3/3 ಗುಂಪು ("ಮೂರು-ಮೂರನೇ" ಎಂದು ಉಚ್ಚರಿಸುವುದು) ಅವರ ಸಮಯವನ್ನು 3 ಭಾಗಗಳಾಗಿ ವಿಂಗಡಿಸುತ್ತದೆ. ಈ ಸ್ವರೂಪವು ಕರ್ತನ ಹಿಂದಿನಮಾರ್ಗದರ್ಶನಗಳಿಗೆ ನಂಬಿಗಸ್ತಿಕೆ, ಕರ್ತನಿಂದ ಒಟ್ಟಿಗೆ ಕೇಳುವುದು ಮತ್ತು ಕರ್ತನು ಕೊಟ್ಟ ಯಾವುದೇ ಮಾರ್ಗದರ್ಶನಕ್ಕೆ ಮುಂದಿನ ದಿನಗಳಲ್ಲಿ ವಿಧೇಯತೆಯನ್ನುಯೋಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಈ 3/3 ಮಾದರಿಯನ್ನು ಸರಳ ಸಭೆ (ಅಥವಾ ಹೋಮ್ ಸಭೆ), ನಾಯಕತ್ವ ಚಿಕ್ಕಗುಂಪು ಅಥವಾ ಜೊತೆಗಾರರ ಮಾರ್ಗದರ್ಶನ ಗುಂಪಿಗೆ ಬಳಸಬಹುದು.

ಇದು ಹೇಗೆ ಕೆಲಸ ಮಾಡುತ್ತದೆ:

  •     ಹಿಂತಿರುಗಿ ನೋಡಿ - ಗುಂಪಿನ ಮೊದಲ ಮೂರನೇ ಸಮಯವನ್ನು ಅವರು ಒಟ್ಟಿಗೆ ಇದ್ದಾಗಿನಿಂದ ಏನಾಯಿತು ಎಂದು ಹಿಂತಿರುಗಿ ನೋಡುವುದರಲ್ಲಿಕಳೆಯಲಾಗುತ್ತದೆ.
  •     ಮೇಲಕ್ಕೆ ನೋಡಿ  - ಗುಂಪಿನ ಮಧ್ಯದ ಮೂರನೇ ಭಾಗವನ್ನು ವಾಕ್ಯ, ಚರ್ಚೆ ಮತ್ತು ಪ್ರಾರ್ಥನೆಯ ಮೂಲಕ ದೇವರ ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿಹುಡುಕುತ್ತಾ ಕಳೆಯಲಾಗುತ್ತದೆ.
  •     ಮುಂದೆಕ್ಕೆ ನೋಡಿ - ಗುಂಪಿನ ಅಂತಿಮ ಮೂರನೇ ಸಮಯವನ್ನು ಅವರು ಹೇಗೆ ಅನ್ವಯಿಸಬಹುದು ಮತ್ತು ಅವರು ಕಲಿತದಕ್ಕೆ ಹೇಗೆ ವಿಧೇಯರಾಗಬಹುದುಎಂಬುದನ್ನು ಎದುರುನೋಡುತ್ತಾ ಕಳೆಯಲಾಗುತ್ತದೆ.

ಈ ವಿಡಿಯೋ ವೀಕ್ಷಿಸಿ

3/3 ಸಭೆಯ ರೂಪರೇಖೆ

 

ಹಿಂತಿರುಗಿ ನೋಡಿ [ನಿಮ್ಮ ಸಮಯದ 1/3]

ಕಾಳಜಿ ಮತ್ತು ಪ್ರಾರ್ಥನೆ: ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸಮಯ ತೆಗೆದುಕೊಳ್ಳಿ. ನಂತರ ಪ್ರತಿಯೊಬ್ಬ ವ್ಯಕ್ತಿಯು ತನ್ನಹೋರಾಟವನ್ನು ಕುರಿತು ಹಂಚಿಕೊಳ್ಳಬೇಕು. ಅವರ ಬಲಭಾಗದಲ್ಲಿರುವ ವ್ಯಕ್ತಿಯು ಅವರು ಹಂಚಿಕೊಳ್ಳುವ ಸಂಗತಿಗಳ ಬಗ್ಗೆ ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ. ಹೆಚ್ಚಿನಗಮನದ ಅಗತ್ಯವಿರುವ ವಿಷಯದಲ್ಲಿ ಯಾರಿಗಾದರೂ ಹೋರಾಟವಿದ್ದರೆ, ಆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿ.

ದರ್ಶನ: ಒಟ್ಟಿಗೆ ಹಾಡುವುದು ಮತ್ತು ದೇವರನ್ನು ಪ್ರೀತಿಸುವುದು, ಇತರರನ್ನು ಪ್ರೀತಿಸುವುದು, ಯೇಸುವನ್ನು ಕುರಿತು ಇತರರೊಂದಿಗೆ ಹಂಚಿಕೊಳ್ಳುವುದು, ಹೊಸಗುಂಪುಗಳನ್ನು ಪ್ರಾರಂಭಿಸುವುದು ಮತ್ತು ಇತರರಿಗೆ ಅದೇ ರೀತಿ ಮಾಡಲು ಸಹಾಯ ಮಾಡುವ ಕಾರ್ಯಗಳಿಗೆ ಸಮಯವನ್ನು ಕಳೆಯಿರಿ. ಪರ್ಯಾಯವಾಗಿ ಜನರು ಈವಿಷಯಗಳನ್ನು ತಿಳಿಯಪಡಿಸುವ ಸತ್ಯವೇದ ಭಾಗಗಳನ್ನು ಹಂಚಿಕೊಳ್ಳಬಹುದು.

ಪರಿಶೀಲಿಸಿ: ಹಿಂದಿನ ವಾರದಿಂದ ಅವರು ಬರೆದ ಸಮರ್ಪಣೆಗಳಿಗೆ ಸಂಬಂಧಿಸಿದಂತೆ ಅವರು ಹೇಗೆ ಮಾಡಿದರು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಹಂಚಿಕೊಳ್ಳಲಿ:

  1. ನೀವು ಕಲಿತವುಗಳಿಗೆ ಹೇಗೆ ವಿಧೇಯರಾಗಿದ್ದೀರಿ?
  2. ನೀವು ಕಲಿತ ವಿಷಯಗಳಲ್ಲಿ ನೀವು ಯಾರಿಗೆ ತರಬೇತಿ ಕೊಟ್ಟಿದ್ದೀರಿ?
  3. ನಿಮ್ಮ ಕಥೆ ಅಥವಾ ದೇವರ ಕಥೆಯನ್ನು ನೀವು ಯಾರೊಂದಿಗೆ ಹಂಚಿಕೊಂಡಿದ್ದೀರಿ?

ಅವರು ಸಮರ್ಪಣೆಯನ್ನು ಅನುಸರಿಸಲು ಮರೆತಿದ್ದರೆ ಅಥವಾ ಹಾಗೆ ಮಾಡಲು ಅವಕಾಶವಿಲ್ಲದಿದ್ದರೆ, ಹಿಂದಿನ ವಾರದ ಆ ಸಮರ್ಪಣೆಗಳನ್ನು ಈ ವಾರದಸಮರ್ಪಣೆಗಳಿಗೆ ಸೇರಿಸಬೇಕು. ಯಾರಾದರೂ ದೇವರಿಂದ ಸ್ಪಷ್ಟವಾಗಿ ಕೇಳಿದ್ದಕ್ಕೆ ವಿಧೇಯರಾಗಲು ನಿರಾಕರಿಸಿದರೆ ಅದನ್ನು ಸಭೆಯ ಶಿಸ್ತಿನ ಸಮಸ್ಯೆ ಎಂದುಪರಿಗಣಿಸಬೇಕು.

ಮೇಲಕ್ಕೆ ನೋಡಿರಿ [1/3 ರ ನಿಮ್ಮ ಸಮಯ]

ಪ್ರಾರ್ಥನೆ: ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ಈ ವಾಕ್ಯವನ್ನು ನಿಮಗೆ ಕಲಿಸಲು ದೇವರನ್ನು ಕೇಳಿ.

ಓದಿ ಮತ್ತು ಚರ್ಚಿಸಿ: ಈ ವಾರದ ವಾಕ್ಯಭಾಗವನ್ನು ಓದಿ. ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:

  1. ಈ ವಾಕ್ಯಭಾಗದಲ್ಲಿ ನೀವು ಯಾವುದನ್ನು ಇಷ್ಟಪಟ್ಟಿದ್ದೀರಿ?
  2. ಈ ವಾಕ್ಯಭಾಗದಲ್ಲಿ ಯಾವುದು ನಿಮಗೆ ಸವಾಲಾಗಿತ್ತು ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾಯಿತು?

ಈ ವಾರದ ಭಾಗವನ್ನು ಮತ್ತೊಮ್ಮೆ ಓದಿ.

  1. ಈ ಭಾಗದಿಂದ ನಾವು ಜನರ ಬಗ್ಗೆ ಏನನ್ನು ಕಲಿಯಬಹುದು?
  2. ಈ ಭಾಗದಿಂದ ನಾವು ದೇವರ ಬಗ್ಗೆ ಏನನ್ನು ಕಲಿಯಬಹುದು?

ಮುಂದೆ ನೋಡಿ [1/3ರ ನಿಮ್ಮ ಸಮಯ]

ವಿಧೇಯರಾಗಿ. ತರಬೇತಿ ಕೊಡಿ. ಸಾರಿರಿ: ಮೌನ ಪ್ರಾರ್ಥನೆಯಲ್ಲಿ ಕನಿಷ್ಠ ಐದು ನಿಮಿಷ ತೆಗೆದುಕೊಳ್ಳಿ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಹೇಗೆಉತ್ತರಿಸಬೇಕು ಎಂಬುದನ್ನು ಪವಿತ್ರಾತ್ಮನು ತೋರಿಸುವಂತೆ ಪ್ರಾರ್ಥಿಸಿ, ನಂತರ ಸಮರ್ಪಣೆಗಳನ್ನು ಮಾಡಿ. ಪ್ರತಿಯೊಬ್ಬರೂ ಸಮರ್ಪಣೆಗಳನ್ನು ಬರೆಯಬೇಕು ಆದ್ದರಿಂದಅವರು ತಿಳುವಳಿಕೆಯಿಂದ ಜನರಿಗೆ ಪ್ರಾರ್ಥಿಸಬಹುದು ಮತ್ತು ಅವರನ್ನು ಲೆಕ್ಕ ಒಪ್ಪಿಸುವವರನ್ನಾಗಿ ಮಾಡಬಹುದು. ಅವರು ಪ್ರತಿ ವಾರ ಪ್ರತಿ ಪ್ರಶ್ನೆಗೆ ಸಂಬಂಧಿಸಿದಏನನ್ನಾದರೂ ಕೇಳದಿರಬಹುದು. ಅವರು ದೇವರಿಂದ ಕೇಳಿದ ಖಚಿತತೆಯಿಲ್ಲದ ಪ್ರತಿಕ್ರಿಯೆಯನ್ನು ಅವರು ಹಂಚಿಕೊಂಡರೆ ಅವರು ಗಮನಿಸಬೇಕು, ಆದರೆ ಆಸಂದರ್ಭದಲ್ಲಿ ಲೆಕ್ಕ ಒಪ್ಪಿಸಬೇಕಾದ ವಿಷಯವನ್ನು ಬೇರೆ ಮಟ್ಟದಲ್ಲಿ ನಿರ್ವಹಿಸುವುದರಿಂದ ಒಳ್ಳೆಯದು ಎಂದು ಅವರು ಭಾವಿಸುತ್ತಾರೆ.

  1. ಈ ವಾಕ್ಯಭಾಗವನ್ನು ನಾನು ಹೇಗೆ ಅನ್ವಯಿಸುತ್ತೇನೆ ಮತ್ತು ಅದಕ್ಕೆ ವಿಧೇಯನಾಗುತ್ತೇನೆ?
  2. ಈ ಮಾರ್ಗವನ್ನು ಕುರಿತು ನಾನು ಯಾರೊಂದಿಗೆ ತರಬೇತಿ ಕೊಡುತ್ತೇನೆ ಅಥವಾ ಹಂಚಿಕೊಳ್ಳುತ್ತೇನೆ?
  3. ಈ ವಾರ ನನ್ನ ಕಥೆ [ಸಾಕ್ಷಿ] ಮತ್ತು/ಅಥವಾ ದೇವರ ಕಥೆಯನ್ನು ನಾನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಾನೆ?

ಅಭ್ಯಾಸ: ಎರಡು ಅಥವಾ ಮೂರು ಗುಂಪುಗಳಲ್ಲಿ, ಪ್ರಶ್ನೆ 5, 6 ಅಥವಾ 7 ರಲ್ಲಿ ನೀವು ಏನು ಮಾಡಲು ಸಮರ್ಪಣೆ ಮಾಡಿಕೊಂಡಿದ್ದೀರಿ ಎಂಬುದನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ಕಷ್ಟಕರವಾದ ಸಂಭಾಷಣೆ ಅಥವಾ ಶೋಧನೆಯನ್ನು ಎದುರಿಸುವುದು; ಇಂದಿನ ವಾಕ್ಯಭಾಗವನ್ನು ಬೋಧಿಸಲು ಅಭ್ಯಾಸ ಮಾಡಿ, ಅಥವಾಸುವಾರ್ತೆಯನ್ನು ಹಂಚಿಕೊಳ್ಳಲು ಅಭ್ಯಾಸ ಮಾಡಿ.

ದೇವರೊಂದಿಗೆ ಮಾತನಾಡಿ: ಎರಡು ಅಥವಾ ಮೂರು ಒಂದೇ ಗುಂಪುಗಳಲ್ಲಿ, ಪ್ರತಿ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಿ. ಈ ವಾರ ಯೇಸುವಿನ ಬಗ್ಗೆ ಕೇಳುವ ಜನರಹೃದಯವನ್ನು ಸಿದ್ಧಪಡಿಸಲು ದೇವರನ್ನು ಕೇಳಿ. ನಿಮ್ಮ ಸಮರ್ಪಣೆಗಳಿಗೆ ವಿಧೇಯರಾಗಲು ನಿಮಗೆ ಶಕ್ತಿ ಮತ್ತು ಜ್ಞಾನವನ್ನು ಕೊಡುವಂತೆ ಆತನನ್ನು ಕೇಳಿ. ಇದು ಸಭೆಯಅಂತಿಮ ತೀರ್ಮಾನವಾಗಿದೆ.

ನಿಮ್ಮನ್ನೇ ಕೇಳಿ

  •     3/3 ಗುಂಪು ಮತ್ತು ಸತ್ಯವೇದ ಅಧ್ಯಯನ ಅಥವಾ ನೀವು ಹಿಂದೆ ಭಾಗವಾಗಿರುವ (ಅಥವಾ ಕೇಳಿರುವ) ಚಿಕ್ಕ ಗುಂಪಿನ ನಡುವೆ ಯಾವುದಾದರು ವ್ಯತ್ಯಾಸಗಳನ್ನುನೀವು ಗಮನಿಸಿದ್ದೀರಾ? ಹಾಗಿದ್ದಲ್ಲಿ, ಆ ವ್ಯತ್ಯಾಸಗಳು ಗುಂಪಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
  •     3/3 ಗುಂಪನ್ನು ಸರಳ ಸಭೆ ಎಂದು ಪರಿಗಣಿಸಬಹುದೇ? ಏಕೆ ಅಥವಾ ಏಕೆ ಇಲ್ಲ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress