ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ
ಯೇಸುವಿನ ಹಿಂಬಾಲಕರು ಕಡಿಮೆ ಮತ್ತು ಹೆಚ್ಚಿನವರ ನಡುವೆಯೂ ಸಹ ಶಿಷ್ಯರನ್ನಾಗಿ-ಮಾಡುವದನ್ನು ತ್ವರಿತವಾಗಿ ಮಾಡಲು ಸಮಾಧಾನವ್ಯಕ್ತಿಯು ಸಹಾಯ ಮಾಡಬಹುದು. ಆ ವ್ಯಕ್ತಿ ಯಾರಿರಬಹುದು ಮತ್ತು ನೀವು ಒಬ್ಬರನ್ನು ಹುಡುಕಿದಾಗ ಹೇಗೆ ತಿಳಿಯಬಹುವುದು ಎಂಬುದಕ್ಕೆ ಕೆಳಗಿನ ವೀಡಿಯೊವನ್ನು ವೀಕ್ಷಿಸಿ.
ಈ ವಿಡಿಯೋ ವೀಕ್ಷಿಸಿ
ಹೆಚ್ಚಾಗಿ ಇಲ್ಲದಿರುವ ಅಥವಾ ಬಹುಶಃ ಯಾರೂ ಇಲ್ಲದ ಸ್ಥಳದಲ್ಲಿ ನೀವು ಶಿಷ್ಯರನ್ನು ಮಾಡಲು ಬಯಸಿದಾಗ, ಸಮಾಧಾನದ ವ್ಯಕ್ತಿಯನ್ನು ಹುಡುಕುವುದು ನೀವು ಮಾಡುವ ಪ್ರಮುಖ ಕೆಲಸವಾಗಿರಬಹುದು.
ಸಮಾಧಾನದ ವ್ಯಕ್ತಿ:
ನಿಮ್ಮ ಕಥೆ, ದೇವರ ಕಥೆ ಮತ್ತು ಯೇಸುವಿನ ಸುವಾರ್ತೆಯನ್ನು ಕೇಳಲು ತೆರೆದಿರುವ ಯಾರಾದರೂ.
ಆತಿಥ್ಯ ವಹಿಸುವ ಮತ್ತು ಅವರ ಮನೆಗೆ ಅಥವಾ ಅವರ ಕೆಲಸದ ಸ್ಥಳಕ್ಕೆ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾರ್ಯಕ್ರಮಗಳಿಗೆ ಸೇರಲು ನಿಮ್ಮನ್ನು ಸ್ವಾಗತಿಸುವ ಯಾರಾದರೂ.
ಇತರರನ್ನು ತಿಳಿದಿರುವ (ಅಥವಾ ಇತರರಿಂದ ತಿಳಿದಿರುವ) ಮತ್ತು ಚಿಕ್ಕ ಗುಂಪು ಅಥವಾ ಗುಂಪನ್ನು ಒಟ್ಟಿಗೆ ಸೇರಿಸಲು ಆಸಕ್ತರಾಗಿರುವ ಯಾರಾದರೂ.
ನೀವು ಹೋದ ನಂತರವೂ –ತಾವು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾದ ನಂಬಿಗಸ್ತರು.
ಸಮಾಧಾನದ ವ್ಯಕ್ತಿಯನ್ನು ಗುರುತಿಸಲು ಮೂರು ಸರಳ ಮಾರ್ಗಗಳು:
ಸಮುದಾಯದಲ್ಲಿರುವ ಜನರಿಂದ ಶಿಫಾರಸುಗಳನ್ನು ಕೇಳಿ -- "ಇಲ್ಲಿ ನಂಬಿಗಸ್ತರಾಗಿರುವವರು ಯಾರು? ಈ ಸ್ಥಳದಲ್ಲಿ ತಮಗಿಂತ ಮೊದಲು ಇತರರ ಬಗ್ಗೆ ಯೋಚಿಸುವ ಯಾರಾದರೂ ಇದ್ದಾರೆಯೇ?"
ಪ್ರಾರ್ಥನಾ ನಡಿಗೆ ಅಥವಾ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ನೀವು ಭೇಟಿಯಾಗುವ ಯಾರಿಗಾದರೂ ಪ್ರಾರ್ಥನೆಯ ಅಗತ್ಯವಿದ್ದರೆ ಕೇಳಿರಿ.
ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರು ಕೆಲಸ ಮಾಡುತ್ತಿದ್ದಾನೆಯೇ ಎಂದು ನೋಡಲು ಪ್ರತಿ ಸಂಭಾಷಣೆಯಲ್ಲಿ ಆತ್ಮೀಕ ವಿಚಾರಗಳನ್ನು ಪರಿಚಯಿಸಿ.
ನಾವು ಅವರನ್ನು ಹೇಗೆ ಕಂಡುಕೊಂಡರೂ, ಶಿಷ್ಯರನ್ನಾಗಿ-ಮಾಡುವ ನಮ್ಮ ಹೆಚ್ಚಿನ ಸಮಯವನ್ನು ತೊಡಗಿಸಿಕೊಳ್ಳಬೇಕಾದ ವ್ಯಕ್ತಿಯು ಸಮಾಧಾನದ ವ್ಯಕ್ತಿ ಎಂದು ಯೇಸು ಹೇಳಿದ್ದನ್ನು ನೆನಪಿಡಿ.
ನಿಮ್ಮನ್ನೇ ಕೇಳಿ
"ಕೆಟ್ಟ ಹೆಸರನ್ನು" ಹೊಂದಿರುವ ಯಾರಾದರೂ (ಸಮಾರ್ಯದ ಸ್ತ್ರೀ ಅಥವಾ ಗೆರಸೇನರದಲ್ಲಿ ದೆವ್ವ ಹಿಡಿದ ವ್ಯಕ್ತಿಯಂತೆ) ನಿಜವಾಗಿಯೂ ಸಮಾಧಾನದ ವ್ಯಕ್ತಿಯಾಗಬಹುದೇ? ಏಕೆ ಅಥವಾ ಏಕೆ ಇಲ್ಲ?
ದೇವರ ರಾಜ್ಯದ ಪ್ರಸನ್ನತೆಯನ್ನು ಕಡಿಮೆ (ಅಥವಾ ಇಲ್ಲದಿರುವಿಕೆ) ಹೊಂದಿರುವಂತೆ ತೋರುವ ಸಮುದಾಯ ಅಥವಾ ನಿಮ್ಮ ಸಮೀಪವಿರುವ ಸಮಾಜದ ವಿಭಾಗ ಯಾವುದು? ಸಮಾಧಾನದ ವ್ಯಕ್ತಿಯು (ಮುಕ್ತ, ಆತಿಥ್ಯ, ಇತರರನ್ನು ತಿಳಿದಿರುವ ಮತ್ತು ಹಂಚಿಕೊಳ್ಳುವ ಯಾರಾದರೂ) ಆ ಸಮುದಾಯದಲ್ಲಿ ಸುವಾರ್ತೆ ಸಾರುವದನ್ನು ಹೇಗೆ ವೇಗಗೊಳಿಸಬಹುದು?