ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ... ಎಲ್ಲಾ ದಿನ, ಪ್ರತಿದಿನ.
ದೇವರ ರಾಜ್ಯದಲ್ಲಿ, ನಾವು ದೇವರಿಂದ ಕೇಳಿಸಿಕೊಂಡಾಗ ನಾವು ಇವುಗಳ ಮೂಲಕ ಉಸಿರಾಡುತ್ತೇವೆ:
ಯೇಸುವಿನ ಪ್ರತಿಯೊಬ್ಬ ಹಿಂಬಾಲಕರಿಗೆ ಒಳ್ಳೆಯ ಸುದ್ದಿ ಏನೆಂದರೆ, ನಾವು ಉಸಿರಾಡಿ ದೇವರಿಂದ ಕೇಳಿಸಿಕೊಂಡಾಗ ಮತ್ತು ನಾವು ಉಸಿರಾಡಿ ನಾವು ಕೇಳಿಸಿಕೊಂಡವುಗಳಿಗೆ ವಿಧೇಯರಾದಾಗ ಮತ್ತು ನಾವು ಕೇಳಿದ್ದನ್ನು ಇತರರೊಂದಿಗೆ ಹಂಚಿಕೊಂಡಾಗ - ದೇವರು ಇನ್ನಷ್ಟು ಸ್ಪಷ್ಟವಾಗಿ ಮಾತನಾಡುತ್ತಾನೆ.
ನಾವು ದೇವರಿಂದ ಕೇಳಿಸಿಕೊಂಡವುಗಳಂತೆ ನಡೆದುಕೊಂಡಾಗ ದೇವರರಾಜ್ಯದಲ್ಲಿ ನಾವು ಉಸಿರಾಡುತ್ತೇವೆ. ನಾವು ವಿಧೇಯರಾದಾಗ ನಾವು ಉಸಿರಾಡುತ್ತೇವೆ. ಕೆಲವೊಮ್ಮೆ ವಿಧೇಯರಾಗಲು ಉಸಿರಾಡುವುದು ಎಂದರೆ ನಮ್ಮ ಆಲೋಚನೆಗಳು, ನಮ್ಮ ಮಾತುಗಳು ಅಥವಾ ನಮ್ಮ ಕ್ರಿಯೆಗಳನ್ನು ಯೇಸು ಮತ್ತು ಆತನ ಚಿತ್ತದೊಂದಿಗೆ ಜೋಡಿಸಲು ಅವುಗಳನ್ನು ಬದಲಾಯಿಸುವುದಾಗಿದೆ. ಕೆಲವೊಮ್ಮೆ ವಿಧೇಯರಾಗಲು ಉಸಿರಾಡುವುದು ಎಂದರೆ ಯೇಸು ನಮ್ಮೊಂದಿಗೆ ಹಂಚಿಕೊಂಡದ್ದನ್ನು ಹಂಚಿಕೊಳ್ಳುವುದು - ಆತನು ನಮಗೆ ಕೊಟ್ಟದ್ದನ್ನು ಕೊಡುವುದು - ಇದರಿಂದ ದೇವರು ನಮ್ಮನ್ನು ಆಶೀರ್ವದಿಸುತ್ತಿರುವ ಹಾಗೆಯೇ ಇತರರು ಆಶೀರ್ವದಿಸಲ್ಪಡಬಹುದು. ಯೇಸುವಿನ ಹಿಂಬಾಲಕರಿಗೆ - ಈ ಉಸಿರನ್ನು ತೆಗೆದುಕೊಳ್ಳುವುದು ಮತ್ತು ಉಸಿರನ್ನು ಹೊರಬಿಡುವುದು ನಿರ್ಣಾಯಕವಾಗಿದೆ. ಇದೇ ನಮ್ಮ ಜೀವನವಾಗಿದೆ.