ್ಲಿ ದೇವರ ಕೆಲಸದ ಆತ್ಮೀಕ ಆರೋಗ್ಯವನ್ನು ನಿರ್ಣಯಿಸಲು ಪ್ರಬಲ ಮಾರ್ಗವಾಗಿದೆ. ಈ ಗುಂಪುಗಳು ವಾಕ್ಯದಿಂದ ಯೇಸುವಿನ ಸೇವೆಯಉದಾಹರಣೆಯನ್ನು ಹಿಂಬಾಲಿಸುತ್ತವೆ, ಪರಸ್ಪರ ಪ್ರಶ್ನೆಗಳನ್ನು ಕೇಳಿ ಮತ್ತು ಪ್ರತಿಕ್ರಿಯೆಯನ್ನು ಕೊಡುತ್ತವೆ - ಎಲ್ಲಾ 3/3 ಗುಂಪಿನಂತೆ ಒಂದೇ ಮೂಲಭೂತ ಸಮಯದರಚನೆಯನ್ನು ಬಳಸುತ್ತವೆ.

ಯೇಸು ಹೇಳಿದ್ದು - “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವುಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು.”

ಪ್ರಾರ್ಥನೆ, ವಿಧೇಯತೆ, ಅನ್ವಯ ಮತ್ತು ಲೆಕ್ಕ ಒಪ್ಪಿಸಬೇಕಾದ ಮೂಲಕ ಯೇಸುವಿನ ಹಿಂಬಾಲಕರು ಬೆಳೆಯುವುದಕ್ಕಾಗಿ ಸಹಾಯ ಮಾಡಲು ಸರಳವಾದ ಸ್ವರೂಪವನ್ನುಒದಗಿಸುವುದು ಜೊತೆಗಾರರ ತರಬೇತುದಾರರ ಗುಂಪಿನ ಉದ್ದೇಶವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ - "ಒಬ್ಬರನ್ನೊಬ್ಬರು ಪ್ರೀತಿಸಬೇಕು."

ಜೊತೆಗಾರರ ತರಬೇತುದಾರರ ಗುಂಪನ್ನು ಮುನ್ನಡೆಸಲು ಸರಳ ಸ್ವರೂಪ:

ಹಿಂತಿರುಗಿ ನೋಡಿ [1/3 ರ ನಿಮ್ಮ ಸಮಯ]

ಮೊದಲ ಮೂರನೇ ಸಮಯದಲ್ಲಿ - ನೀವು ಮೂಲಭೂತ 3/3 ಗುಂಪಿನಲ್ಲಿರುವಂತೆಯೇ ಪ್ರಾರ್ಥನೆ ಮತ್ತು ಕಾಳಜಿಯಲ್ಲಿ ಸಮಯವನ್ನು ಕಳೆಯಿರಿ. ನಂತರ ಹಿಂದಿನಸಮರ್ಪಣೆಗಳಲ್ಲಿ ಗುಂಪಿನ ದರ್ಶನ ಮತ್ತು ನಂಬಿಗಸ್ತಿಕೆಯನ್ನು ನೋಡಲು ಸಮಯವನ್ನು ಕಳೆಯಿರಿ:

ನೀವು ಕ್ರಿಸ್ತನಲ್ಲಿ ಎಷ್ಟು ಚೆನ್ನಾಗಿ ನೆಲೆಸಿದ್ದೀರಿ? [ವಾಕ್ಯ, ಪ್ರಾರ್ಥನೆ, ನಂಬಿಕೆ, ವಿಧೇಯತೆ, ಪ್ರಮುಖ ಸಂಬಂಧಗಳು?]

ನಿಮ್ಮ ಗುಂಪು ಕಳೆದ ಅಧಿವೇಶನದಿಂದ ನಿಮ್ಮ ಕ್ರಿಯಾ ಯೋಜನೆಗಳನ್ನು ಪೂರ್ಣಗೊಳಿಸಿದೆಯೇ? ಅವುಗಳನ್ನು ಪರಿಶೀಲಿಸಿ.

ಮೇಲಕ್ಕೆ ನೋಡಿ [1/3 ರ ನಿಮ್ಮ ಸಮಯ]

ಗುಂಪು ಈ ಕೆಳಗಿನ ಸರಳ ಪ್ರಶ್ನೆಗಳನ್ನು ಚರ್ಚಿಸಿ:

  1. ನಾಲ್ಕು ಕ್ಷೇತ್ರಗಳ ರೇಖಾಚಿತ್ರದ ಪ್ರತಿ ವಿಭಾಗದಲ್ಲಿ ನೀವು ಹೇಗೆ ಮಾಡುತ್ತಿದ್ದೀರಿ?
  2. ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ? ನಿಮ್ಮ ದೊಡ್ಡ ಸವಾಲುಗಳು ಯಾವುವು?
  3. ನಿಮ್ಮ ಪ್ರಸ್ತುತ ಪೀಳಿಗೆಯ ನಕ್ಷೆಯನ್ನು ಪರಿಶೀಲಿಸಿ.
  4. ಯಾವುದು ನಿಮಗೆ ಸವಾಲು ಹಾಕಿತು ಅಥವಾ ನೀವು ಏನನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತೀರಿ?
  5. ದೇವರು ನಿಮಗೆ ಇತ್ತೀಚೆಗೆ ಏನು ತೋರಿಸುತ್ತಿದ್ದಾನೆ?
  6. ಅನುಭವಿ ನಾಯಕರು ಅಥವಾ ಇತರ ಭಾಗವಹಿಸುವವರಿಂದ ಯಾವುದೇ ಪ್ರಶ್ನೆಗಳಿವೆಯೇ?

