ನಾಯಕತ್ವದ ಚಿಕ್ಕಗುಂಪುಗಳು ಜೀವಿತಾವಧಿಯಲ್ಲಿ ಉಳಿಯುವ ಪುನರುತ್ಪಾದಿಸುವ ಮಾದರಿಗಳನ್ನು ಕಲಿಯಲು ಕಡಿಮೆ ಸಮಯದಲ್ಲಿ ವೈಯಕ್ತಿಕ ವಿಶ್ವಾಸಿಗಳನ್ನುಸಜ್ಜುಗೊಳಿಸುತ್ತವೆ.

ಈಗಾಗಲೇ ಯೇಸುವನ್ನು ಹಿಂಬಾಲಿಸುವ ಅಲೆಮಾರಿಗಳು, ವಿದ್ಯಾರ್ಥಿಗಳು, ಮಿಲಿಟರಿ ಸಿಬ್ಬಂದಿ, ಕಾಲೋಚಿತ ಕೆಲಸಗಾರರು ನಾಯಕತ್ವದ ಚಿಕ್ಕಗುಂಪುಗಳಲ್ಲಿಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಸಂಸ್ಕೃತಿ, ಅವರ ವೃತ್ತಿ ಅಥವಾ ಅವರ ಜೀವನದ ಋತುವಿನ ನಿಮಿತ್ತ - ಅವರು ನಡೆಯುತ್ತಿರುವ ಗುಂಪನ್ನು ಸ್ಥಾಪಿಸಲುಕಷ್ಟಪಡಬಹುದು, ಆದರೆ ಅವರು ಪ್ರಯಾಣಿಸುವ ಪ್ರತಿಯೊಂದು ಸ್ಥಳದಲ್ಲಿ ಗುಂಪುಗಳನ್ನು ಹೇಗೆ ಪ್ರಾರಂಭಿಸಬೇಕು ಎಂದು ಅವರಿಗೆ ಸಂಪೂರ್ಣವಾಗಿ ತರಬೇತಿಕೊಡಬಹುದು.

ಈ ವಿಶೇಷ ಉದ್ದೇಶದ ಗುಂಪುಗಳು ಕಲಿಯುವವರಿಗೆ ನಾಯಕರಾಗಲು ಸಹಾಯ ಮಾಡುತ್ತವೆ, ಅವರು ನಂತರ ಹೊಸ ಗುಂಪುಗಳನ್ನು ಪ್ರಾರಂಭಿಸುತ್ತಾರೆ, ಹೊಸಸಭೆಗಳಿಗೆ ತರಬೇತಿ ಕೊಡುತ್ತಾರೆ ಮತ್ತು ದೇವರ ಕುಟುಂಬವನ್ನು ಬೆಳೆಸಲು ಹೆಚ್ಚಿನ ನಾಯಕತ್ವದ ಚಿಕ್ಕಗುಂಪುಗಳನ್ನು ಪ್ರಾರಂಭಿಸುತ್ತಾರೆ.

ಈ ವಿಡಿಯೋ ವೀಕ್ಷಿಸಿ

ಜನರ ಗುಂಪು ಒಂದೇ ಸಮಯದಲ್ಲಿ ನಂಬಿಕೆಗೆ ಬಂದಾಗ ನಾಯಕತ್ವದ ಚಿಕ್ಕಗುಂಪುಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ವೈಯಕ್ತಿಕ ಅನುಸರಣೆಗಳು ಅಥವಾಆತ್ಮೀಕ ತರಬೇತಿ ಇಲ್ಲದೆ ಸಹ ಜೀವಿತಾವಧಿಯಲ್ಲಿ ಚಿಕ್ಕಗುಂಪುಗಳನ್ನು ಮಾಡುವವರಾಗಲು ಒಂದು ಕುಟುಂಬ, ಸ್ನೇಹಿತರ ನೆಟ್‌ವರ್ಕ್ ಅಥವಾ ಒಂದು ಸಣ್ಣ ಹಳ್ಳಿಯನ್ನುಸಹ ಅಲ್ಪಾವಧಿಯಲ್ಲಿ ತರಬೇತಿ ಕೊಡಬಹುದು.

ನಾಯಕತ್ವದ ಚಿಕ್ಕಗುಂಪುಗಳು ಕೂಟದ ಸ್ವರೂಪ (3/3 ಮಾದರಿ)

ಹಿಂತಿರುಗಿ ನೋಡಿ (1/3 ರ ನಿಮ್ಮ ಸಮಯ)

ಆರೈಕೆ: ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸಮಯ ತೆಗೆದುಕೊಳ್ಳಿ. ನಂತರ ಪ್ರತಿಯೊಬ್ಬ ವ್ಯಕ್ತಿಯು ತಾನುಕಷ್ಟಪಡುತ್ತಿರುವುದನ್ನು ಹಂಚಿಕೊಳ್ಳಬೇಕು. ಅವರ ಬಲಭಾಗದಲ್ಲಿರುವ ವ್ಯಕ್ತಿ ಅವರು ಹಂಚಿಕೊಳ್ಳುವ ವಿಷಯಗಳ ಬಗ್ಗೆ ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ. ಯಾರಾದರೂ ಯಾವುದಾರು ವಿಷಯದೊಂದಿಗೆ ಹೋರಾಡುತ್ತಿದ್ದವರಿಗೆ ಹೆಚ್ಚಿನ ಗಮನ ಅಗತ್ಯವಿದ್ದರೆ, ಆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿ.

ದರ್ಶನ (ಎಂದಿಗೂ ಬಿಟ್ಟುಬಿಡಬೇಡಿ): ಒಟ್ಟಿಗೆ ಹಾಡಲು ಸಮಯವನ್ನು ಕಳೆಯಿರಿ ಮತ್ತು ದೇವರನ್ನು ಪ್ರೀತಿಸುವುದು, ಇತರರನ್ನು ಪ್ರೀತಿಸುವುದು, ಯೇಸುವನ್ನುಇತರರೊಂದಿಗೆ ಹಂಚಿಕೊಳ್ಳುವುದು, ಹೊಸ ಗುಂಪುಗಳನ್ನು ಪ್ರಾರಂಭಿಸುವುದು ಮತ್ತು ಇತರರಿಗೆ ಅದೇ ರೀತಿ ಮಾಡಲು ಸಹಾಯ ಮಾಡುವ ವಿಷಯವನ್ನುಜೋಡಿಸಿ. ಪರ್ಯಾಯವಾಗಿ, ಜನರು ಈ ವಿಷಯಗಳನ್ನು ಸಂಭಾಷಣೆ ಮಾಡುವ ಸತ್ಯವೇದ ಭಾಗಗಳನ್ನು ಹಂಚಿಕೊಳ್ಳಬಹುದು.

ಪರಿಶೀಲಿಸಿ (ಎಂದಿಗೂ ಬಿಟ್ಟುಬಿಡಬೇಡಿ): ಹಿಂದಿನ ವಾರದಿಂದ ಅವರು ಬರೆದ ಸಮರ್ಪಣೆಗಳಿಗೆ ಸಂಬಂಧಿಸಿದಂತೆ ಅವರು ಹೇಗೆ ಮಾಡಿದರು ಎಂಬುದನ್ನುಪ್ರತಿಯೊಬ್ಬ ವ್ಯಕ್ತಿಯು ಹಂಚಿಕೊಳ್ಳಲಿ:

  1.   ನೀವು ಕಲಿತದ್ದಕ್ಕೆ ಹೇಗೆ ವಿಧೇಯರಾಗಿದ್ದೀರಿ?
  2.   ನೀವು ಕಲಿತ ವಿಷಯಗಳಲ್ಲಿ ನೀವು ಯಾರಿಗೆ ತರಬೇತಿ ಕೊಟ್ಟಿದ್ದೀರಿ?
  3.   ನಿಮ್ಮ ಕಥೆ ಅಥವಾ ದೇವರ ಕಥೆಯನ್ನು ನೀವು ಯಾರೊಂದಿಗೆ ಹಂಚಿಕೊಂಡಿದ್ದೀರಿ?

ತಮ್ಮ ಸಮರ್ಪಣೆಯನ್ನು ಅನುಸರಿಸಲು ಮರೆತಿದ್ದರೆ ಅಥವಾ ಹಾಗೆ ಮಾಡಲು ಅವಕಾಶವಿಲ್ಲದಿದ್ದರೆ, ಹಿಂದಿನ ವಾರದ ಆ ಸಮರ್ಪಣೆಗಳನ್ನು ಈ ವಾರದಸಮರ್ಪಣೆಗಳಿಗೆ ಸೇರಿಸಬೇಕು. ಯಾರಾದರೂ ದೇವರಿಂದ ಸ್ಪಷ್ಟವಾಗಿ ಕೇಳಿದಕ್ಕೆ ವಿಧೇಯರಾಗಲು ನಿರಾಕರಿಸಿದರೆ, ಅದನ್ನು ಸಭೆ ಶಿಸ್ತಿನ ಸಮಸ್ಯೆ ಎಂದುಪರಿಗಣಿಸಬೇಕು.

ಮೇಲಕ್ಕೆ ನೋಡಿರಿ (1/3 ರ ನಿಮ್ಮ ಸಮಯ)

ಪ್ರಾರ್ಥನೆ: ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ಈ ವಾಕ್ಯವನ್ನು ನಿಮಗೆ ಕಲಿಸಲು ದೇವರನ್ನು ಕೇಳಿ.

