ಯೇಸುವಿನ ಹಿಂಬಾಲಕರಾಗಿ, ನಾವು ಪ್ರತಿದಿನ ವಾಕ್ಯವನ್ನು ಓದಬೇಕು. ಪ್ರತಿ ವಾರ ಸತ್ಯವೇದದಲ್ಲಿ ಕನಿಷ್ಠ 25-30 ಅಧ್ಯಾಯಗಳನ್ನು ಓದುವುದು ಉತ್ತಮ ಮಾರ್ಗದರ್ಶಿಯಾಗಿದೆ. ಎಸ್.ಓ.ಎ.ಪಿ.ಎಸ್ ಬಳಸಿಕೊಂಡು ದೈನಂದಿನ ದಿನಚರಿಯನ್ನು ಇಟ್ಟುಕೊಳ್ಳುವುದು ಸತ್ಯವೇದ ಓದುವಿಕೆಯ ಸ್ವರೂಪವು ನಿಮಗೆ ಅರ್ಥಮಾಡಿಕೊಳ್ಳಲು, ವಿಧೇಯರಾಗಲು ಮತ್ತು ಇನ್ನಷ್ಟು ಸಾರಲು ಸಹಾಯ ಮಾಡುತ್ತದೆ.
ಯೇಸುವಿನ ಯಾವುದೇ ಹಿಂಬಾಲಕರು ಬಳಸಬಹುದಾದ ಪರಿಣಾಮಕಾರಿ ಸತ್ಯವೇದ ಅಧ್ಯಯನದ ವಿಧಾನವನ್ನು ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಇದು ಸರಳ ಮಾರ್ಗವಾಗಿದೆ.
ಎಸ್ - "ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ." ಯೆಶಾಯ 55:8-9
ಓ - ಮಾನವನಾಗಿ, ನನಗೆ ತಿಳಿದಿರುವ ಮತ್ತು ಹೇಗೆ ಮಾಡಬೇಕೆಂದು ನನಗೆ ತಿಳಿದಿರುವುದರಲ್ಲಿ ನಾನು ಸೀಮಿತವಾಗಿದ್ದೇನೆ. ದೇವರು ಯಾವುದೇ ರೀತಿಯಲ್ಲಿ ಸೀಮಿತವಾಗಿಲ್ಲ. ಆತನು ಎಲ್ಲವನ್ನೂ ನೋಡುತ್ತಾನೆ ಮತ್ತು ತಿಳಿದಿರುತ್ತಾನೆ. ಆತನು ಏನು ಬೇಕಾದರೂ ಮಾಡಬಲ್ಲನು.
ಎ - ದೇವರು ಎಲ್ಲವನ್ನೂ ತಿಳಿದಿರುವ ಕಾರಣ ಮತ್ತು ಆತನ ಮಾರ್ಗಗಳು ಅತ್ಯುತ್ತಮವಾದವುಗಳಾಗಿರುವುದರಿಂದ, ನನ್ನ ಸ್ವಂತ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಬದಲಾಗಿ ನಾನು ಆತನನ್ನು ಅನುಸರಿಸಿದರೆ ನಾನು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದುತ್ತೇನೆ.
ಪಿ - ಕರ್ತನೇ, ನಿನ್ನನ್ನು ಮೆಚ್ಚಿಸುವ ಮತ್ತು ಇತರರಿಗೆ ಸಹಾಯ ಮಾಡುವ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆ ಕಾರಣವಾಗುತ್ತವೆ. ನನ್ನ ಆಲೋಚನೆಗಳು ನೋವುಂಟುಮಾಡುತ್ತವೆ. ಬದಲಾಗಿ ನಿನ್ನ ಮಾರ್ಗಗಳನ್ನು ಮತ್ತು ನಿನ್ನ ಆಲೋಚನೆಗಳನ್ನು ನನಗೆ ಬೋಧಿಸು. ನಾನು ನಿನ್ನನ್ನು ಹಿಂಬಾಲಿಸುವಾಗ ನಿನ್ನ ಪವಿತ್ರಾತ್ಮನು ನನಗೆ ಮಾರ್ಗದರ್ಶನ ಕೊಡಲಿ.
ಎಸ್ - ನಾನು ಈ ವಚನಗಳನ್ನು ಮತ್ತು ಈ ಅನ್ವಯವನ್ನು ನನ್ನ ಸ್ನೇಹಿತನಾದ ಸ್ಟೀವ್ ಅವರೊಂದಿಗೆ ಹಂಚಿಕೊಳ್ಳುತ್ತೇನೆ, ಅವರು ಕಷ್ಟಕರ ಸಮಯವನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಎದುರಿಸುತ್ತಿರುವ ಪ್ರಮುಖ ನಿರ್ಧಾರಗಳಿಗೆ ಮಾರ್ಗದರ್ಶನದ ಅಗತ್ಯವಿದೆ.