ಸಭೆ ಹೇಗೆ ಪ್ರಾರಂಭವಾಯಿತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆರಂಭದಲ್ಲಿ ಯಾರೂ ವೃತ್ತಿಪರರಾಗಿರಲಿಲ್ಲ. ಆಶ್ಚರ್ಯವೇ? ಒಳ್ಳೆಯ ಸಂಗತಿ ಎಂದರೆ ದೇವರು ವೃತ್ತಿಪರರ ಅಗತ್ಯವಿಲ್ಲದ ಯೋಜನೆಯನ್ನು ಹೊಂದಿದ್ದನು. ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ. ಸಭೆಯ ಮೊದಲ ಆಂದೋಲನವನ್ನು ಪ್ರಾರಂಭಿಸಲು ಆತನು ಅದನ್ನು ಮಾಡಿದನು. ಮತ್ತು ಆತನು ಅದನ್ನು ಈ ದಿನವೂ ಮಾಡುತ್ತಾನೆ. ಪ್ರಥಮ ಸಭೆಯು ಪ್ರಪಂಚದಾದ್ಯಂತದ ಸಾಮಾನ್ಯ ಜನರನ್ನು ಯೇಸುವಿನ ಬಗ್ಗೆ ಇತರರಿಗೆ ತಿಳಿಸಲು ಕಳುಹಿಸಿತು. ಇದು ಸಾಮಾನ್ಯ ಜನರನ್ನು ದೇಶಾಧಿಪತಿಗಳು ಮತ್ತು ಮುಖ್ಯಾಧಿಕಾರಿಗಳು ಮತ್ತು ಆಡಳಿತಗಾರರು ಮತ್ತು ರಾಜರ ಮುಂದೆ ನಿಲ್ಲಲು ಕಳುಹಿಸಿತು. ಇದು ರೋಗಿಗಳನ್ನು ಗುಣಪಡಿಸಲು, ಹಸಿದವರಿಗೆ ಆಹಾರ ಒದಗಿಸಲು, ಸತ್ತವರನ್ನು ಎಬ್ಬಿಸಲು ಮತ್ತು ಪ್ರಪಂಚದ ಎಲ್ಲರಿಗೂ ದೇವರ ಆಜ್ಞೆಗಳನ್ನು ಬೋಧಿಸಲು ಸಾಮಾನ್ಯ ಜನರನ್ನು ಕಳುಹಿಸಿತು. ಪ್ರಥಮ ಸಭೆಯು ಜಗತ್ತನ್ನು ಬದಲಾಯಿಸಲು ಸಾಮಾನ್ಯ ಜನರನ್ನು ಕಳುಹಿಸಿತು. ಮತ್ತು ಅವರು ಹಾಗೆ ಮಾಡಿದರು.
ಯೇಸು ಹೇಳಿದ್ದನ್ನು ಮಾಡುವುದು ನಮ್ಮ ಕನಸಾಗಿದೆ – ಅಂದರೆ ದೇವರ ರಾಜ್ಯದಲ್ಲಿ ದೊಡ್ಡ ಪ್ರಭಾವ ಬೀರಲು ಪ್ರಪಂಚದಾದ್ಯಂತದ ಸಾಮಾನ್ಯ ಜನರಿಗೆ ಸಣ್ಣ ಸಾಧನಗಳನ್ನು ಬಳಸಲು ಸಹಾಯ ಮಾಡುವುದು! ತನ್ನ ಹಿಂಬಾಲಕರಿಗೆ ಯೇಸುವಿನ ಅಂತಿಮ ಸೂಚನೆಗಳು ಸರಳವಾಗಿದ್ದವು. ಆತನು ಹೀಗೆ ಹೇಳಿದನು –ಭೂಪರಲೋಕದಲ್ಲಿ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದದರಿಂದ, ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ಆಜ್ಞಾಪಿಸಿದ ಎಲ್ಲವನ್ನೂ ಅನುಸರಿಸಲು ಅವರಿಗೆ ಉಪದೇಶಮಾಡಿ, ಮತ್ತು ನಾನು ಯುಗದ ಸಮಾಪ್ತಿಯ ವರೆಗೂ ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಶಿಷ್ಯರನ್ನಾಗಿ ಮಾಡಬೇಕೆಂಬ ಯೇಸುವಿನ ಆಜ್ಞೆಯು ಸರಳವಾಗಿತ್ತು.
ಅದನ್ನು ಹೇಗೆ ಮಾಡಬೇಕೆಂಬುದನ್ನು ಕುರಿತು ಆತನ ಸೂಚನೆಗಳು ಸರಳವಾಗಿದ್ದವು:
ಹಾಗಾದರೆ ಶಿಷ್ಯರನ್ನು ಮಾಡುವ ಹಂತಗಳೇನು?
ಆತನು ಆಜ್ಞಾಪಿಸಿದವುಗಳಲ್ಲಿ ಶಿಷ್ಯರನ್ನಾಗಿ ಮಾಡುವುದು ಒಂದಾಗಿದೆ, ಅಂದರೆ ಯೇಸುವನ್ನು ಹಿಂಬಾಲಿಸುವ ಪ್ರತಿಯೊಬ್ಬ ಶಿಷ್ಯನು ಸಹ ಶಿಷ್ಯರನ್ನು ಹೇಗೆ ಮಾಡಬೇಕೆಂದು ಕಲಿಯಬೇಕು.