ಪ್ರಾರ್ಥನಾ ನಡಿಗೆ ಎಂದರೆ ಅದು ಹೀಗೆ ಅರ್ಥಕೊಡುತ್ತದೆ - ನಡೆಯುವಾಗ ದೇವರಲ್ಲಿ ಪ್ರಾರ್ಥಿಸುವುದು. ನಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ತಲೆಬಾಗುವ ಬದಲು, ನಾವು ನಮ್ಮ ಸುತ್ತಲೂ ಕಾಣುವ ಅಗತ್ಯಗಳಿಗೆ ನಮ್ಮ ಕಣ್ಣುಗಳನ್ನು ತೆರೆದುಕೊಳ್ಳುತ್ತೇವೆ ಮತ್ತು ದೇವರು ಮಧ್ಯಪ್ರವೇಶಿಸುವಂತೆ ನಮ್ರತೆಯಿಂದ ಕೇಳಲು ನಮ್ಮ ಹೃದಯಗಳನ್ನು ತಗ್ಗಿಸುತ್ತೇವೆ. ನೀವು ಎರಡು ಅಥವಾ ಮೂರು ಚಿಕ್ಕ ಗುಂಪುಗಳಲ್ಲಿ ಪ್ರಾರ್ಥನೆ ನಡೆಸಬಹುದು ಅಥವಾ ನೀವೇ ಪ್ರಾರ್ಥನೆ ಮಾಡಬಹುದು.
ನೀವು ನಡೆಯುವಾಗ ಮತ್ತು ಪ್ರಾರ್ಥಿಸುವಾಗ, ಅವಕಾಶಗಳಿಗಾಗಿ ಎಚ್ಚರದಿಂದಿರಿ ಮತ್ತು ದಾರಿಯುದ್ದಕ್ಕೂ ನೀವು ಭೇಟಿಯಾಗುವ ವ್ಯಕ್ತಿಗಳು ಮತ್ತು ಗುಂಪುಗಳಿಗಾಗಿ ಪ್ರಾರ್ಥಿಸಲು ದೇವರ ಆತ್ಮನ ಪ್ರೇರಣೆಗಳಿಗೆ ಕಿವಿಗೊಡಿ. ದೇವರ ವಾಕ್ಯವು ಹೇಳುವುದೇನೆಂದರೆ, “ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ.
ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” ಇತರರಿಗಾಗಿ ಪ್ರಾರ್ಥಿಸುವ ದೇವರ ಆಜ್ಞೆಗೆ ವಿಧೇಯರಾಗಲು ಪ್ರಾರ್ಥನಾ ನಡಿಗೆ ಒಂದು ಸರಳ ಮಾರ್ಗವಾಗಿದೆ. ಮತ್ತು ಹೊರಗೆ ನಡೆಯುವಾಗ ದೇವರಲ್ಲಿ ಪ್ರಾರ್ಥಿಸುವುದು ಎಂದು ಇದು ಅರ್ಥಕೊಡುತ್ತದೆ.