ಮುಂದೆಕ್ಕೆ ನೋಡಿ [1/3 ರ ನಿಮ್ಮ ಸಮಯ] 

 

ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಅವರಿಗೆ ತೋರಿಸಲು ಪವಿತ್ರಾತ್ಮನನ್ನು ಕೇಳುತ್ತಾ ಗುಂಪಿನಲ್ಲಿರುವ ಪ್ರತಿಯೊಬ್ಬರೊಂದಿಗೆ ಮೌನ ಪ್ರಾರ್ಥನೆಯಲ್ಲಿ ಸಮಯವನ್ನುಕಳೆಯಿರಿ:

  1. ನಮ್ಮ ಮುಂದಿನ ಭೇಟಿಗೆ ಮುಂಚಿತವಾಗಿ ಯಾವ ಕಾರ್ಯ ಯೋಜನೆಗಳು ಅಥವಾ ಗುರಿಗಳನ್ನು ನಾನು ಅಭ್ಯಾಸಕ್ಕೆ ತರಬೇಕೆಂದು ದೇವರುಬಯಸುತ್ತಾನೆ? [ನಿಮ್ಮ ಕೆಲಸವನ್ನು ಕೇಂದ್ರೀಕರಿಸವುದಕ್ಕಾಗಿ ಸಹಾಯ ಮಾಡಲು ನಾಲ್ಕು ಕ್ಷೇತ್ರಗಳ ಸಾಧನಗಳನ್ನು ಬಳಸಿ] 
  2. ಈ ಕೆಲಸದಲ್ಲಿ ನನ್ನ ಮಾರ್ಗದರ್ಶಕರು ಅಥವಾ ಇತರ ಗುಂಪಿನ ಸದಸ್ಯರು ನನಗೆ ಹೇಗೆ ಸಹಾಯ ಮಾಡಬಹುದು?

ಅಂತಿಮವಾಗಿ, ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡುತ್ತಾ ಗುಂಪಾಗಿ ಸಮಯವನ್ನು ಕಳೆಯಿರಿ.

ಪ್ರತಿಯೊಬ್ಬ ಸದಸ್ಯರಿಗಾಗಿ ಗುಂಪು ಪ್ರಾರ್ಥಿಸುವಂತೆ ನಡೆಸಿ ಮತ್ತು ಗುಂಪು ತಮ್ಮ ಬೇರೆ ಸಮಯದಲ್ಲಿ ತಲುಪುವವರ ಎಲ್ಲರ ಹೃದಯಗಳನ್ನು ಸಿದ್ಧಪಡಿಸುವಂತೆ ದೇವರನ್ನುಕೇಳಿಕೊಳ್ಳಿರಿ. 

ಈ ಅಧಿವೇಶನದಲ್ಲಿ ದೇವರು ಅವರಿಗೆ ಬೋಧಿಸಿದ್ದನ್ನು ಅನ್ವಯಿಸಲು ಮತ್ತು ವಿಧೇಯರಾಗಲು ಗುಂಪಿನ ಪ್ರತಿಯೊಬ್ಬ ಸದಸ್ಯರಿಗೂ ಧೈರ್ಯ ಮತ್ತು ಶಕ್ತಿಯನ್ನುಕೊಡುವಂತೆ ದೇವರಿಗೆ ಪ್ರಾರ್ಥಿಸಿ. ಒಬ್ಬ ಅನುಭವಿ ನಾಯಕನು ನಿರ್ದಿಷ್ಟವಾಗಿ ಕಿರಿಯ ನಾಯಕನಿಗಾಗಿ ಪ್ರಾರ್ಥಿಸಬೇಕಾದರೆ, ಆ ಪ್ರಾರ್ಥನೆಗೆ ಇದು ಸೂಕ್ತ ಸಮಯವಾಗಿದೆ. 

ಈ ಗುಂಪುಗಳು ಸಾಮಾನ್ಯವಾಗಿ ದೂರದಲ್ಲಿ ಭೇಟಿಯಾಗುವುದರಿಂದ, ನೀವು ಕರ್ತನ ಭೋಜನವನ್ನು ಆಚರಿಸಲು ಅಥವಾ ಊಟವನ್ನು ಹಂಚಿಕೊಳ್ಳಲುಸಾಧ್ಯವಾಗುವುದಿಲ್ಲ, ಆದರೆ ಆರೋಗ್ಯ, ಕುಟುಂಬ ಮತ್ತು ಸ್ನೇಹಿತರ ಬಗ್ಗೆ ವಿಚಾರಿಸಲು ಸಮಯವನ್ನು ಖಚಿತಪಡಿಸಿಕೊಳ್ಳಿ.

ನಿಮ್ಮನ್ನೇ ಕೇಳಿ

      ಜೊತೆಗಾರರ ಮಾರ್ಗದರ್ಶನಕ್ಕಾಗಿ ಈ ಸ್ವರೂಪವು ಹೇಗೆ ವಿಭಿನ್ನವಾಗಿದೆ ಅಥವಾ ನೀವು ಶಾಲೆಯಲ್ಲಿ ಅಥವಾ ಕೆಲಸದಲ್ಲಿ ಅನುಭವಿಸಿದ ಇತರ ಜೊತೆಗಾರರಮಾರ್ಗದರ್ಶನಕ್ಕೆ ಹೋಲುತ್ತದೆಯೇ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress