ಯೇಸು ಹೇಳಿದ್ದು - “ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು ಎಂದು ಹೇಳಿದನು.” ಪರಿಶುದ್ಧ ಐಕ್ಯತೆ ಅಥವಾ "ಕರ್ತನ ಭೋಜನವು" ನಮ್ಮ ನಿಕಟ ಸಂಪರ್ಕ ಮತ್ತು ಯೇಸುವಿನೊಂದಿಗೆ ನಡೆಯುತ್ತಿರುವ ಸಂಬಂಧವನ್ನು ಆಚರಿಸಲು ಒಂದು ಮಾರ್ಗವಾಗಿದೆ. ಆಚರಿಸಲು ಸರಳ ವಿಧಾನವು ಇಲ್ಲಿದೆ!
ನೀವು ಯೇಸುವಿನ ಹಿಂಬಾಲಕರಾಗಿ ಒಟ್ಟುಗೂಡಿದಾಗ, ಶಾಂತವಾಗಿ ಧ್ಯಾನದಲ್ಲಿ ಸಮಯವನ್ನು ಕಳೆಯಿರಿ, ಮೌನವಾಗಿ ನಿಮ್ಮ ಪಾಪಗಳನ್ನು ಪರಿಗಣಿಸಿ ಮತ್ತು ಒಪ್ಪಿಕೊಳ್ಳಿ. ನೀವು ಸಿದ್ಧರಾದಾಗ, ಯಾರಾದರೂ ವಾಕ್ಯದಿಂದ ಈ ಭಾಗವನ್ನು ಓದುವಂತೆ ಮಾಡಿ – -“ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ - ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು - ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು.” - 1 ಕೊರಿಂಥ 11:23-24
ನಿಮ್ಮ ಗುಂಪಿಗೆ ನೀವು ಮೀಸಲಿಟ್ಟ ರೊಟ್ಟಿಯನ್ನು ವಿತರಿಸಿ ತಿನ್ನಿರಿ.
ಓದುವುದನ್ನು ಮುಂದುವರಿಸಿ – "ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ ಅಂದನು.” - 1 ಕೊರಿಂಥ 11:25
ನಿಮ್ಮ ಗುಂಪಿಗಾಗಿ ನೀವು ಮೀಸಲಿಟ್ಟಿರುವ ದ್ರಾಕ್ಷಾರಸವನ್ನು ಹಂಚಿಕೊಂಡು ಕುಡಿಯಿರಿ.
ಓದುವಿಕೆಯನ್ನು ಮುಗಿಸಿ: "ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ." 1 ಕೊರಿಂಥ 11:26
ಪ್ರಾರ್ಥನೆ ಅಥವಾ ಹಾಡುತ್ತಾ ಆಚರಿಸಿ. ನೀವು ಕರ್ತನ ಭೋಜನವನ್ನು ಹಂಚಿಕೊಂಡಿದ್ದೀರಿ. ನೀವು ಆತನವರು, ಮತ್ತು ಆತನು ನಿಮ್ಮವನು!