ನಾವು ಕ್ರಿಸ್ತನಲ್ಲಿ ಯಾರಾಗಿರಬೇಕು ಮತ್ತು ಕ್ರಿಸ್ತನಲ್ಲಿ ಇತರರೊಂದಿಗೆ ಹೇಗೆ ಸಂಬಂಧವನ್ನು ನಿರೀಕ್ಷಿಸಬೇಕು ಎಂಬುದನ್ನು ತಿಳಿಯಲು, "ಶಿಷ್ಯನು" ಮತ್ತು "ಸಭೆ"ಯ ಸರಳ ವ್ಯಾಖ್ಯಾನವನ್ನು ಹೊಂದಿಕೊಳ್ಳುವುದು ಪ್ರಾಮುಖ್ಯವಾಗಿದೆ.
ಶಿಷ್ಯನು ಎಂಬ ಪದದ ಅರ್ಥ ಹಿಂಬಾಲಕನು. ಶಿಷ್ಯನು ದೇವರ ಹಿಂಬಾಲಕನಾಗಿದ್ದಾನೆ. ಯೇಸು ಹೇಳಿದ್ದು, "ಭೂಪರಲೋಕಗಳಲ್ಲಿ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ." ಆದುದರಿಂದ ದೇವರ ರಾಜ್ಯದಲ್ಲಿ ಯೇಸು ನಮ್ಮ ಅರಸನಾಗಿದ್ದಾನೆ. ನಾವು ಆತನ ಪ್ರಜೆಗಳು, ಆತನ ಚಿತ್ತಕ್ಕೆ ಅಧೀನರಾಗಿದ್ದೇವೆ. ಆತನ ಆಸೆಗಳು, ಸಂಕಲ್ಪಗಳು, ಉದ್ದೇಶಗಳು, ಆದ್ಯತೆಗಳು ಮತ್ತು ಮೌಲ್ಯಗಳು ಅತ್ಯುನ್ನತವಾದವು ಮತ್ತು ಅತ್ಯುತ್ತಮವಾದವು ಆಗಿವೆ. ಆತನ ವಾಕ್ಯವೇ ಧರ್ಮಶಾಸ್ತ್ರ. ದೇವರ ರಾಜ್ಯದ ನಿಬಂಧನೆ ಏನಾಗಿದೆ? ಯೇಸು ತನ್ನ ಪ್ರಜೆಗಳಿಗೆ ಏನು ಮಾಡಬೇಕೆಂದು ಹೇಳುತ್ತಿದ್ದಾನೆ? ಹಳೆಯ ಒಡಂಬಡಿಕೆಯಿಂದ ದೇವರ ಆಜ್ಞೆಗಳನ್ನು, ಅಂದರೆ ಎಲ್ಲಾ ಧರ್ಮಶಾಸ್ತ್ರ ಮತ್ತು ಪ್ರವಾದನೆಗಳನ್ನು ಈ ಎರಡು ವಿಷಯಗಳಲ್ಲಿ ಸಂಕ್ಷಿಪ್ತಗೊಳಿಸಬಹುದು ಎಂದು ಯೇಸು ಬೋಧಿಸಿದನು: ದೇವರನ್ನು ಪ್ರೀತಿಸಬೇಕು ಮತ್ತು ಜನರನ್ನು ಪ್ರೀತಿಸಬೇಕು. ಯೇಸು ನಮಗೆ ಶಿಷ್ಯರನ್ನಾಗಿ ಮಾಡುವಂತೆ ಮತ್ತು ತಾನು ಆಜ್ಞಾಪಿಸಿದ ಎಲ್ಲವುಗಳಿಗೆ ವಿಧೇಯರಾಗಬೇಕೆಂದು ಅವರಿಗೆ ಉಪದೇಶಿಸುವಂತೆಯೂ ಆಜ್ಞಾಪಿಸಿದನು. ಶಿಷ್ಯರನ್ನಾಗಿ ಮಾಡುವುದು ಯೇಸು ಆಜ್ಞಾಪಿಸಿದ ಎಲ್ಲವನ್ನೂ ಅವರಿಗೆ ಉಪದೇಶಿಸುವುದನ್ನು ಒಳಗೊಂಡಿರುವುದರಿಂದ, ಹೊಸ ಒಡಂಬಡಿಕೆಯನ್ನು ಈ ಒಂದು ವಿಷಯದಲ್ಲಿ ಸಂಕ್ಷಿಪ್ತಗೊಳಿಸಬಹುದು: ಶಿಷ್ಯರನ್ನಾಗಿ ಮಾಡುವುದು. ಆದ್ದರಿಂದ, ಒಬ್ಬ ಶಿಷ್ಯನು ದೇವರನ್ನು ಪ್ರೀತಿಸುವ, ಜನರನ್ನು ಪ್ರೀತಿಸುವ ಮತ್ತು ಶಿಷ್ಯರನ್ನಾಗಿ ಮಾಡುವ ಯೇಸುವಿನ ಹಿಂಬಾಲಕನಾಗಿದ್ದಾನೆ.
ಸಭೆ ಎಂದರೇನು?
ನೀವು ಸಭೆಯನ್ನು ಕಟ್ಟಡವೆಂದು – ಅಂದರೆ ನೀವು ಹೋಗುವ ಸ್ಥಳವೆಂದು ಯೋಚಿಸಿರಬಹುದು. ಆದರೆ ದೇವರ ವಾಕ್ಯವು ಸಭೆಯನ್ನು ಒಟ್ಟುಗೂಡುವುದು – ಅಂದರೆ ನೀವು ಸೇರಿರುವ ಜನರ ಗುಂಪು ಎಂದು ಹೇಳುತ್ತದೆ. "ಸಭೆ" ಎಂಬ ಪದವನ್ನು ಸತ್ಯವೇದದಲ್ಲಿ ಮೂರು ವಿಭಿನ್ನ ರೀತಿಯಲ್ಲಿ ಬಳಸಲಾಗಿದೆ:
ಸರಳ ಸಭೆಗಳು ಆತ್ಮೀಕ ಕುಟುಂಬಗಳಾಗಿದ್ದು, ಯೇಸುವೇ ಅವರ ಕೇಂದ್ರ ಮತ್ತು ಅವರ ಅರಸನಾಗಿರುವನು. ಅವರು ದೇವರನ್ನು ಪ್ರೀತಿಸುವ, ಇತರರನ್ನು ಪ್ರೀತಿಸುವ ಮತ್ತು ಶಿಷ್ಯರನ್ನು ಮಾಡುವ ಆತ್ಮೀಕ ಕುಟುಂಬಗಳಾಗಿವೆ. ಈ ಸರಳ ಸಭೆಗಳ ಗುಂಪುಗಳು ಒಟ್ಟಾಗಿ ಏನಾದರೂ ದೊಡ್ಡದನ್ನು ಮಾಡಲು ಸಂಪರ್ಕಿಸಿದಾಗ, ಅವರು ನಗರ ಅಥವಾ ಪ್ರಾದೇಶಿಕ ಸಭೆಯನ್ನು ರಚಿಸಬಹುದು. ಸಾರ್ವತ್ರಿಕ ಸಭೆ ಎಲ್ಲಾ ಸರಳ ಸಭೆಗಳಿಂದ ಮಾಡಲ್ಪಟ್ಟಿದೆ, ಇದು ಪ್ರದೇಶಗಳಾಗಿ ಒಟ್ಟಿಗೆ ಅಂತರ್ಜಾಲವಾಗಿ ಮಾಡಲ್ಪಟ್ಟಿದೆ ಮತ್ತು ಇತಿಹಾಸದಾದ್ಯಂತ ವ್ಯಾಪಿಸಿದೆ.