ಯೇಸುವಿನ ಪ್ರತಿಯೊಬ್ಬ ಹಿಂಬಾಲಕನು ಜವಾಬ್ದಾರನಾಗಿರುತ್ತಾನೆ, ಆದ್ದರಿಂದ ಯೇಸುವಿನ ಪ್ರತಿಯೊಬ್ಬ ಹಿಂಬಾಲಕನು ಇತರರೊಂದಿಗೆ ಲೆಕ್ಕ ಒಪ್ಪಿಸುವ ಅಭ್ಯಾಸಮಾಡಬೇಕು. ಯೇಸು ಲೆಕ್ಕ ಒಪ್ಪಿಸಬೇಕಾದ ಅನೇಕ ಕಥೆಗಳನ್ನು ಹಂಚಿಕೊಂಡನು ಮತ್ತು ನಾವು ಮಾಡುವುದು ಮತ್ತು ಹೇಳುವುದಕ್ಕೆ ನಾವು ಹೇಗೆ ಜವಾಬ್ದಾರರಾಗಿರುತ್ತೇವೆಎಂಬುದನ್ನು ಕುರಿತಾಗಿ ಅನೇಕ ಸತ್ಯಗಳನ್ನು ಹೇಳಿದನು. ಆದ್ದರಿಂದ ಲೆಕ್ಕ ಒಪ್ಪಿಸಬೇಕಾದ ಗುಂಪುಗಳು ಸಹೋದರರು ಮತ್ತು ಸಹೋದರಿಯರು ಸತ್ಯ ಮತ್ತು ಪ್ರೀತಿಯಲ್ಲಿಒಟ್ಟಿಗೆ ನಡೆಯುವುದರ ಸ್ವಾಭಾವಿಕ ಅಭಿವ್ಯಕ್ತಿಯಾಗಿದೆ.

ಒಂದೇ ಲಿಂಗದ ಎರಡು ಅಥವಾ ಮೂರು ಜನರಿಂದ ಲೆಕ್ಕ ಒಪ್ಪಿಸಬೇಕಾದ ಗುಂಪುಗಳು ಮಾಡಲ್ಪಟ್ಟಿವೆ - ಪುರುಷರೊಂದಿಗೆ ಪುರುಷರು, ಮಹಿಳೆಯರೊಂದಿಗೆಮಹಿಳೆಯರು - ಕಾರ್ಯಗಳು ಸರಿಯಾಗಿ ನಡೆಯುತ್ತಿರುವ ಭಾಗಗಳು ಮತ್ತು ತಿದ್ದುಪಡಿಯ ಅಗತ್ಯವಿರುವ ಇತರ ಭಾಗಗಳನ್ನು ಪ್ರಕಟಪಡಿಸಲು ಸಹಾಯ ಮಾಡುವಪ್ರಶ್ನೆಗಳನ್ನು ಚರ್ಚಿಸಲು ವಾರಕ್ಕೊಮ್ಮೆ ಭೇಟಿಯಾಗುತ್ತಾರೆ. ಅವರು ಮುಖಾಮುಖಿಯಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೆ ದೂರವಾಣಿ ಮೂಲಕವೂಭೇಟಿಯಾಗಬಹುದು.

ಲೆಕ್ಕ ಒಪ್ಪಿಸಬೇಕಾದ ಪ್ರಶ್ನೆಗಳು - ಪಟ್ಟಿ 1

  1.         ನಾವು ಯೇಸುವಿನಂತೆ ಆಗಬೇಕೆಂದು ಪ್ರಾರ್ಥಿಸಿ.
  2.       ನೀವು ಹೇಗೆ ಕಾರ್ಯಮಾಡುತ್ತಿದ್ದೀರಿ? ನಿಮ್ಮ ಪ್ರಾರ್ಥನಾ ಜೀವನ ಹೇಗಿದೆ?
  3.       ನೀವು ಅರಿಕೆ ಮಾಡಲು ಯಾವುದಾದರು ಪಾಪವನ್ನು ಹೊಂದಿದ್ದೀರಾ? [ಸಂಬಂಧ, ಲೈಂಗಿಕ, ಆರ್ಥಿಕ, ಹೆಮ್ಮೆ, ಸಮಗ್ರತೆ,   ಅಧಿಕಾರಕ್ಕೆ ಅಧೀನರಾಗುವುದು, ಇತ್ಯಾದಿ]
  4.         ದೇವರು ನಿಮಗೆ ಕೊನೆಯ ಸಾರಿ ಹೇಳಿದಕ್ಕೆ ನೀವು ವಿಧೇಯರಾಗಿದ್ದೀರಾ? ವಿವರಗಳನ್ನು ಹಂಚಿಕೊಳ್ಳಿ.
  5. ಈ ವಾರ ನಿಮ್ಮ ಸಂಬಂಧದ ಪಟ್ಟಿಯಲ್ಲಿರುವ "ನಂಬಿಕೆಯಿಲ್ಲದವರಿಗೆ" ನೀವು ಪ್ರಾರ್ಥಿಸಿದ್ದೀರಾ? ಅವರಲ್ಲಿ ಯಾರೊಂದಿಗಾದರೂ ಹಂಚಿಕೊಳ್ಳಲು ನಿಮಗೆಅವಕಾಶವಿದೆಯೇ? ವಿವರಗಳನ್ನು ಹಂಚಿಕೊಳ್ಳಿ.
  6.         ಈ ವಾರ ನೀವು ಹೊಸ ವಚನವನ್ನು ಕಂಠಪಾಠ ಮಾಡಿದ್ದೀರಾ? ಅದನ್ನು ಉಲ್ಲೇಖಿಸಿ.
  7.         ಈ ವಾರ ನೀವು ಸತ್ಯವೇದದಲ್ಲಿ ಕನಿಷ್ಠ 25 ಅಧ್ಯಾಯಗಳನ್ನು ಓದಿದ್ದೀರಾ?
  8.         ಈ ವಾರ ವಾಕ್ಯದಿಂದ ದೇವರು ನಿಮಗೆ ಏನು ಹೇಳಿದನು?
  9.         ನೀವು ಅದರ ಬಗ್ಗೆ ನಿರ್ದಿಷ್ಟವಾಗಿ ಏನು ಮಾಡಲಿದ್ದೀರಿ?
  10.     ಈ ವಾರ ನಿಮ್ಮ 3/3 ಗುಂಪಿನೊಂದಿಗೆ ನೀವು ಭೇಟಿ ಮಾಡಿದ್ದೀರಾ? ಅದು ಹೇಗೆ ನಡೆಯಿತು?
  11.   ಈ ವಾರ ಹೊಸ 3/3 ಗುಂಪನ್ನು ಪ್ರಾರಂಭಿಸಲು ನೀವು ಯಾರಿಗಾದರೂ ಮಾದರಿಯಾಗಿದ್ದೀರಾ ಅಥವಾ ಸಹಾಯ ಮಾಡಿದ್ದೀರಾ? ವಿವರಗಳನ್ನು ಹಂಚಿಕೊಳ್ಳಿ.
  12.     ಕ್ರಿಸ್ತನೊಂದಿಗೆ ನನ್ನ ನಡಿಗೆಗೆ ಏನಾದರೂ ಅಡ್ಡಿಯಾಗುವುದನ್ನು ನೀವು ನೋಡುತ್ತೀರಾ?
  13.     ಈ ವಾರ ಸುವಾರ್ತೆಯನ್ನು ಹಂಚಿಕೊಳ್ಳಲು ನಿಮಗೆ ಅವಕಾಶವಿದೆಯೇ? ವಿವರಗಳನ್ನು ಹಂಚಿಕೊಳ್ಳಿ.
  14.     ಇದೀಗ 1-3 ನಿಮಿಷಗಳ ಸಾಕ್ಷಿಗಳು ಮತ್ತು ಸುವಾರ್ತೆಯನ್ನು ಅಭ್ಯಾಸ ಮಾಡಿ.
  15. ಮುಂದಿನ ವಾರ ನೀವು ಗುಂಪಿಗೆ ಯಾರನ್ನು ಆಹ್ವಾನಿಸಬಹುದು? ಗುಂಪು ನಾಲ್ಕು ಅಥವಾ ಹೆಚ್ಚು ಇದ್ದರೆ, ಅದನ್ನು ಗುಣಿಸಿ.
  16.         ಏನನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ಕುರಿತು ಪ್ರಾರ್ಥನೆಯೊಂದಿಗೆ ಮುಚ್ಚಿ.

ಲೆಕ್ಕ ಒಪ್ಪಿಸಬೇಕಾದ ಪ್ರಶ್ನೆಗಳು - ಪಟ್ಟಿ 2

  1.       ಕಳೆದ ವಾರದ ಓದುವಿಕೆಯಿಂದ ನಿಮ್ಮ ಒಳನೋಟಗಳು ನೀವು ಯೋಚಿಸುವ ಮತ್ತು ಜೀವಿಸುವ ವಿಧಾನವನ್ನು ಹೇಗೆ ರೂಪಿಸಿದೆ?
  2.         ಕಳೆದ ವಾರದಿಂದ ನಿಮ್ಮ ಒಳನೋಟಗಳನ್ನು ಯಾರಿಗೆ ರವಾನಿಸಿದ್ದೀರಿ ಮತ್ತು ಅದನ್ನು ಹೇಗೆ ಸ್ವೀಕರಿಸಲಾಗಿದೆ?
  3.         ದೇವರು ಕಾರ್ಯಮಾಡುವುದನ್ನು ನೀವು ಹೇಗೆ ನೋಡಿದ್ದೀರಿ?
  4.         ನಿಮ್ಮ ಮಾತುಗಳು ಮತ್ತು ಕ್ರಿಯೆಗಳೆರಡರಿಂದಲೂ ನೀವು ಯೇಸುಕ್ರಿಸ್ತನ ಶ್ರೇಷ್ಠತೆಗೆ ಈ ವಾರ ಸಾಕ್ಷಿಯಾಗಿದ್ದೀರಾ?
  5.     ನೀವು ಲೈಂಗಿಕವಾಗಿ ಆಕರ್ಷಿಸಲ್ಪಡುವ ಸಂಗತಿಗಳಿಗೆ ಒಡ್ಡಿಕೊಂಡಿದ್ದೀರಾ ಅಥವಾ ನಿಮ್ಮ ಮನಸ್ಸನ್ನು ಅನುಚಿತವಾದ ಲೈಂಗಿಕ ಆಲೋಚನೆಗಳನ್ನುಮನರಂಜಿಸಲು ಅನುಮತಿಸಿದ್ದೀರಾ?
  6.         ನಿಮ್ಮ ಹಣದ ಬಳಕೆಯಲ್ಲಿ ದೇವರ ಯಜಮಾನತ್ವವನ್ನು ನೀವು ಅಂಗೀಕರಿಸಿದ್ದೀರಾ?
  7.         ನೀವು ಏನನ್ನಾದರೂ ಅಪೇಕ್ಷಿಸಿದ್ದೀರಾ?
  8.         ನಿಮ್ಮ ಮಾತುಗಳಿಂದ ನೀವು ಯಾರಿಗಾದರು ಖ್ಯಾತಿ ಅಥವಾ ಭಾವನೆಗಳನ್ನು ನೋಯಿಸಿದ್ದೀರಾ?
  9.         ನೀವು ಪದ ಅಥವಾ ಕ್ರಿಯೆಯಲ್ಲಿ ಅಪ್ರಾಮಾಣಿಕರಾಗಿದ್ದೀರಾ ಅಥವಾ ಉತ್ಪ್ರೇಕ್ಷಿತರಾಗಿದ್ದೀರಾ?
  10.       ನೀವು ವ್ಯಸನಕಾರಿ [ಅಥವಾ ಸೋಮಾರಿಯಾದ ಅಥವಾ ಅಶಿಸ್ತಿನ] ನಡವಳಿಕೆಗೆ ಒಳಗಾಗಿದ್ದೀರಾ?
  11.         ನೀವು ಬಟ್ಟೆ, ಸ್ನೇಹಿತರು, ಕೆಲಸ ಅಥವಾ ಆಸ್ತಿಗೆ ಗುಲಾಮರಾಗಿದ್ದೀರಾ?
