ದೇವರ ಕಥೆಯನ್ನು ಹಂಚಿಕೊಳ್ಳಲು ಅನೇಕ ವಿಧಾನಗಳಿವೆ.
ಒಂದು ಉತ್ತಮ ವಿಧಾನವು ನೀವು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಅವರ ಲೋಕದ ದೃಷ್ಟಿಕೋನ ಮತ್ತು ಅವರ ಜೀವಿತದ ಅನುಭವಗಳ ಮೇಲೆ ಆಧಾರಗೊಂಡಿರುತ್ತದೆ. ಕೇಳಿಸಿಕೊಳ್ಳಲು ಸಿದ್ಧವಾಗಿರುವ ಹೃದಯಗಳ ಮೇಲೆ ಕಾರ್ಯಮಾಡಲು ಹಂಚಿಕೊಳ್ಳುವುದಕ್ಕಾಗಿ ಸಿದ್ಧರಾಗಿರುವ ಹೃದಯಗಳನ್ನು ದೇವರು ಉಪಯೋಗಿಸುವನು. ಇದು ಆತನ ಕೆಲಸವಾಗಿದೆ. ಒಳಗೆ ಸೇರಿಕೊಳ್ಳಲು ಆತನು ನಮ್ಮನ್ನು ಆಮಂತ್ರಿಸುತ್ತಾನೆ.
ದೇವರ ಕಥೆಯನ್ನು ಹಂಚಿಕೊಳ್ಳಲು ಒಂದು ವಿಧಾನವೆಂದರೆ ನಾವು ಮೂರು ವೃತ್ತಗಳು ಎಂದು ಕರೆಯುವ ಸರಳ ರೇಖಾಚಿತ್ರವನ್ನು ಕುರಿತು ಹಂಚಿಕೊಳ್ಳುವುದು ಮತ್ತು ವಿವರಿಸುವುದು.
ನಾವೆಲ್ಲರೂ ಬಹಳವಾಗಿ ವಿಚ್ಛಿನ್ನವಾಗಿರುವ ಲೋಕದಲ್ಲಿ ವಾಸಿಸುತ್ತಿದ್ದೇವೆ.
ಕಷ್ಟ, ಮರಣ, ಯುದ್ಧ, ಕಾಯಿಲೆ, ವ್ಯಸನಗಳ ಕಥೆಗಳನ್ನು ನಾವು ನೋಡುತ್ತೇವೆ ಮತ್ತು ಕೇಳಿಸಿಕೊಳ್ಳುತ್ತೇವೆ. ಇದು ಎಲ್ಲಾ ಕಡೆಗಳಲ್ಲಿದೆ. ಆದರೆ ಇದು ದೇವರ ಮೂಲ ವಿನ್ಯಾಸವಲ್ಲ.
ದೇವರ ಪರಿಪೂರ್ಣ ವಿನ್ಯಾಸವು ಪ್ರೀತಿ, ಸಂತೋಷ, ಐಕ್ಯತೆ ಮತ್ತು ಸಮಾಧಾನದಿಂದ ತುಂಬಿರುವ ಲೋಕವಾಗಿದೆ.
ನಾವು ದೇವರ ಪರಿಪೂರ್ಣ ವಿನ್ಯಾಸದಿಂದ ಹೊರಬಂದು ವಿಚ್ಛಿನ್ನತೆಯೊಳಕ್ಕೆ ಬಂದ ರೀತಿಯನ್ನು ಸತ್ಯವೇದವು "ಪಾಪ" ಎಂದು ಕರೆಯುತ್ತದೆ.
ಪಾಪವೆಂದರೆ ದೇವರ ಮಾರ್ಗದಿಂದ ತಿರುಗಿಕೊಂಡು ನಮ್ಮ ಸ್ವಂತ ಮಾರ್ಗವನ್ನು ಅನುಸರಿಸುವುದಾಗಿದೆ. ಪಾಪವು ನಮ್ಮನ್ನು ದೇವರಿಂದ ದೂರ ಮಾಡುತ್ತದೆ. ಪಾಪವು ನಮ್ಮನ್ನು ವಿಚ್ಛಿನ್ನತೆಗೆ ನಡೆಸುತ್ತದೆ. ಪಾಪವು ನಮ್ಮನ್ನು ಆತ್ಮೀಕ ಮರಣಕ್ಕೆ ನಡೆಸುತ್ತದೆ.
ಜನರು ವಿಚ್ಛಿನ್ನತೆಯಿಂದ ಹೊರಬರಲು ಬಯಸುತ್ತಾರೆ. ನಾವು ಹೊರಬರಲು ಎಲ್ಲಾ ರೀತಿಯ ವಿಭಿನ್ನ ಕಾರ್ಯಗಳನ್ನು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಕೆಲವರು ಮಾದಕ ಪದಾರ್ಥ ಮತ್ತು ಮಧ್ಯಪಾನವನ್ನು ಪ್ರಯತ್ನಿಸುವರು. ನಮ್ಮಲ್ಲಿ ಕೆಲವರು ಒಳ್ಳೆಯ ಕ್ರಿಯೆಗಳ ಮೂಲಕ ಅಥವಾ ಸಾಕಷ್ಟು ಹಣವನ್ನು ಸಂಪಾದಿಸುವ ಮೂಲಕ ಹೊರಬರಲು ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಕೆಲವರು ಸಂಬಂಧವು ಅವರನ್ನು ಹೊರಹಾಕುತ್ತದೆ ಎಂದು ಭಾವಿಸುತ್ತಾರೆ. ಕೆಲವರು ಧರ್ಮವನ್ನು ಸಹ ಪ್ರಯತ್ನಿಸುತ್ತಾರೆ – ಒಳ್ಳೆಯ ನಡವಳಿಕೆ ಅಥವಾ ಇತರರಿಗೆ ಸಹಾಯ ಮಾಡುವುದು ನಮ್ಮನ್ನು ವಿಮುಕ್ತಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ಇವುಗಳಲ್ಲಿ ಯಾವುದೂ ವಾಸ್ತವವಾಗಿ ವಿಚ್ಛಿನ್ನತೆಯ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಒಂದು ಕ್ಷಣ ನಾವು ದೂರ ಹೋಗಬೇಕೆಂದು ಭಾವಿಸಿದಾಗಲೂ ... ನಾವು ಪ್ರಾರಂಭಿಸಿದ ಸ್ಥಳಕ್ಕೆ ಹಿಂತಿರುಗುತ್ತೇವೆ. ಇಲ್ಲಿ ಒಂದು ಕಠಿಣ ಸತ್ಯವಿದೆ. ನಾವು ಇನ್ನೂ ಅಲ್ಲೇ ಇದ್ದರೆ -- ಅಂದರೆ ಇನ್ನೂ ವಿಚ್ಛಿನ್ನತೆಯಲ್ಲಿದ್ದರೆ - ಈ ಜೀವಿತವು ಕೊನೆಗೊಂಡಾಗ, ನಾವು ದೇವರಿಂದ ಶಾಶ್ವತವಾಗಿ ಸದಾಕಾಲಕ್ಕೂ ದೂರವಾಗಿದ್ದೇವೆ ಎಂದು ಸತ್ಯವೇದವು ಹೇಳುತ್ತದೆ.
ಸತ್ಯವೇದವು ಆ ಸ್ಥಳವನ್ನು “ನರಕ”ಎಂದು ಕರೆಯುತ್ತದೆ.
ಆದರೆ ನಾವು ವಿಚ್ಛಿನ್ನತೆಯಲ್ಲಿಯೇ ಇರಬೇಕೆಂದು ದೇವರು ಬಯಸುವುದಿಲ್ಲ.
ಸತ್ಯವೇದವು ಹೀಗೆ ಹೇಳುತ್ತದೆ -- ದೇವರು ನಮ್ಮನ್ನು ಎಷ್ಟೊ ಹೆಚ್ಚಾಗಿ ಪ್ರೀತಿಸಿ, ನಮಗಾಗಿ ಒಂದು ಮಾರ್ಗವನ್ನು ಮಾಡಲು ಆತನು ತನ್ನ ಸ್ವಂತ ಮಗನನ್ನೇ ಕಳುಹಿಸಿದನು. ನಮ್ಮ ಪಾಪವನ್ನು ಅಳಿಸಿಹಾಕಲು ಮತ್ತು ವಿಚ್ಛಿನ್ನತೆಯಿಂದ ನಮ್ಮನ್ನು ಹೊರತರಲು ಯೇಸು ಭೂಮಿಗೆ ಬಂದನು.
ಹೀಗೆ ದೇವ ಕುಮಾರನಾದ ಯೇಸು ತನ್ನ ಮರಣದಿಂದ ನಮ್ಮ ಪಾಪವನ್ನು ಅಳಿಸಿಬಿಟ್ಟನು.
ಯೇಸು ಸತ್ತು ಸಮಾಧಿ ಮಾಡಲ್ಪಟ್ಟ ಮೂರು ದಿನಗಳ ನಂತರ, ಆತನು ಸತ್ತವರೊಳಗಿಂದ ತಿರಿಗಿ ಎದ್ದು ಬಂದನು. ಆತನ ಮಹಾ ಬಲಿದಾನದ ನಿಮಿತ್ತ, ದೇವರು ಯೇಸುವನ್ನು ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತಕ್ಕೂ ಒಡೆಯನನ್ನಾಗಿ ಮಾಡಿದನು.
ಅರಸನಾದ ಯೇಸು ನಮಗೆ ವಿಚ್ಛಿನ್ನತೆಯಿಂದ ಹೊರಬರಲು ಒಂದು ಮಾರ್ಗವನ್ನು ಮಾಡಿದನು. ದೇವರು ಹೇಳಿದ್ದೇನಂದರೆ ಒಂದುವೇಳೆ...
… ನಾವು ನಮ್ಮ ಪಾಪದಿಂದ ತಿರುಗಿಕೊಂಡು ...
… ಯೇಸು ನಮಗಾಗಿ ಸತ್ತನೆಂದು ನಂಬಿದರೆ...
…ಹಾಗೂ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರೆ ...
ಆಗ ದೇವರು ನಮ್ಮನ್ನು – ಯೇಸುವಿನ ಹಾಗೆಯೇ -- ದೇವರ ಕುಟುಂಬದ ಭಾಗವಾಗಿ -- ಶಾಶ್ವತವಾಗಿ ಹೊಸ ರೀತಿಯ ಜೀವನದಲ್ಲಿ ನಡೆಸುವನು.
ನಾವು ನಂತರ ಬಿದ್ದುಹೋಗಿರುವ ಲೋಕದಲ್ಲಿ ಈ ಹೊಸ ಜೀವನವನ್ನು ಮಾದರಿಯಾಗಿಟ್ಟುಕೊಂಡು, ಮತ್ತು ಪರಿಪೂರ್ಣವಾದ ಸಂಪೂರ್ಣತೆಯಲ್ಲಿ ನಾವು ಆತನೊಂದಿಗೆ ಸದಾಕಾಲ ಇರಬಹುದಾದ ನೂತನ ಆಕಾಶ ಮತ್ತು ನೂತನ ಭೂಮಿಯನ್ನು ಉಂಟುಮಾಡುವುದಕ್ಕಾಗಿ ಯೇಸುವಿನ ಬರೋಣವನ್ನು ಎದುರುನೋಡುತ್ತೇವೆ.
ನಾವು ಆತನೊಂದಿಗೆ ನಮ್ಮ ಸಂಬಂಧದಲ್ಲಿ ಬೆಳೆಯಬೇಕೆಂದು ದೇವರು ಬಯಸುತ್ತಾನೆ. ದೇವರು ನಮ್ಮನ್ನು ತನ್ನ ಮೂಲ ಪರಿಪೂರ್ಣ ವಿನ್ಯಾಸಕ್ಕೆ ಹಿಂತಿರುಗಿಸಬೇಕೆಂದು ಬಯಸುತ್ತಾನೆ.
ದೇವರ ಕುಟುಂಬದ ಭಾಗವಾಗಿ, ಯೇಸು ನಮಗೆ ಒಂದು ಧ್ಯೇಯವನ್ನು ಕೊಡುತ್ತಾನೆ – ಅದು ಬದುಕಲು ಒಂದು ಕಾರಣ -- ಮತ್ತು ಅತ್ಯುತ್ತಮವಾದ ಜೀವನವನ್ನು ನಡೆಸಲು ಒಂದು ಮಾರ್ಗವಾಗಿರುತ್ತದೆ.
ನಮಗಾಗಿ ಯೇಸುವಿನ ಸೇವಾಗುರಿ ಎಂದರೆ ಹೊರಟು ಹೋಗುವುದು.
ತನ್ನ ತಂದೆಯಾದ ದೇವರು ಆತನನ್ನು ಕಳುಹಿಸಿದಂತೆಯೇ - ಯೇಸು ನಮ್ಮನ್ನು ಕಳುಹಿಸುತ್ತಾನೆ -- ಇತರರಿಗೆ ಬಿಡುಗಡೆ ಮಾಡಲು ಮತ್ತು ದೇವರ ನಿತ್ಯ ಕುಟುಂಬದ ಭಾಗವಾಗಿರಲು ಸಹಾಯ ಮಾಡುವುದಕ್ಕಾಗಿ ಬಿದ್ದುಹೋದ ಲೋಕದೊಳಕ್ಕೆ ತಿರಿಗಿ ಕಳುಹಿಸುವನು.
ಈ ಮೂರು ವೃತ್ತಗಳ ಲೋಕದಲ್ಲಿ, ಕೇವಲ ಎರಡು ರೀತಿಯ ಜನರಿದ್ದಾರೆ --
ದೇವರ ರಕ್ಷಿಸುವ ಧ್ಯೇಯ ಜೀವಿತವನ್ನು ನಡೆಸುವ ದೇವರ ಪರಿಪೂರ್ಣ ವಿನ್ಯಾಸದ ಭಾಗವಾಗಿರುವ ಜನರು ... ದೇವರನ್ನು ಆತನ ನಿತ್ಯ ಕುಟುಂಬಕ್ಕೆ ತಿರಿಗಿ ಸೇರಿಕೊಳ್ಳಲು ಸಹಾಯ ಮಾಡುವರು.
ಅಥವಾ…
ಇನ್ನೂ ವಿಚ್ಛಿನ್ನತೆಯಲ್ಲಿರುವ ಜನರು ... ... ಯಾರಾದರೂ ತಮ್ಮನ್ನು ರಕ್ಷಿಸುತ್ತಾರೆ ಎಂದು ನಿರೀಕ್ಷಿಸುತ್ತಾ … ಬಿಡಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ದೇವರ ಕಥೆಯನ್ನು ಹಂಚಿಕೊಳ್ಳಲು ಅನೇಕ ಮಾರ್ಗಗಳಿವೆ. ಪ್ರಮುಖ್ಯ ವಿಷಯವೆಂದರೆ ಹಂಚಿಕೊಳ್ಳುವುದು. ಕಿವಿಗೊಡಲು ಸಿದ್ಧರಾಗಿರುವ ಹೃದಯಗಳ ಮೇಲೆ ಕಾರ್ಯ ಮಾಡುವುದಕ್ಕಾಗಿ ಹಂಚಿಕೊಳ್ಳಲು ಸಿದ್ಧರಾಗಿರುವ ಹೃದಯಗಳನ್ನು ದೇವರು ಉಪಯೋಗಿಸುತ್ತಾನೆ. ಇದು ಆತನ ಕೆಲಸವಾಗಿದೆ. ಒಳಗೆ ಸೇರಿಕೊಳ್ಳಲು ಆತನು ನಮ್ಮನ್ನು ಆಮಂತ್ರಿಸುತ್ತಾನೆ.