ಜೊತೆಗಾರರ ತರಬೇತುದಾರರ ಗುಂಪುಗಳು ಯೇಸುವಿನ ವೈಯಕ್ತಿಕ ಹಿಂಬಾಲಕರೊಂದಿಗೆ, ಸರಳ ಸಭೆಗಳೊಂದಿಗೆ, ಸೇವೆಯ ಸಂಸ್ಥೆಗಳೊಂದಿಗೆ ಅಥವಾ ಸರಳ ಸಭೆ ನೆಟ್‌ವರ್ಕ್‌ಗಳೊಂದಿಗೆ ಲೀಡರ್-ಟು-ಲೀಡರ್ ಮಾರ್ಗದರ್ಶನವನ್ನು ಬಳಸುತ್ತವೆ. ಈ ಗುಂಪುಗಳು 3/3 ಗುಂಪುಗಳನ್ನು ಮುನ್ನಡೆಸುತ್ತಿರುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುತ್ತವೆ. ಇದು 3/3 ಸ್ವರೂಪವನ್ನು ಸಹ ಹಿಂಬಾಲಿಸುತ್ತದೆ ಮತ್ತು ನಿಮ್ಮ ಪ್ರದೇಶದಲ್ಲಿ ದೇವರ ಕೆಲಸದ ಆತ್ಮೀಕ ಆರೋಗ್ಯವನ್ನು ನಿರ್ಣಯಿಸಲು ಪ್ರಬಲ ಮಾರ್ಗವಾಗಿದೆ. ಈ ಗುಂಪುಗಳು ವಾಕ್ಯದಿಂದ ಯೇಸುವಿನ ಸೇವೆಯ ಉದಾಹರಣೆಯನ್ನು ಹಿಂಬಾಲಿಸುತ್ತವೆ, ಪರಸ್ಪರ ಪ್ರಶ್ನೆಗಳನ್ನು ಕೇಳಿ ಮತ್ತು ಪ್ರತಿಕ್ರಿಯೆಯನ್ನು ಕೊಡುತ್ತವೆ - ಎಲ್ಲಾ 3/3 ಗುಂಪಿನಂತೆ ಒಂದೇ ಮೂಲಭೂತ ಸಮಯದ ರಚನೆಯನ್ನು ಬಳಸುತ್ತವೆ. ಯೇಸು ಹೇಳಿದ್ದು - “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು.” ಪ್ರಾರ್ಥನೆ, ವಿಧೇಯತೆ, ಅನ್ವಯ ಮತ್ತು ಲೆಕ್ಕ ಒಪ್ಪಿಸಬೇಕಾದ ಮೂಲಕ ಯೇಸುವಿನ ಹಿಂಬಾಲಕರು ಬೆಳೆಯುವುದಕ್ಕಾಗಿ ಸಹಾಯ ಮಾಡಲು ಸರಳವಾದ ಸ್ವರೂಪವನ್ನು ಒದಗಿಸುವುದು ಜೊತೆಗಾರರ ತರಬೇತುದಾರರ ಗುಂಪಿನ ಉದ್ದೇಶವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ - "ಒಬ್ಬರನ್ನೊಬ್ಬರು ಪ್ರೀತಿಸಬೇಕು."
ಮೊದಲ ಮೂರನೇ ಸಮಯದಲ್ಲಿ - ನೀವು ಮೂಲಭೂತ 3/3 ಗುಂಪಿನಲ್ಲಿರುವಂತೆಯೇ ಪ್ರಾರ್ಥನೆ ಮತ್ತು ಕಾಳಜಿಯಲ್ಲಿ ಸಮಯವನ್ನು ಕಳೆಯಿರಿ. ನಂತರ ಹಿಂದಿನ ಸಮರ್ಪಣೆಗಳಲ್ಲಿ ಗುಂಪಿನ ದರ್ಶನ ಮತ್ತು ನಂಬಿಗಸ್ತಿಕೆಯನ್ನು ನೋಡಲು ಸಮಯವನ್ನು ಕಳೆಯಿರಿ: ನೀವು ಕ್ರಿಸ್ತನಲ್ಲಿ ಎಷ್ಟು ಚೆನ್ನಾಗಿ ನೆಲೆಸಿದ್ದೀರಿ? [ವಾಕ್ಯ, ಪ್ರಾರ್ಥನೆ, ನಂಬಿಕೆ, ವಿಧೇಯತೆ, ಪ್ರಮುಖ ಸಂಬಂಧಗಳು?] ನಿಮ್ಮ ಗುಂಪು ಕಳೆದ ಅಧಿವೇಶನದಿಂದ ನಿಮ್ಮ ಕ್ರಿಯಾ ಯೋಜನೆಗಳನ್ನು ಪೂರ್ಣಗೊಳಿಸಿದೆಯೇ? ಅವುಗಳನ್ನು ಪರಿಶೀಲಿಸಿ.
ಗುಂಪು ಈ ಕೆಳಗಿನ ಸರಳ ಪ್ರಶ್ನೆಗಳನ್ನು ಚರ್ಚಿಸಿ:
ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಅವರಿಗೆ ತೋರಿಸಲು ಪವಿತ್ರಾತ್ಮನನ್ನು ಕೇಳುತ್ತಾ ಗುಂಪಿನಲ್ಲಿರುವ ಪ್ರತಿಯೊಬ್ಬರೊಂದಿಗೆ ಮೌನ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯಿರಿ:
ಅಂತಿಮವಾಗಿ, ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡುತ್ತಾ ಗುಂಪಾಗಿ ಸಮಯವನ್ನು ಕಳೆಯಿರಿ. ಪ್ರತಿಯೊಬ್ಬ ಸದಸ್ಯರಿಗಾಗಿ ಗುಂಪು ಪ್ರಾರ್ಥಿಸುವಂತೆ ನಡೆಸಿ ಮತ್ತು ಗುಂಪು ತಮ್ಮ ಬೇರೆ ಸಮಯದಲ್ಲಿ ತಲುಪುವವರ ಎಲ್ಲರ ಹೃದಯಗಳನ್ನು ಸಿದ್ಧಪಡಿಸುವಂತೆ ದೇವರನ್ನು ಕೇಳಿಕೊಳ್ಳಿರಿ. ಈ ಅಧಿವೇಶನದಲ್ಲಿ ದೇವರು ಅವರಿಗೆ ಬೋಧಿಸಿದ್ದನ್ನು ಅನ್ವಯಿಸಲು ಮತ್ತು ವಿಧೇಯರಾಗಲು ಗುಂಪಿನ ಪ್ರತಿಯೊಬ್ಬ ಸದಸ್ಯರಿಗೂ ಧೈರ್ಯ ಮತ್ತು ಶಕ್ತಿಯನ್ನು ಕೊಡುವಂತೆ ದೇವರಿಗೆ ಪ್ರಾರ್ಥಿಸಿ. ಒಬ್ಬ ಅನುಭವಿ ನಾಯಕನು ನಿರ್ದಿಷ್ಟವಾಗಿ ಕಿರಿಯ ನಾಯಕನಿಗಾಗಿ ಪ್ರಾರ್ಥಿಸಬೇಕಾದರೆ, ಆ ಪ್ರಾರ್ಥನೆಗೆ ಇದು ಸೂಕ್ತ ಸಮಯವಾಗಿದೆ. ಈ ಗುಂಪುಗಳು ಸಾಮಾನ್ಯವಾಗಿ ದೂರದಲ್ಲಿ ಭೇಟಿಯಾಗುವುದರಿಂದ, ನೀವು ಕರ್ತನ ಭೋಜನವನ್ನು ಆಚರಿಸಲು ಅಥವಾ ಊಟವನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದರೆ ಆರೋಗ್ಯ, ಕುಟುಂಬ ಮತ್ತು ಸ್ನೇಹಿತರ ಬಗ್ಗೆ ವಿಚಾರಿಸಲು ಸಮಯವನ್ನು ಖಚಿತಪಡಿಸಿಕೊಳ್ಳಿ.