  12.         ನೀವು ಯಾರನ್ನಾದರೂ ಕ್ಷಮಿಸಲು ವಿಫಲರಾಗಿದ್ದೀರಾ?
  13.   ನೀವು ಯಾವ ಚಿಂತೆಗಳನ್ನು ಅಥವಾ ಆತಂಕಗಳನ್ನು ಎದುರಿಸುತ್ತಿರುವಿರಾ? ನೀವು ದೂರು ನೀಡಿದ್ದೀರಾ ಅಥವಾ ಗುಣಗುಟ್ಟಿದ್ದೀರಾ?
  14.       ನೀವು ಕೃತಜ್ಞತೆಯ ಹೃದಯವನ್ನು ಕಾಪಾಡಿಕೊಂಡಿದ್ದೀರಾ?
  15.         ನಿಮ್ಮ ಪ್ರಮುಖ ಸಂಬಂಧಗಳಲ್ಲಿ ನೀವು ಗೌರವ, ತಿಳುವಳಿಕೆ ಮತ್ತು ಉದಾರತೆಯನ್ನು ಹೊಂದಿದ್ದೀರಾ?
  16.   ಆಲೋಚನೆ, ಮಾತು ಅಥವಾ ಕ್ರಿಯೆಯಲ್ಲಿ ನೀವು ಯಾವ ಶೋಧನೆಗಳನ್ನು ಎದುರಿಸಿದ್ದೀರಿ ಮತ್ತು ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ?
  17.   ಇತರರಿಗೆ, ವಿಶೇಷವಾಗಿ ವಿಶ್ವಾಸಿಗಳಿಗೆ ಸೇವೆ ಸಲ್ಲಿಸಲು ಅಥವಾ ಆಶೀರ್ವದಿಸಲು ನೀವು ಹೇಗೆ ಅವಕಾಶಗಳನ್ನು ಪಡೆದುಕೊಂಡಿದ್ದೀರಿ?
  18.         ಪ್ರಾರ್ಥನೆಗೆ ನಿರ್ದಿಷ್ಟ ಉತ್ತರಗಳನ್ನು ನೀವು ನೋಡಿದ್ದೀರಾ?
  19.         ನೀವು ವಾರದ ಓದುವಿಕೆಯನ್ನು ಪೂರ್ಣಗೊಳಿಸಿದ್ದೀರಾ?

ನಿಮ್ಮನ್ನೇ ಕೇಳಿ

  •     ನಾನು ಕ್ರಮವಾಗಿ ಯಾರನ್ನು ಭೇಟಿ ಮಾಡಿ ಈ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು? ನಿಮಗೆ ಒಬ್ಬರ ಹೆಸರನ್ನು ತೋರಿಸುವಂತೆ ದೇವರನ್ನು ಪ್ರಾರ್ಥಿಸಿಕೇಳಿಕೊಳ್ಳಿರಿ.
  •     ನಿಮ್ಮ ವೈಯಕ್ತಿಕ ಪರಿಶುದ್ಧತೆಯೊಂದಿಗೆ ಈ ರೀತಿಯ ಉದ್ದೇಶಪೂರ್ವಕತೆಯಿಂದ ನಿಮ್ಮನ್ನು ತಡೆಯುವಂತದ್ದು ಯಾವುದು?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress