ಜುಮೆ ತರಬೇತಿಯಿಂದ ಪ್ರಾರಂಭಿಸಿ
ಕೆಲವು ಸ್ನೇಹಿತರನ್ನು ಒಟ್ಟುಗೂಡಿಸಿ ಅಥವಾ ಅಸ್ತಿತ್ವದಲ್ಲಿರುವ ಚಿಕ್ಕ ಗುಂಪಿನೊಂದಿಗೆ ಕೋರ್ಸ್ ಮಾಡಿರಿ. ನಿಮ್ಮ ಸ್ವಂತ ತರಬೇತಿ ಗುಂಪನ್ನು ರಚಿಸಿ ಮತ್ತು ನಿಮ್ಮ ಪ್ರಗತಿಯನ್ನು ಗಮನಿಸಿ.
ಪ್ರಾರ್ಥನೆಯ ಚಕ್ರವು ಪ್ರಾರ್ಥನೆಯನ್ನು ಅಭ್ಯಾಸ ಮಾಡಲು ಸರಳವಾದ ಸಾಧನವಾಗಿದೆ, ಅದನ್ನು ನೀವೇ ಬಳಸಬಹುದು ಮತ್ತು ಯೇಸುವಿನ ಯಾವುದೇ ಹಿಂಬಾಲಕರೊಂದಿಗೆ ಹಂಚಿಕೊಳ್ಳಬಹುದು. ಕೇವಲ 12 ಸರಳ ಹಂತಗಳಲ್ಲಿ - ಪ್ರತಿ 5 ನಿಮಿಷಗಳು - ಪ್ರಾರ್ಥನೆಯ ಚಕ್ರವು ನಿಮಗೆ ಪ್ರಾರ್ಥನೆ ಮಾಡಲು ಸತ್ಯವೇದವು ಕಲಿಸುವ 12 ವಿಧಾನಗಳ ಮೂಲಕ ನಿಮಗೆ ಮಾರ್ಗದರ್ಶನ ಕೊಡುತ್ತದೆ. ಕೊನೆಯಲ್ಲಿ, ನೀವು ಒಂದು ಗಂಟೆ ಪ್ರಾರ್ಥಿಸುತ್ತೀರಿ. ಸತ್ಯವೇದವು ನಮಗೆ ಹೀಗೆ ಹೇಳುತ್ತದೆ -- "ಎಡೆಬಿಡದೆ ಪ್ರಾರ್ಥಿಸಿ." ನಾವು ಹಾಗೆ ಮಾಡುತ್ತೇವೆ ಎಂದು ನಮ್ಮಲ್ಲಿ ಹಲವರು ಹೇಳಲು ಸಾಧ್ಯವಿಲ್ಲ. ಆದರೆ ಈ ಗಂಟೆಯ ಪ್ರಾರ್ಥನೆಯ ನಂತರ - ನೀವು ಒಂದು ಹೆಜ್ಜೆ ಹತ್ತಿರವಾಗುತ್ತೀರಿ.
ಕೇವಲ 12 ಸರಳ ಹಂತಗಳಲ್ಲಿ - ಪ್ರತಿ 5 ನಿಮಿಷಗಳು - ಈ ಪ್ರಾರ್ಥನಾ ಕಾಲಚಕ್ರವು ನಿಮಗೆ ಸತ್ಯವೇದವು ನಮಗೆ ಪ್ರಾರ್ಥನೆ ಮಾಡಲು ಕಲಿಸುವ 12 ವಿಧಾನಗಳ ಮೂಲಕ ನಿಮಗೆ ಮಾರ್ಗದರ್ಶನ ಕೊಡುತ್ತದೆ. ಕೊನೆಯಲ್ಲಿ, ನೀವು ಒಂದು ಗಂಟೆ ಪ್ರಾರ್ಥಿಸುತ್ತೀರಿ.