ಓದಿ ಮತ್ತು ಚರ್ಚಿಸಿ: ಈ ವಾರದ ಭಾಗವನ್ನು ಓದಿ. ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:

  1.   ಈ ವಾಕ್ಯಭಾಗವನ್ನು ಕುರಿತಾಗಿ ನೀವು ಯಾವುದನ್ನು ಇಷ್ಟಪಟ್ಟಿದ್ದೀರಿ?
  2.   ಈ ವಾಕ್ಯಭಾಗದಲ್ಲಿ ನಿಮಗೆ ಯಾವುದು ಸವಾಲಾಗಿದೆ ಅಥವಾ ಅರ್ಥವಾಗಲಿಲ್ಲ?

ಈ ವಾರದ ವಾಕ್ಯಭಾಗವನ್ನು ಮತ್ತೊಮ್ಮೆ ಓದಿ.

  1.   ಈ ವಾಕ್ಯಭಾಗದಿಂದ ನಾವು ಜನರ ಬಗ್ಗೆ ಏನನ್ನು ಕಲಿಯಬಹುದು?
  2.   ಈ ವಾಕ್ಯಭಾಗದಿಂದ ನಾವು ದೇವರ ಬಗ್ಗೆ ಏನನ್ನು ಕಲಿಯಬಹುದು?

ಮುಂದಕ್ಕೆ ನೋಡಿ (1/3 ರ ನಿಮ್ಮ ಸಮಯ)

ವೀಧೇಯರಾಗಿ. ತರಬೇತಿ ಕೊಡಿ. ಸಾರಿರಿ. (ಎಂದಿಗೂ ಬಿಟ್ಟುಬಿಡಬೇಡಿ): ಮೌನ ಪ್ರಾರ್ಥನೆಯಲ್ಲಿ ಕನಿಷ್ಠ ಐದು ನಿಮಿಷಗಳನ್ನು ತೆಗೆದುಕೊಳ್ಳಿ. ಗುಂಪಿನಲ್ಲಿರುವಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ತೋರಿಸಲು ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ, ನಂತರ ಸಮರ್ಪಣೆಗಳನ್ನು ಮಾಡಿ. ಪ್ರತಿಯೊಬ್ಬರೂ ಸಮರ್ಪಣೆಗಳನ್ನು ಬರೆಯಬೇಕು ಇದರಿಂದ ಅವರು ತಿಳುವಳಿಕೆಯಿಂದ ಜನರಿಗಾಗಿ ಪ್ರಾರ್ಥಿಸಬಹುದು ಮತ್ತು ಅವರನ್ನು ಲೆಕ್ಕಒಪ್ಪಿಸಬೇಕಾದವರನ್ನಾಗಿ ಮಾಡಬಹುದು. ಅವರು ಪ್ರತಿ ವಾರ ಪ್ರತಿ ಪ್ರಶ್ನೆಗೆ ಸಂಬಂಧಿಸಿದ ಏನನ್ನಾದರೂ ಕೇಳದಿರಬಹುದು. ಅವರು ದೇವರಿಂದ ಕೇಳಿದಖಚಿತತೆಯಿಲ್ಲದ ಪ್ರತಿಕ್ರಿಯೆಯನ್ನು ಅವರು ಹಂಚಿಕೊಂಡರೆ ಅವರು ಗಮನಿಸಬೇಕು ಆದರೆ ಆ ಸಂದರ್ಭದಲ್ಲಿ ಲೆಕ್ಕ ಒಪ್ಪಿಸಬೇಕಾದದ್ದನ್ನು ಬೇರೆ ಮಟ್ಟದಲ್ಲಿನಿರ್ವಹಿಸುವುದರಿಂದ ಒಳ್ಳೆಯದು ಎಂದು ಅವರು ಭಾವಿಸುತ್ತಾರೆ.

  1.   ಈ ವಾಕ್ಯಭಾಗಕ್ಕೆ ನೀವು ಹೇಗೆ ವಿಧೇಯರಾಗುತ್ತೀರಿ ಅಥವಾ ಅನ್ವಯಿಸುತ್ತೀರಿ?
  2.   ಈ ಮಾರ್ಗವನ್ನು ಕುರಿತು ನೀವು ಯಾರಿಗೆ ತರಬೇತಿ ಕೊಡುತ್ತೀರಿ ಅಥವಾ ಹಂಚಿಕೊಳ್ಳುತ್ತೀರಿ?
  3.   ನಿಮ್ಮ ಕಥೆಯನ್ನು (ಸಾಕ್ಷಿ) ಮತ್ತು/ಅಥವಾ ದೇವರ ಕಥೆಯನ್ನು (ಸುವಾರ್ತೆ) ಯಾರೊಂದಿಗೆ ಅಥವಾ ಎಲ್ಲಿ ಹಂಚಿಕೊಳ್ಳುತ್ತೀರಿ?

ಅಭ್ಯಾಸ ಮಾಡಿ (ಎಂದಿಗೂ ಬಿಟ್ಟುಬಿಡಬೇಡಿ): ಇಬ್ಬರು ಅಥವಾ ಮೂವರ ಗುಂಪುಗಳಲ್ಲಿ, ಪ್ರಶ್ನೆ 5, 6, ಅಥವಾ 7 ರಲ್ಲಿ ನೀವು ಏನು ಮಾಡಲು ಸಮರ್ಪಿಸಿಕೊಂಡಿದ್ದೀರಿಎಂಬುದನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ಕಷ್ಟಕರವಾದ ಸಂಭಾಷಣೆ ಅಥವಾ ಶೋಧನೆಯನ್ನು ಎದುರಿಸುವುದು, ಇಂದಿನ ವಾಕ್ಯಭಾಗವನ್ನು ಕಲಿಸಲು ಅಭ್ಯಾಸಮಾಡಿ ಅಥವಾ ಸುವಾರ್ತೆ ಸಾರಲು ಅಭ್ಯಾಸ ಮಾಡಿ.

ದೇವರೊಂದಿಗೆ ಮಾತನಾಡಿ: ಇಬ್ಬರು ಅಥವಾ ಮೂವರ ಒಂದೇ ಗುಂಪುಗಳಲ್ಲಿ, ಪ್ರತಿಯೊಬ್ಬ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಿ. ಈ ವಾರ ಯೇಸುವಿನ ಬಗ್ಗೆ ಕೇಳುವಜನರ ಹೃದಯವನ್ನು ಸಿದ್ಧಪಡಿಸಲು ದೇವರನ್ನು ಕೇಳಿ. ನಿಮ್ಮ ಸಮರ್ಪಣೆಗಳಿಗೆ ವಿಧೇಯರಾಗಲು ನಿಮಗೆ ಬಲವನ್ನು ಮತ್ತು ಜ್ಞಾನವನ್ನು ಕೊಡುವಂತೆ ಆತನನ್ನು ಕೇಳಿ. ಇದು ಕೂಟದ ಅಂತಿಮ ತೀರ್ಮಾನವಾಗಿದೆ.

ಅಧಿವೇಶನದ ಉದ್ದಕ್ಕೂ ಗುಂಪಿನಲ್ಲಿ ನಾಯಕತ್ವವನ್ನು ಬದಲಾಯಿಸಿ ಇದರಿಂದ ಪ್ರತಿಯೊಬ್ಬರೂ ಮುನ್ನಡೆಸಲು, ಪ್ರಾರ್ಥಿಸಲು ಅಥವಾ ಪ್ರಶ್ನೆಗಳನ್ನು ಕೇಳಲುಅವಕಾಶವನ್ನು ಹೊಂದಿರುತ್ತಾರೆ. ಯಾವುದು ಸರಿಯಾಗಿ ನಡೆಯುತ್ತಿದೆ, ಸ್ವಲ್ಪ ಅಭ್ಯಾಸದಿಂದ ಯಾವುದು ಉತ್ತಮವಾಗಬಹುದು ಮತ್ತು ಗುಂಪಿನ ಪ್ರತಿಯೊಬ್ಬ ಸದಸ್ಯರುಇನ್ನಷ್ಟು ಬೆಳೆಯಲು ಉತ್ತಮ ಮುಂದಿನ ಹಂತ ಯಾವುದು ಎಂಬಿವುಗಳನ್ನು ಕುರಿತು ಒಬ್ಬರಿಗೊಬ್ಬರು ಪ್ರೋತ್ಸಾಹಿಸಿ ಮತ್ತು ತರಬೇತಿ ಕೊಡಿ.

ನಿಮ್ಮನ್ನೇ ಕೇಳಿ

  •     ನಿಮಗೆ ತಿಳಿದಿರುವ ಯೇಸುವಿನ ಹಿಂಬಾಲಕರ ಗುಂಪು ಈಗಾಗಲೇ ಭೇಟಿಯಾಗುತ್ತಿದೆಯೇ ಅಥವಾ ಭೇಟಿಯಾಗಲು ಸಿದ್ಧರಿದ್ದಾರೆಯೇ ಮತ್ತು ಜೂಮೆತರಬೇತಿಯನ್ನು ಕಲಿಯಲು ನಾಯಕತ್ವದ ಚಿಕ್ಕಗುಂಪನ್ನು ರಚಿಸಬಹುದೇ?
  •     ಅವರನ್ನು ಒಟ್ಟಿಗೆ ತರಲು ಯಾವ ಪ್ರಯತ್ನದ ಅಗತ್ಯವಿದೆ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress