ಜ್ಞಾನ ಮತ್ತು ತರಬೇತಿಗಿಂತ ನಂಬಿಗಸ್ತಿಕೆಯು ಆತ್ಮೀಕ ಪರಿಪಕ್ವತೆಯ ಉತ್ತಮ ಅಳತೆಯಾಗಿದೆ. ನಾವು ಶಿಷ್ಯರನ್ನು ಅಧಿವಾಗಿ ಮಾಡಿದಾಗ, ನಾವು ಸರಿಯಾದ ವಿಷಯಗಳನ್ನು ಅಳೆಯುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳೋಣ. ನಾವು ಕೇಳಿದಕ್ಕೆ ವಿಧೇಯರಾದರೆ ಮತ್ತು ಇತರರೊಂದಿಗೆ ಹಂಚಿಕೊಂಡರೆ, ನಾವು ನಂಬಿಗಸ್ತರಾಗಿದ್ದೇವೆ. ನಾವು ಕೇಳಿದರೆ ಆದರೆ ನಾವು ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಿರಾಕರಿಸಿದರೆ, ನಾವು ಅಪನಂಬಿಗಸ್ತರಾಗಿದ್ದೇವೆ.
ಇಂದು ಸಭೆಯಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುವ ಎರಡು ವಿಚಾರಗಳಿವೆ.
ಮೊದಲನೆಯದು, ಒಬ್ಬರ ಆತ್ಮೀಕ ಪರಿಪಕ್ವತೆಯು ದೇವರ ವಾಕ್ಯದ ಬಗ್ಗೆ ಅವರಿಗೆ ಎಷ್ಟು ತಿಳಿದಿದೆ ಎಂಬುದಕ್ಕೆ ಸಂಬಂಧಿಸಿದೆ. ಅವರು ಸರಿಯಾದ ನಂಬಿಕೆ ಅಥವಾ ಸಾಂಪ್ರದಾಯಿಕತೆಯು ಒಬ್ಬರ ನಂಬಿಕೆಗೆ ಉತ್ತಮ ಅಳತೆಯಾಗಿದೆ ಎಂದು ಹೇಳುತ್ತಾರೆ.
ಎರಡನೆಯದು, ಅವರು ಸೇವೆಯನ್ನು ಪ್ರಾರಂಭಿಸುವುದಕ್ಕೆ ಮೊದಲು ಒಬ್ಬರ ನಾಯಕತ್ವದ ಸಾಮರ್ಥ್ಯಕ್ಕೆ "ಸಂಪೂರ್ಣ ತರಬೇತಿ" ಅಗತ್ಯವಿದೆ ಎಂಬ ಕಲ್ಪನೆ ಹೊಂದಿರುವರು. ಅವರು ಸಂಪೂರ್ಣ ಜ್ಞಾನವು - ಒಬ್ಬರ ಸೇವೆ ಮಾಡುವ ಸಾಮರ್ಥ್ಯಕ್ಕೆ ಉತ್ತಮ ಅಳತೆಯಾಗಿದೆ ಎಂದು ಹೇಳುತ್ತಾರೆ. ಮೊದಲ ಕಲ್ಪನೆಯೊಂದಿಗಿರುವ ಸಮಸ್ಯೆ – ಇದು ಸಾಂಪ್ರದಾಯಿಕತೆಯ ಮೇಲೆ ಅವಲಂಬಿತವಾಗಿದೆ - ಅಥವಾ "ಸರಿಯಾದ ನಂಬಿಕೆ" ಎಂದರೆ ಸೈತಾನನು ಯಾವುದೇ ಮನುಷ್ಯನಿಗಿಂತ ಹೆಚ್ಚು ಗ್ರಂಥವನ್ನು ತಿಳಿದಿದ್ದಾನೆ.
ದೇವರ ವಾಕ್ಯವು ಹೀಗೆ ಹೇಳುತ್ತದೆ - ಒಬ್ಬನೇ ದೇವರಿದ್ದಾನೆಂದು ನೀವು ನಂಬುತ್ತೀರಿ. ಒಳ್ಳೆಯದು! ದೆವ್ವಗಳು ಸಹ ಅದನ್ನು ನಂಬಿ ನಡುಗುತ್ತವೆ. ಒಬ್ಬರ ಆತ್ಮೀಕ ಪರಿಪಕ್ವತೆಯ ಉತ್ತಮ ಅಳತೆ ಸರಿಯಾದ ಕ್ರಿಯೆ - "ಸರಿಯಾದ ಅಭ್ಯಾಸ" ಆಗಿದೆ. ನಾವು ತಿಳಿದಿರುವ ಆಧಾರದ ಮೇಲೆ ಪ್ರರಿಪಕ್ವತೆಯನ್ನು ಅಳೆಯುವುದಕ್ಕಿಂತ ವಿಧೇಯರಾಗುವಲ್ಲಿ ಮತ್ತು ಸಾರುವಲ್ಲಿ ನಂಬಿಗಸ್ತಿಕೆಯೊಂದಿಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.
ಎರಡನೆಯ ಕಲ್ಪನೆಯ ಸಮಸ್ಯೆ - ಅವರು ಮುನ್ನಡೆಸುವ ಮೊದಲು ಯಾರಾದರೂ ಸಂಪೂರ್ಣವಾಗಿ ತರಬೇತಿ ಪಡೆಯಬೇಕು ಎಂಬುದೇ, ಆದರೆ ಒಬ್ಬರಾದರೂ ಸಂಪೂರ್ಣವಾಗಿ ತರಬೇತಿ ಪಡೆದಿರುವದಿಲ್ಲ. ದೇವರ ರಾಜ್ಯದಲ್ಲಿ ಕೆಲವು ಪ್ರಮುಖ ಕೆಲಸವನ್ನು ಮಾಡಲು ಕಲಿಯಲು ಇನ್ನೂ ಅನೇಕ ವಿಷಯಗಳನ್ನು ಹೊಂದಿರುವ ಯುವ ನಾಯಕರನ್ನು ಕಳುಹಿಸಲು ಯೇಸು ಮಾದರಿಯಾಗಿದ್ದನು. ದೇವರ ವಾಕ್ಯವು ಹೀಗೆ ಹೇಳುತ್ತದೆ - ಯೇಸು ತನ್ನ ಹನ್ನೆರಡು ಅಪೊಸ್ತಲರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳು ಮತ್ತು ರೋಗಗಳ ಮೇಲೆ ಸಂಪೂರ್ಣ ಅಧಿಕಾರವನ್ನು ಕೊಟ್ಟನು.
ನಂತರ ಅವರು ದೇವರ ರಾಜ್ಯದ ಬಗ್ಗೆ ಹೇಳಲು ಮತ್ತು ರೋಗಿಗಳನ್ನು ಗುಣಪಡಿಸುವುದಕ್ಕಾಗಿ ಅವರನ್ನು ಕಳುಹಿಸಿದರು. ಯೇಸು ರಕ್ಷಕನೆಂದು ಪೇತ್ರನು ತನ್ನ ನಂಬಿಕೆಯನ್ನು ಹಂಚಿಕೊಳ್ಳುವುದಕ್ಕೆ ಮೊದಲು ಈ ಜನರನ್ನು ಕಳುಹಿಸಿದನು – ಇದನ್ನು ನಾವು ನಂಬಿಕೆಯ ಮೊದಲ ಹೆಜ್ಜೆ ಎಂದು ಪರಿಗಣಿಸುತ್ತೇವೆ. ಮತ್ತು ಕಳುಹಿಸಲ್ಪಟ್ಟ ನಂತರವೂ ಯೇಸು ಪೇತ್ರನನ್ನು ತಪ್ಪುಗಳಿಗಾಗಿ ಅನೇಕ ಸಾರಿ ಖಂಡಿಸಿದನು ಮತ್ತು ಪೇತ್ರನು ನಂತರವೂ ಯೇಸುವನ್ನು ಸಂಪೂರ್ಣವಾಗಿ ನಿರಾಕರಿಸಿದನು. ಇತರ ಹಿಂಬಾಲಕರು ಯಾರು ಶ್ರೇಷ್ಠರು ಮತ್ತು ದೇವರ ಭವಿಷ್ಯದ ರಾಜ್ಯದಲ್ಲಿ ಪ್ರತಿಯೊಬ್ಬರೂ ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಕುರಿತು ವಾದಿಸಿದರು.
ಅವರೆಲ್ಲರೂ ಇನ್ನೂ ಕಲಿಯಲು ಬಹಳಷ್ಟು ಹೊಂದಿದ್ದರು ಆದರೆ ಯೇಸು ಅವರಿಗೆ ಈಗಾಗಲೇ ತಿಳಿದಿದ್ದನ್ನು ಹಂಚಿಕೊಳ್ಳುವಂತೆ ಕಾರ್ಯಮಾಡಿದನು. ನಂಬಿಗಸ್ತಿಕೆಯು - ಜ್ಞಾನಕ್ಕಿಂತ ಹೆಚ್ಚಾದದ್ದು - ಯಾರಾದರೂ ಯೇಸುವನ್ನು ಅನುಸರಿಸಲು ಪ್ರಾರಂಭಿಸಿದ ತಕ್ಷಣವೇ ಪ್ರಾರಂಭಿಸಬಹುದು.
ಪರಿಪಕ್ವತೆಯು ಸಮಯ-ಅವಲಂಬಿತವಾಗಿದೆ, ಆದರೆ ಶಿಷ್ಯನ ಜೀವನದಲ್ಲಿ ಯಾವುದೇ ಮತ್ತು ಪ್ರತಿ ಹಂತದಲ್ಲಿಯೂ ನಂಬಿಗಸ್ತಿಕೆಯನ್ನು ತೋರ್ಪಡಿಸಬಹುದು.