ಸ್ತುತಿ - ಕರ್ತನನ್ನು ಸ್ತುತಿಸುವುದರ ಮೂಲಕ ನಿಮ್ಮ ಪ್ರಾರ್ಥನೆಯ ಸಮಯವನ್ನು ಪ್ರಾರಂಭಿಸಿ. ಇದೀಗ ನಿಮ್ಮ ಮನಸ್ಸಿನಲ್ಲಿರುವ ವಿಷಯಗಳಿಗಾಗಿ ಆತನನ್ನು ಸ್ತುತಿಸಿ. ಕಳೆದ ವಾರದಲ್ಲಿ ಆತನು ನಿಮ್ಮ ಜೀವನದಲ್ಲಿ ಮಾಡಿದ ಒಂದು ವಿಶೇಷ ವಿಷಯಕ್ಕಾಗಿ ಆತನನ್ನು ಸ್ತುತಿಸಿರಿ. ನಿಮ್ಮ ಕುಟುಂಬಕ್ಕೆ ಆತನ ಒಳ್ಳೆಯತನಕ್ಕಾಗಿ ಆತನನ್ನು ಸ್ತುತಿಸಿ.
ಕಾದಿರಿ - ಕರ್ತನನ್ನು ಕಾಯುತ್ತಾ ಸಮಯ ಕಳೆಯಿರಿ. ಮೌನವಾಗಿರಿ ಮತ್ತು ಆತನು ನಿಮಗಾಗಿ ಅವಲೋಕನಗಳನ್ನು ಒಟ್ಟುಗೂಡಿಸಲಿ.
ಅರಿಕೆಮಾಡಿ - ನಿಮ್ಮ ಜೀವನದಲ್ಲಿ ಆತನಿಗೆ ಇಷ್ಟವಾಗದ ಯಾವುದನ್ನಾದರೂ ತೋರಿಸಲು ಪವಿತ್ರಾತ್ಮನನ್ನು ಕೇಳಿರಿ. ತಪ್ಪಾದ ವರ್ತನೆಗಳು, ಹಾಗೆಯೇ ನೀವು ಇನ್ನೂ ಅರಿಕೆಯ ಪ್ರಾರ್ಥನೆಯನ್ನು ಮಾಡದ ನಿರ್ದಿಷ್ಟ ಕಾರ್ಯಗಳನ್ನು ಸೂಚಿಸಲು ಆತನನ್ನು ಕೇಳಿ. ಈಗ ನೀವು ಶುದ್ಧರಾಗುವಂತೆ ಕರ್ತನಿಗೆ ಅದನ್ನು ಒಪ್ಪಿಕೊಳ್ಳಿ.
ವಾಕ್ಯವನ್ನು ಓದಿ - ಕೀರ್ತನೆಗಳಲ್ಲಿ, ಪ್ರವಾದನೆಗಳಲ್ಲಿ ಅಥವಾ ಹೊಸ ಒಡಂಬಡಿಕೆಯಲ್ಲಿ ಇರುವ ಪ್ರಾರ್ಥನೆಯ ಭಾಗಗಳನ್ನು ಓದುತ್ತಾ ಸಮಯವನ್ನು ಕಳೆಯಿರಿ.
ಕೇಳಿರಿ - ನಿಮ್ಮ ಪರವಾಗಿ ವಿಜ್ಞಾಪನೆಗಳನ್ನು ಮಾಡಿ.
ಮಧ್ಯಸ್ಥಿಕೆ - ಇತರರ ಪರವಾಗಿ ವಿಜ್ಞಾಪನೆಗಳನ್ನು ಮಾಡಿ.
ವಾಕ್ಯದಿಂದ ಪ್ರಾರ್ಥಿಸಿ - ನಿರ್ದಿಷ್ಟ ವಾಕ್ಯಭಾಗಗಳಿಂದ ಪ್ರಾರ್ಥಿಸಿ. ವಾಕ್ಯದ ಪ್ರಾರ್ಥನೆಗಳು ಮತ್ತು ಹಲವಾರು ಕೀರ್ತನೆಗಳು ಈ ಉದ್ದೇಶಕ್ಕೆ ಉತ್ತಮವಾಗಿವೆ.
