ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು – ಜೂಮೆ ತರಬೇತಿ

ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು – ಜೂಮೆ ತರಬೇತಿ

This concept is called "ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು – ಜೂಮೆ ತರಬೇತಿ" in session 3 of the Zúme Training

ದೀಕ್ಷಾಸ್ನಾನ ನಮ್ಮ ಹೊಸ ಜೀವನದ ಚಿತ್ರವಾಗಿದೆ, ಯೇಸುವಿನ ಸ್ವರೂಪದಲ್ಲಿ ನೆನೆಸಿ, ದೇವರಿಗೆ ವಿಧೇಯತೆಯಲ್ಲಿ ರೂಪಾಂತರಗೊಳ್ಳುತ್ತದೆ. ಯೇಸು ನಮ್ಮ ಪಾಪಗಳಿಗಾಗಿಮರಣಹೊಂದಿದಂತೆಯೇ ಇದು ಪಾಪಕ್ಕೆ ನಮ್ಮ ಮರಣದ ಚಿತ್ರಣವಾಗಿದೆ. ಇದು ಯೇಸುವನ್ನು ಸಮಾಧಿ ಮಾಡಿದಂತೆಯೇ ನಮ್ಮ ಹಳೆಯ ಜೀವಿತದ ಸಮಾಧಿಯಚಿತ್ರವಾಗಿದೆ. ಯೇಸು ಪುನರುತ್ಥಾನಗೊಂಡು ಇಂದು ಜೀವಿಸುವಂತೆ ಇದು ಕ್ರಿಸ್ತನಲ್ಲಿ ಹೊಸ ಜೀವನಕ್ಕೆ ಪುನರುತ್ಥಾನದ ಚಿತ್ರವಾಗಿದೆ.

ಯೇಸು ಹೇಳಿದ್ದು -- "ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿದೀಕ್ಷಾಸ್ನಾನಮಾಡಿಸಿ..."

ದೀಕ್ಷಾಸ್ನಾನ - ಅಥವಾ ಮೂಲ ಗ್ರೀಕ್ ಭಾಷೆಯಲ್ಲಿ ಬ್ಯಾಪ್ಟಿಜೋ - ಎಂದರೆ ಒದ್ದೆಯಾಗುವುದು ಅಥವಾ ಮುಳುಗುವುದು - ನೀವು ಬಟ್ಟೆಗೆ ಬಣ್ಣ ಹಾಕಿದಾಗ ಅದು ಬಣ್ಣದಲ್ಲಿನೆನೆದು ಮಾರ್ಪಡುತ್ತದೆ.

ಯಾರನ್ನಾದರೂ ದೀಕ್ಷಾಸ್ನಾನ ಮಾಡಿಸುವುದು ಹೇಗೆ

ನೀವು ಮೊದಲು ಯಾರನ್ನಾದರೂ ದೀಕ್ಷಾಸ್ನಾನ ಮಾಡಿಸದಿದ್ದರೆ, ಅದು ಬೆದರಿಸುವಂತೆ ತೋರುತ್ತದೆ, ಆದರೆ ಹಾಗಿರಬಾರದು. ಇಲ್ಲಿ ಕೆಲವು ಸರಳ ಹಂತಗಳಿವೆ:

  1. ಹೊಸ ಶಿಷ್ಯನನ್ನು ಮುಳುಗಿಸಲು ಅನುಮತಿಸುವಷ್ಟು ಆಳವಾಗಿ ನಿಂತಿರುವ ನೀರನ್ನು ಹುಡುಕಿ. ಇದು ಕೊಳ, ನದಿ, ಸರೋವರ ಅಥವಾ ಸಾಗರವಾಗಿರಬಹುದು. ಇದು ಸ್ನಾನದ ತೊಟ್ಟಿಯಾಗಿರಬಹುದು ಅಥವಾ ನೀರನ್ನು ಸಂಗ್ರಹಿಸಲು ಇನ್ನೊಂದು ಮಾರ್ಗವಾಗಿರಬಹುದು.
  2. ಶಿಷ್ಯನು ನಿಮ್ಮ ಒಂದು ಕೈಯನ್ನು ಅವರ ಕೈಯಿಂದ ಹಿಡಿದುಕೊಳ್ಳಲಿ ಮತ್ತು ಇನ್ನೊಂದು ಕೈಯಿಂದ ಬೆನ್ನನ್ನು ಹಿಡಿದುಕೊಳ್ಳಿ.
  3. ಅವರು ತಮ್ಮ ನಿರ್ಧಾರವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ರೀತಿಯ ಎರಡು ಪ್ರಶ್ನೆಗಳನ್ನು ಕೇಳಿ. "ನೀವು ಯೇಸು ಕ್ರಿಸ್ತನನ್ನುನಿಮ್ಮ ಒಡೆಯನು ಮತ್ತು ರಕ್ಷಕನಾಗಿ ಸ್ವೀಕರಿಸಿದ್ದೀರಾ?" "ನೀವು ನಿಮ್ಮ ಜೀವನದಾದ್ಯಂತ ನಿಮ್ಮ ಒಡೆಯನನ್ನಾಗಿ ಆತನಿಗೆ ವಿಧೇಯರಾಗಿ ಸೇವೆ ಮಾಡುತ್ತೀರಾ?"
  4. ಅವರು ಇಬ್ಬರಿಗೂ "ಹೌದು" ಎಂದು ಉತ್ತರಿಸಿದರೆ, ನಂತರ ಈ ರೀತಿ ಹೇಳಿ: "ನೀವು ಕರ್ತನಾದ ಯೇಸುವಿನಲ್ಲಿ ನಿಮ್ಮ ನಂಬಿಕೆಯನ್ನು ಅರಿಕೆಮಾಡಿದ್ದರಿಂದ, ನಾನು ಈಗ ನಿಮಗೆ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ."
  5. ಅವರನ್ನು ನೀರಿನಲ್ಲಿ ಇಳಿಸಲು ಸಹಾಯ ಮಾಡಿ, ಸಂಪೂರ್ಣವಾಗಿ ಮುಳುಗಿಸಿ ಮತ್ತು ಅವರನ್ನು ಮತ್ತೆ ಮೇಲಕ್ಕೆತ್ತಿ.

ಅಭಿನಂದನೆಗಳು! ನೀವು ಯೇಸುವಿನ ಹೊಸ ಹಿಂಬಾಲಕರನ್ನು ದೀಕ್ಷಾಸ್ನಾನ ಮಾಡಿಸಿದ್ದೀರಿ - ಪರಲೋಕದ ಹೊಸ ಪ್ರಜೆ - ಜೀವಂತ ದೇವರ ಹೊಸ ಮಗು. ಇದುಆಚರಿಸುವ ಸಮಯವಾಗಿದೆ!

ನಿಮ್ಮನ್ನೇ ಕೇಳಿ

  •       ನೀವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರಾ? ಇಲ್ಲದಿದ್ದರೆ, ನೀವು ಯಾರೊಂದಿಗೆ ಮಾತನಾಡಬಹುದು ಮತ್ತು ವಿಧೇಯತೆಯ ಮುಂದಿನ ಹಂತವನ್ನುತೆಗೆದುಕೊಳ್ಳಬಹುದು?
  •       ನೀವು ಯಾರಿಗಾದರೂ ದೀಕ್ಷಾಸ್ನಾನ ಮಾಡಿಸಿದ್ದೀರಾ?
  •       ನೀವು ಅದನ್ನು ಪರಿಗಣಿಸುತ್ತೀರಾ?
  • ಮಹಾಆಜ್ಞೆಯು ಯೇಸುವಿನ ಪ್ರತಿಯೊಬ್ಬ ಹಿಂಬಾಲಕರಿಗೆ ಆಗಿದ್ದರೆ, ಪ್ರತಿಯೊಬ್ಬ ಹಿಂಬಾಲಕನು ಇತರರನ್ನು ದೀಕ್ಷಾಸ್ನಾನ ಮಾಡಿಸಲು ಅನುಮತಿಸಲಾಗಿದೆಯೇ? ಏಕೆ ಅಥವಾ ಏಕೆ ಇಲ್ಲ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress