3/3 ಗುಂಪು ("ಮೂರು-ಮೂರನೇ" ಎಂದು ಉಚ್ಚರಿಸುವುದು) ಅವರ ಸಮಯವನ್ನು 3 ಭಾಗಗಳಾಗಿ ವಿಂಗಡಿಸುತ್ತದೆ. ಈ ಸ್ವರೂಪವು ಕರ್ತನ ಹಿಂದಿನ ಮಾರ್ಗದರ್ಶನಗಳಿಗೆ ನಂಬಿಗಸ್ತಿಕೆ, ಕರ್ತನಿಂದ ಒಟ್ಟಿಗೆ ಕೇಳುವುದು ಮತ್ತು ಕರ್ತನು ಕೊಟ್ಟ ಯಾವುದೇ ಮಾರ್ಗದರ್ಶನಕ್ಕೆ ಮುಂದಿನ ದಿನಗಳಲ್ಲಿ ವಿಧೇಯತೆಯನ್ನು ಯೋಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಈ 3/3 ಮಾದರಿಯನ್ನು ಸರಳ ಸಭೆ (ಅಥವಾ ಹೋಮ್ ಸಭೆ), ನಾಯಕತ್ವ ಚಿಕ್ಕಗುಂಪು ಅಥವಾ ಜೊತೆಗಾರರ ಮಾರ್ಗದರ್ಶನ ಗುಂಪಿಗೆ ಬಳಸಬಹುದು.
ಇದು ಹೇಗೆ ಕೆಲಸ ಮಾಡುತ್ತದೆ:
ಕಾಳಜಿ ಮತ್ತು ಪ್ರಾರ್ಥನೆ: ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸಮಯ ತೆಗೆದುಕೊಳ್ಳಿ. ನಂತರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೋರಾಟವನ್ನು ಕುರಿತು ಹಂಚಿಕೊಳ್ಳಬೇಕು. ಅವರ ಬಲಭಾಗದಲ್ಲಿರುವ ವ್ಯಕ್ತಿಯು ಅವರು ಹಂಚಿಕೊಳ್ಳುವ ಸಂಗತಿಗಳ ಬಗ್ಗೆ ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ. ಹೆಚ್ಚಿನ ಗಮನದ ಅಗತ್ಯವಿರುವ ವಿಷಯದಲ್ಲಿ ಯಾರಿಗಾದರೂ ಹೋರಾಟವಿದ್ದರೆ, ಆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿ.
ದರ್ಶನ: ಒಟ್ಟಿಗೆ ಹಾಡುವುದು ಮತ್ತು ದೇವರನ್ನು ಪ್ರೀತಿಸುವುದು, ಇತರರನ್ನು ಪ್ರೀತಿಸುವುದು, ಯೇಸುವನ್ನು ಕುರಿತು ಇತರರೊಂದಿಗೆ ಹಂಚಿಕೊಳ್ಳುವುದು, ಹೊಸ ಗುಂಪುಗಳನ್ನು ಪ್ರಾರಂಭಿಸುವುದು ಮತ್ತು ಇತರರಿಗೆ ಅದೇ ರೀತಿ ಮಾಡಲು ಸಹಾಯ ಮಾಡುವ ಕಾರ್ಯಗಳಿಗೆ ಸಮಯವನ್ನು ಕಳೆಯಿರಿ. ಪರ್ಯಾಯವಾಗಿ ಜನರು ಈ ವಿಷಯಗಳನ್ನು ತಿಳಿಯಪಡಿಸುವ ಸತ್ಯವೇದ ಭಾಗಗಳನ್ನು ಹಂಚಿಕೊಳ್ಳಬಹುದು. ಪರಿಶೀಲಿಸಿ: ಹಿಂದಿನ ವಾರದಿಂದ ಅವರು ಬರೆದ ಸಮರ್ಪಣೆಗಳಿಗೆ ಸಂಬಂಧಿಸಿದಂತೆ ಅವರು ಹೇಗೆ ಮಾಡಿದರು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಹಂಚಿಕೊಳ್ಳಲಿ:
ಅವರು ಸಮರ್ಪಣೆಯನ್ನು ಅನುಸರಿಸಲು ಮರೆತಿದ್ದರೆ ಅಥವಾ ಹಾಗೆ ಮಾಡಲು ಅವಕಾಶವಿಲ್ಲದಿದ್ದರೆ, ಹಿಂದಿನ ವಾರದ ಆ ಸಮರ್ಪಣೆಗಳನ್ನು ಈ ವಾರದ ಸಮರ್ಪಣೆಗಳಿಗೆ ಸೇರಿಸಬೇಕು. ಯಾರಾದರೂ ದೇವರಿಂದ ಸ್ಪಷ್ಟವಾಗಿ ಕೇಳಿದ್ದಕ್ಕೆ ವಿಧೇಯರಾಗಲು ನಿರಾಕರಿಸಿದರೆ ಅದನ್ನು ಸಭೆಯ ಶಿಸ್ತಿನ ಸಮಸ್ಯೆ ಎಂದು ಪರಿಗಣಿಸಬೇಕು.
ಪ್ರಾರ್ಥನೆ: ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ಈ ವಾಕ್ಯವನ್ನು ನಿಮಗೆ ಕಲಿಸಲು ದೇವರನ್ನು ಕೇಳಿ.
ಓದಿ ಮತ್ತು ಚರ್ಚಿಸಿ: ಈ ವಾರದ ವಾಕ್ಯಭಾಗವನ್ನು ಓದಿ. ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:
ಈ ವಾರದ ಭಾಗವನ್ನು ಮತ್ತೊಮ್ಮೆ ಓದಿ.
ವಿಧೇಯರಾಗಿ. ತರಬೇತಿ ಕೊಡಿ. ಸಾರಿರಿ: ಮೌನ ಪ್ರಾರ್ಥನೆಯಲ್ಲಿ ಕನಿಷ್ಠ ಐದು ನಿಮಿಷ ತೆಗೆದುಕೊಳ್ಳಿ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಪವಿತ್ರಾತ್ಮನು ತೋರಿಸುವಂತೆ ಪ್ರಾರ್ಥಿಸಿ, ನಂತರ ಸಮರ್ಪಣೆಗಳನ್ನು ಮಾಡಿ. ಪ್ರತಿಯೊಬ್ಬರೂ ಸಮರ್ಪಣೆಗಳನ್ನು ಬರೆಯಬೇಕು ಆದ್ದರಿಂದ ಅವರು ತಿಳುವಳಿಕೆಯಿಂದ ಜನರಿಗೆ ಪ್ರಾರ್ಥಿಸಬಹುದು ಮತ್ತು ಅವರನ್ನು ಲೆಕ್ಕ ಒಪ್ಪಿಸುವವರನ್ನಾಗಿ ಮಾಡಬಹುದು. ಅವರು ಪ್ರತಿ ವಾರ ಪ್ರತಿ ಪ್ರಶ್ನೆಗೆ ಸಂಬಂಧಿಸಿದ ಏನನ್ನಾದರೂ ಕೇಳದಿರಬಹುದು. ಅವರು ದೇವರಿಂದ ಕೇಳಿದ ಖಚಿತತೆಯಿಲ್ಲದ ಪ್ರತಿಕ್ರಿಯೆಯನ್ನು ಅವರು ಹಂಚಿಕೊಂಡರೆ ಅವರು ಗಮನಿಸಬೇಕು, ಆದರೆ ಆ ಸಂದರ್ಭದಲ್ಲಿ ಲೆಕ್ಕ ಒಪ್ಪಿಸಬೇಕಾದ ವಿಷಯವನ್ನು ಬೇರೆ ಮಟ್ಟದಲ್ಲಿ ನಿರ್ವಹಿಸುವುದರಿಂದ ಒಳ್ಳೆಯದು ಎಂದು ಅವರು ಭಾವಿಸುತ್ತಾರೆ.
ಅಭ್ಯಾಸ: ಎರಡು ಅಥವಾ ಮೂರು ಗುಂಪುಗಳಲ್ಲಿ, ಪ್ರಶ್ನೆ 5, 6 ಅಥವಾ 7 ರಲ್ಲಿ ನೀವು ಏನು ಮಾಡಲು ಸಮರ್ಪಣೆ ಮಾಡಿಕೊಂಡಿದ್ದೀರಿ ಎಂಬುದನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ಕಷ್ಟಕರವಾದ ಸಂಭಾಷಣೆ ಅಥವಾ ಶೋಧನೆಯನ್ನು ಎದುರಿಸುವುದು; ಇಂದಿನ ವಾಕ್ಯಭಾಗವನ್ನು ಬೋಧಿಸಲು ಅಭ್ಯಾಸ ಮಾಡಿ, ಅಥವಾ ಸುವಾರ್ತೆಯನ್ನು ಹಂಚಿಕೊಳ್ಳಲು ಅಭ್ಯಾಸ ಮಾಡಿ.
ದೇವರೊಂದಿಗೆ ಮಾತನಾಡಿ: ಎರಡು ಅಥವಾ ಮೂರು ಒಂದೇ ಗುಂಪುಗಳಲ್ಲಿ, ಪ್ರತಿ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಿ. ಈ ವಾರ ಯೇಸುವಿನ ಬಗ್ಗೆ ಕೇಳುವ ಜನರ ಹೃದಯವನ್ನು ಸಿದ್ಧಪಡಿಸಲು ದೇವರನ್ನು ಕೇಳಿ. ನಿಮ್ಮ ಸಮರ್ಪಣೆಗಳಿಗೆ ವಿಧೇಯರಾಗಲು ನಿಮಗೆ ಶಕ್ತಿ ಮತ್ತು ಜ್ಞಾನವನ್ನು ಕೊಡುವಂತೆ ಆತನನ್ನು ಕೇಳಿ. ಇದು ಸಭೆಯ ಅಂತಿಮ ತೀರ್ಮಾನವಾಗಿದೆ.