ಕೃತಜ್ಞತೆ ಸಲ್ಲಿಸಿ - ನಿಮ್ಮ ಜೀವನದ ವಿಷಯಗಳಿಗಾಗಿ, ನಿಮ್ಮ ಕುಟುಂಬದ ಪರವಾಗಿ ಮತ್ತು ನಿಮ್ಮ ಸಭೆ ಪರವಾಗಿ ಕರ್ತನಿಗೆ ಕೃತಜ್ಞತೆ ಸಲ್ಲಿಸಿ.
ಹಾಡಿ - ಸ್ತುತಿ ಅಥವಾ ಆರಾಧನೆಯ ಹಾಡುಗಳನ್ನು ಅಥವಾ ಇನ್ನೊಂದು ಸ್ತೋತ್ರ ಅಥವಾ ಆತ್ಮೀಕ ಗೀತೆಯನ್ನು ಹಾಡಿ.
ಧ್ಯಾನಮಾಡಿ - ನಿಮ್ಮೊಂದಿಗೆ ಮಾತನಾಡಲು ಕರ್ತನನ್ನು ಕೇಳಿ. ಆತನು ನಿಮಗೆ ಕೊಡುವ ಅನಿಸಿಕೆಗಳನ್ನು ರೆಕಾರ್ಡ್ ಮಾಡಲು ಪೆನ್ನು ಮತ್ತು ಕಾಗದವನ್ನು ಸಿದ್ಧವಾಗಿಟ್ಟುಕೊಳ್ಳಿ.
ಕಿವಿಗೊಡಿ - ನೀವು ಓದಿದ ವಿಷಯಗಳು, ನೀವು ಪ್ರಾರ್ಥಿಸಿದ ವಿಷಯಗಳು ಮತ್ತು ನೀವು ಹಾಡಿದ ವಿಷಯಗಳನ್ನು ವಿಲೀನಗೊಳಿಸಲು ಸಮಯವನ್ನು ಕಳೆಯಿರಿ ಮತ್ತು ಕರ್ತನು ನಿಮ್ಮೊಂದಿಗೆ ಮಾತನಾಡಲು ಹೇಗೆ ಎಲ್ಲವನ್ನೂ ಒಟ್ಟಿಗೆ ತರುತ್ತಾನೆ ಎಂಬುದನ್ನು ನೋಡಿ.
ಸ್ತುತಿಸಿ - ಕರ್ತನೊಂದಿಗೆ ನೀವು ಕಳೆಯಬೇಕಾದ ಸಮಯಕ್ಕಾಗಿ ಮತ್ತು ಆತನು ನಿಮಗೆ ಕೊಟ್ಟ ಅನಿಸಿಕೆಗಳಿಗಾಗಿ ಕರ್ತನನ್ನು ಸ್ತುತಿಸಿ. ಆತನ ಅದ್ಭುತ ಗುಣಗಳಿಗಾಗಿ ಆತನನ್ನು ಸ್ತುತಿಸಿ.
ಡಿಕ್ ಈಸ್ಟ್‌ಮನ್ ರವರ ಪುಸ್ತಕ ದಿ ಅವರ್ ದಟ್ ಚೇಂಜ್ಸ್ ದಿ ವರ್ಲ್ಡ್ ನಿಂದ © 2002 ಡಿಕ್ ಈಸ್ಟ್‌ಮನ್, ಚೋಸೆನ್ ಬುಕ್ಸ್, ಗ್ರ್ಯಾಂಡ್ ರಾಪಿಡ್ಸ್, ಎಂಐ, ಅನುಮತಿಯಿಂದ ಬಳಸಲಾಗಿದೆ.
ಕೆಲವು ಸ್ನೇಹಿತರನ್ನು ಒಟ್ಟುಗೂಡಿಸಿ ಅಥವಾ ಅಸ್ತಿತ್ವದಲ್ಲಿರುವ ಚಿಕ್ಕ ಗುಂಪಿನೊಂದಿಗೆ ಕೋರ್ಸ್ ಮಾಡಿರಿ. ನಿಮ್ಮ ಸ್ವಂತ ತರಬೇತಿ ಗುಂಪನ್ನು ರಚಿಸಿ ಮತ್ತು ನಿಮ್ಮ ಪ್ರಗತಿಯನ್ನು ಗಮನಿಸಿ.