ನಾಯಕತ್ವದ ಚಿಕ್ಕಗುಂಪುಗಳು ಜೀವಿತಾವಧಿಯಲ್ಲಿ ಉಳಿಯುವ ಪುನರುತ್ಪಾದಿಸುವ ಮಾದರಿಗಳನ್ನು ಕಲಿಯಲು ಕಡಿಮೆ ಸಮಯದಲ್ಲಿ ವೈಯಕ್ತಿಕ ವಿಶ್ವಾಸಿಗಳನ್ನು ಸಜ್ಜುಗೊಳಿಸುತ್ತವೆ. ಈಗಾಗಲೇ ಯೇಸುವನ್ನು ಹಿಂಬಾಲಿಸುವ ಅಲೆಮಾರಿಗಳು, ವಿದ್ಯಾರ್ಥಿಗಳು, ಮಿಲಿಟರಿ ಸಿಬ್ಬಂದಿ, ಕಾಲೋಚಿತ ಕೆಲಸಗಾರರು ನಾಯಕತ್ವದ ಚಿಕ್ಕಗುಂಪುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಸಂಸ್ಕೃತಿ, ಅವರ ವೃತ್ತಿ ಅಥವಾ ಅವರ ಜೀವನದ ಋತುವಿನ ನಿಮಿತ್ತ - ಅವರು ನಡೆಯುತ್ತಿರುವ ಗುಂಪನ್ನು ಸ್ಥಾಪಿಸಲು ಕಷ್ಟಪಡಬಹುದು, ಆದರೆ ಅವರು ಪ್ರಯಾಣಿಸುವ ಪ್ರತಿಯೊಂದು ಸ್ಥಳದಲ್ಲಿ ಗುಂಪುಗಳನ್ನು ಹೇಗೆ ಪ್ರಾರಂಭಿಸಬೇಕು ಎಂದು ಅವರಿಗೆ ಸಂಪೂರ್ಣವಾಗಿ ತರಬೇತಿ ಕೊಡಬಹುದು. ಈ ವಿಶೇಷ ಉದ್ದೇಶದ ಗುಂಪುಗಳು ಕಲಿಯುವವರಿಗೆ ನಾಯಕರಾಗಲು ಸಹಾಯ ಮಾಡುತ್ತವೆ, ಅವರು ನಂತರ ಹೊಸ ಗುಂಪುಗಳನ್ನು ಪ್ರಾರಂಭಿಸುತ್ತಾರೆ, ಹೊಸ ಸಭೆಗಳಿಗೆ ತರಬೇತಿ ಕೊಡುತ್ತಾರೆ ಮತ್ತು ದೇವರ ಕುಟುಂಬವನ್ನು ಬೆಳೆಸಲು ಹೆಚ್ಚಿನ ನಾಯಕತ್ವದ ಚಿಕ್ಕಗುಂಪುಗಳನ್ನು ಪ್ರಾರಂಭಿಸುತ್ತಾರೆ.
ಜನರ ಗುಂಪು ಒಂದೇ ಸಮಯದಲ್ಲಿ ನಂಬಿಕೆಗೆ ಬಂದಾಗ ನಾಯಕತ್ವದ ಚಿಕ್ಕಗುಂಪುಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ವೈಯಕ್ತಿಕ ಅನುಸರಣೆಗಳು ಅಥವಾ ಆತ್ಮೀಕ ತರಬೇತಿ ಇಲ್ಲದೆ ಸಹ ಜೀವಿತಾವಧಿಯಲ್ಲಿ ಚಿಕ್ಕಗುಂಪುಗಳನ್ನು ಮಾಡುವವರಾಗಲು ಒಂದು ಕುಟುಂಬ, ಸ್ನೇಹಿತರ ನೆಟ್‌ವರ್ಕ್ ಅಥವಾ ಒಂದು ಸಣ್ಣ ಹಳ್ಳಿಯನ್ನು ಸಹ ಅಲ್ಪಾವಧಿಯಲ್ಲಿ ತರಬೇತಿ ಕೊಡಬಹುದು.
ಆರೈಕೆ:
ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸಮಯ ತೆಗೆದುಕೊಳ್ಳಿ. ನಂತರ ಪ್ರತಿಯೊಬ್ಬ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು ಹಂಚಿಕೊಳ್ಳಬೇಕು. ಅವರ ಬಲಭಾಗದಲ್ಲಿರುವ ವ್ಯಕ್ತಿ ಅವರು ಹಂಚಿಕೊಳ್ಳುವ ವಿಷಯಗಳ ಬಗ್ಗೆ ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ. ಯಾರಾದರೂ ಯಾವುದಾರು ವಿಷಯದೊಂದಿಗೆ ಹೋರಾಡುತ್ತಿದ್ದವರಿಗೆ ಹೆಚ್ಚಿನ ಗಮನ ಅಗತ್ಯವಿದ್ದರೆ, ಆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿ.
ದರ್ಶನ (ಎಂದಿಗೂ ಬಿಟ್ಟುಬಿಡಬೇಡಿ):
ಒಟ್ಟಿಗೆ ಹಾಡಲು ಸಮಯವನ್ನು ಕಳೆಯಿರಿ ಮತ್ತು ದೇವರನ್ನು ಪ್ರೀತಿಸುವುದು, ಇತರರನ್ನು ಪ್ರೀತಿಸುವುದು, ಯೇಸುವನ್ನು ಇತರರೊಂದಿಗೆ ಹಂಚಿಕೊಳ್ಳುವುದು, ಹೊಸ ಗುಂಪುಗಳನ್ನು ಪ್ರಾರಂಭಿಸುವುದು ಮತ್ತು ಇತರರಿಗೆ ಅದೇ ರೀತಿ ಮಾಡಲು ಸಹಾಯ ಮಾಡುವ ವಿಷಯವನ್ನು ಜೋಡಿಸಿ. ಪರ್ಯಾಯವಾಗಿ, ಜನರು ಈ ವಿಷಯಗಳನ್ನು ಸಂಭಾಷಣೆ ಮಾಡುವ ಸತ್ಯವೇದ ಭಾಗಗಳನ್ನು ಹಂಚಿಕೊಳ್ಳಬಹುದು.
ಪರಿಶೀಲಿಸಿ (ಎಂದಿಗೂ ಬಿಟ್ಟುಬಿಡಬೇಡಿ): ಹಿಂದಿನ ವಾರದಿಂದ ಅವರು ಬರೆದ ಸಮರ್ಪಣೆಗಳಿಗೆ ಸಂಬಂಧಿಸಿದಂತೆ ಅವರು ಹೇಗೆ ಮಾಡಿದರು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಹಂಚಿಕೊಳ್ಳಲಿ:
ತಮ್ಮ ಸಮರ್ಪಣೆಯನ್ನು ಅನುಸರಿಸಲು ಮರೆತಿದ್ದರೆ ಅಥವಾ ಹಾಗೆ ಮಾಡಲು ಅವಕಾಶವಿಲ್ಲದಿದ್ದರೆ, ಹಿಂದಿನ ವಾರದ ಆ ಸಮರ್ಪಣೆಗಳನ್ನು ಈ ವಾರದ ಸಮರ್ಪಣೆಗಳಿಗೆ ಸೇರಿಸಬೇಕು. ಯಾರಾದರೂ ದೇವರಿಂದ ಸ್ಪಷ್ಟವಾಗಿ ಕೇಳಿದಕ್ಕೆ ವಿಧೇಯರಾಗಲು ನಿರಾಕರಿಸಿದರೆ, ಅದನ್ನು ಸಭೆ ಶಿಸ್ತಿನ ಸಮಸ್ಯೆ ಎಂದು ಪರಿಗಣಿಸಬೇಕು.
ಪ್ರಾರ್ಥನೆ:
ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ಈ ವಾಕ್ಯವನ್ನು ನಿಮಗೆ ಕಲಿಸಲು ದೇವರನ್ನು ಕೇಳಿ.
ಓದಿ ಮತ್ತು ಚರ್ಚಿಸಿ:
ಈ ವಾರದ ಭಾಗವನ್ನು ಓದಿ. ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:
ಈ ವಾರದ ವಾಕ್ಯಭಾಗವನ್ನು ಮತ್ತೊಮ್ಮೆ ಓದಿ.
ವೀಧೇಯರಾಗಿ. ತರಬೇತಿ ಕೊಡಿ. ಸಾರಿರಿ. (ಎಂದಿಗೂ ಬಿಟ್ಟುಬಿಡಬೇಡಿ):
ಮೌನ ಪ್ರಾರ್ಥನೆಯಲ್ಲಿ ಕನಿಷ್ಠ ಐದು ನಿಮಿಷಗಳನ್ನು ತೆಗೆದುಕೊಳ್ಳಿ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ತೋರಿಸಲು ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ, ನಂತರ ಸಮರ್ಪಣೆಗಳನ್ನು ಮಾಡಿ. ಪ್ರತಿಯೊಬ್ಬರೂ ಸಮರ್ಪಣೆಗಳನ್ನು ಬರೆಯಬೇಕು ಇದರಿಂದ ಅವರು ತಿಳುವಳಿಕೆಯಿಂದ ಜನರಿಗಾಗಿ ಪ್ರಾರ್ಥಿಸಬಹುದು ಮತ್ತು ಅವರನ್ನು ಲೆಕ್ಕ ಒಪ್ಪಿಸಬೇಕಾದವರನ್ನಾಗಿ ಮಾಡಬಹುದು. ಅವರು ಪ್ರತಿ ವಾರ ಪ್ರತಿ ಪ್ರಶ್ನೆಗೆ ಸಂಬಂಧಿಸಿದ ಏನನ್ನಾದರೂ ಕೇಳದಿರಬಹುದು. ಅವರು ದೇವರಿಂದ ಕೇಳಿದ ಖಚಿತತೆಯಿಲ್ಲದ ಪ್ರತಿಕ್ರಿಯೆಯನ್ನು ಅವರು ಹಂಚಿಕೊಂಡರೆ ಅವರು ಗಮನಿಸಬೇಕು ಆದರೆ ಆ ಸಂದರ್ಭದಲ್ಲಿ ಲೆಕ್ಕ ಒಪ್ಪಿಸಬೇಕಾದದ್ದನ್ನು ಬೇರೆ ಮಟ್ಟದಲ್ಲಿ ನಿರ್ವಹಿಸುವುದರಿಂದ ಒಳ್ಳೆಯದು ಎಂದು ಅವರು ಭಾವಿಸುತ್ತಾರೆ.
ಅಭ್ಯಾಸ ಮಾಡಿ (ಎಂದಿಗೂ ಬಿಟ್ಟುಬಿಡಬೇಡಿ):
ಇಬ್ಬರು ಅಥವಾ ಮೂವರ ಗುಂಪುಗಳಲ್ಲಿ, ಪ್ರಶ್ನೆ 5, 6, ಅಥವಾ 7 ರಲ್ಲಿ ನೀವು ಏನು ಮಾಡಲು ಸಮರ್ಪಿಸಿಕೊಂಡಿದ್ದೀರಿ ಎಂಬುದನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ಕಷ್ಟಕರವಾದ ಸಂಭಾಷಣೆ ಅಥವಾ ಶೋಧನೆಯನ್ನು ಎದುರಿಸುವುದು, ಇಂದಿನ ವಾಕ್ಯಭಾಗವನ್ನು ಕಲಿಸಲು ಅಭ್ಯಾಸ ಮಾಡಿ ಅಥವಾ ಸುವಾರ್ತೆ ಸಾರಲು ಅಭ್ಯಾಸ ಮಾಡಿ.
ದೇವರೊಂದಿಗೆ ಮಾತನಾಡಿ:
ಇಬ್ಬರು ಅಥವಾ ಮೂವರ ಒಂದೇ ಗುಂಪುಗಳಲ್ಲಿ, ಪ್ರತಿಯೊಬ್ಬ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಿ. ಈ ವಾರ ಯೇಸುವಿನ ಬಗ್ಗೆ ಕೇಳುವ ಜನರ ಹೃದಯವನ್ನು ಸಿದ್ಧಪಡಿಸಲು ದೇವರನ್ನು ಕೇಳಿ. ನಿಮ್ಮ ಸಮರ್ಪಣೆಗಳಿಗೆ ವಿಧೇಯರಾಗಲು ನಿಮಗೆ ಬಲವನ್ನು ಮತ್ತು ಜ್ಞಾನವನ್ನು ಕೊಡುವಂತೆ ಆತನನ್ನು ಕೇಳಿ. ಇದು ಕೂಟದ ಅಂತಿಮ ತೀರ್ಮಾನವಾಗಿದೆ.
ಅಧಿವೇಶನದ ಉದ್ದಕ್ಕೂ ಗುಂಪಿನಲ್ಲಿ ನಾಯಕತ್ವವನ್ನು ಬದಲಾಯಿಸಿ ಇದರಿಂದ ಪ್ರತಿಯೊಬ್ಬರೂ ಮುನ್ನಡೆಸಲು, ಪ್ರಾರ್ಥಿಸಲು ಅಥವಾ ಪ್ರಶ್ನೆಗಳನ್ನು ಕೇಳಲು ಅವಕಾಶವನ್ನು ಹೊಂದಿರುತ್ತಾರೆ. ಯಾವುದು ಸರಿಯಾಗಿ ನಡೆಯುತ್ತಿದೆ, ಸ್ವಲ್ಪ ಅಭ್ಯಾಸದಿಂದ ಯಾವುದು ಉತ್ತಮವಾಗಬಹುದು ಮತ್ತು ಗುಂಪಿನ ಪ್ರತಿಯೊಬ್ಬ ಸದಸ್ಯರು ಇನ್ನಷ್ಟು ಬೆಳೆಯಲು ಉತ್ತಮ ಮುಂದಿನ ಹಂತ ಯಾವುದು ಎಂಬಿವುಗಳನ್ನು ಕುರಿತು ಒಬ್ಬರಿಗೊಬ್ಬರು ಪ್ರೋತ್ಸಾಹಿಸಿ ಮತ್ತು ತರಬೇತಿ ಕೊಡಿ.