3/3 ಗುಂಪಿನ ಕೂಟದ ಮಾದರಿ


ಜುಮೆ ತರಬೇತಿಗೆ ತಿರಿಗಿ ಸ್ವಾಗತ. ಈ ಅಧಿವೇಶನದಲ್ಲಿ, 3/3 (ಗಮನಿಸಿ: "ಮೂರು-ಮೂರನೆಯ" ಎಂದು ಉಚ್ಚರಿಸಿ) ಗುಂಪಿನ ಕೂಟದ ಒಂದು ವಿಧಾನವಾಗಿದ್ದು, ಯೇಸುವಿನ ಹಿಂಬಾಲಕರು ಒಬ್ಬರಿಗೊಬ್ಬರು ಯೇಸುವನ್ನು ಹೆಚ್ಚು ನಿಕಟವಾಗಿ ಹಿಂಬಾಲಿಸಲು ಸಹಾಯ ಮಾಡುತ್ತದೆ.

ಯೇಸು ಹೇಳಿದ್ದು - “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” ಇದು ಬಲವಾದ ವಾಗ್ದಾನವಾಗಿದೆ ಮತ್ತು ಯೇಸುವಿನ ಪ್ರತಿಯೊಬ್ಬ ಹಿಂಬಾಲಕರು ಇದರ ಲಾಭವನ್ನು ಪಡೆದುಕೊಳ್ಳಬೇಕು. ಆದರೆ ನೀವು ಗುಂಪಾಗಿ ಸೇರಿದಾಗ, ನಿಮ್ಮ ಸಮಯವನ್ನು ಹೇಗೆ ಕಳೆಯಬೇಕು?

ಒಂದು 3/3 (ಗಮನಿಸಿ: "ಮೂರು-ಮೂರನೆಯ" ಎಂದು ಉಚ್ಚರಿಸಿ) ಗುಂಪು ತಮ್ಮ ಸಮಯವನ್ನು ಮೂರು ಭಾಗಗಳಾಗಿ ವಿಂಡಿಸುತ್ತದೆ, ಇದರಿಂದ ಯೇಸು ಆಜ್ಞಾಪಿಸಿದ ಕೆಲವು ಪ್ರಮುಖ ಸಂಗತಿಗಳಿಗೆ ವಿಧೇಯರಾಗಲು ಅಭ್ಯಾಸ ಮಾಡಬಹುದು.

ಇದು ಹೀಗೆ ಕೆಲಸ ಮಾಡುತ್ತದೆ:

ಈ ಅಧಿವೇಶನದಲ್ಲಿ ನಿಮ್ಮ ಗುಂಪಿಗೆ 3/3 ಗುಂಪಿನ ಸ್ವಲ್ಪ ಮಾಹಿತಿಯಿಂದ ಮಾರ್ಗದರ್ಶನ ಕೊಡಲಾಗುತ್ತದೆ ಮತ್ತು ನಿಜ ಜೀವನದಲ್ಲಿ ಪೂರ್ಣ ಮಾಹಿತಿಗೆ ನಿಮ್ಮನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಆತ್ಮೀಕ ಉಸಿರಾಟದ ಅಧಿವೇಶನವನ್ನು ನೆನಪಿಸಿಕೊಳ್ಳಿರಿ? ಉಸಿರು ತೆಗೆದುಕೊಳ್ಳಿ, ದೇವರಿಂದ ಕೇಳಿಸಿಕೊಳ್ಳಿ. ಉಸಿರು ಹೊರಬಿಡಿ, ನೀವು ಕೇಳಿಸಿಕೊಂಡವುಗಳಿಗೆ ವಿಧೇರಾಗಿರಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿರಿ. ಇದೇ 3/3 ಗುಂಪುಗಳನ್ನು ಕುರಿತಾಗಿದೆ. 3/3 ಗುಂಪು ತಮ್ಮ ಸಮಯವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತದೆ, ಇದರಿಂದಾಗಿ ಅವರು ದೇವರಿಂದ ಕೇಳಲು ಮತ್ತು ಯೇಸು ಆಜ್ಞಾಪಿಸಿದ ಕೆಲವು ಪ್ರಮುಖ ಸಂಗತಿಗಳಿಗೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅಭ್ಯಾಸ ಮಾಡಬಹುದು.

ಈ ಅಭ್ಯಾಸದ ಅವಧಿಯು ಒಂದು ಗಂಟೆಗಿಂತ ಸ್ವಲ್ಪ ಹೆಚ್ಚು ಇರುತ್ತದೆ ಮತ್ತು ಅದು ತ್ವರಿತವಾಗಿ ಮುಗಿಯುತ್ತದೆ. ನೀವು ದೊಡ್ಡ ಗುಂಪನ್ನು ಹೊಂದಿದ್ದರೆ ಅಥವಾ ಆಳವಾದ ಚರ್ಚೆಗಳನ್ನು ಇಷ್ಟಪಡುವ ಗುಂಪನ್ನು ಹೊಂದಿದ್ದರೆ, ಗಡಿಯಾರ ಅಥವಾ ಟೈಮರ್‌ನಿಂದ ನಿಮ್ಮನ್ನು ಗಮನದಲ್ಲಿ ಇಡುವುದಕ್ಕಾಗಿ ಸಹಾಯ ಮಾಡಲು ನೀವು ಗುಂಪಿನ ಒಬ್ಬ ಸದಸ್ಯರಿಗೆ ಹೇಳಬಹುದು.

ನಿಜ ಜೀವನದಲ್ಲಿ, ಈ ಹಂತಗಳು ನಿಧಾನವಾಗಿ ನಡೆಯುತ್ತವೆ, ಆದರೆ ನೀವು ಅಭ್ಯಾಸ ಮಾಡುತ್ತಿರುವಾಗ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ನಿಮಗೆ ಸಮಯ ಮೀರುವುದಿಲ್ಲ. ಯಾವ ಹಂತಗಳನ್ನು ಬಿಟ್ಟುಬಿಡಬೇಡಿ - ಅವೆಲ್ಲವೂ ಪ್ರಾಮುಖ್ಯ!

3/3 ಗುಂಪು ಸತ್ಯವೇದ ಅಧ್ಯಯನದಂತೆಯೇ ಅಲ್ಲ - ಅದು ಉದ್ದೇಶಪೂರ್ವಕವಾಗಿದೆ ಎಂದು ನೆನಪಿಡಿ! ಭೇಟಿಯಾಗಲು ಹೊಸ ಮಾರ್ಗವನ್ನು ಕಲಿಯಲು ಈ ಅನುಭವವನ್ನು ಒಂದು ಅವಕಾಶವಾಗಿ ಪರಿಗಣಿಸಿ ಮತ್ತು ನಿಮ್ಮ ಒಟ್ಟಾಗಿ ಕಳೆಯುವ ಸಮಯಕ್ಕಾಗಿ ದೇವರು ಏನನ್ನು ಯೋಜಿಸಿದ್ದಾನೆ ಎಂಬುದನ್ನು ನೋಡಿ. ಹೋಗಲು ಸಿದ್ಧರಿದ್ದೀರಾ? ಪ್ರಾರಂಭಿಸೋಣ!

ಹಿಂತಿರುಗಿ ನೋಡುವುದು

ಕೃತಜ್ಞತೆ ಸಲ್ಲಿಸುವ ಮೂಲಕ, ನಮ್ಮ ಹೋರಾಟಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ನಮ್ಮ ಗುಂಪಿನ ಇತರ ಸದಸ್ಯರಿಗಾಗಿ ಪ್ರಾರ್ಥಿಸುವ ಮೂಲಕ ನಾವು ನಮ್ಮ ಸಮಯದ ಮೊದಲ ಮೂರನೇ ಭಾಗವನ್ನು ಹಿಂತಿರುಗಿ ನೋಡುತ್ತೇವೆ. ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ನಾವು ಕೊನೆಯ ಸಾರಿ ಒಟ್ಟಾಗಿ ಇದ್ದಾಗ ಅವರು ಕಲಿತವುಗಳಿಗೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅವಕಾಶವಿದೆಯೇ ಎಂದು ನೋಡಲು ನಾವು ಪರಿಶೀಲಿಸುತ್ತೇವೆ.

ಹಂತ ಒಂದು - "ಕೃತಜ್ಞತೆ ಸಲ್ಲಿಸುವುದು."

ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಲಿ. ಈ ವೀಡಿಯೊವನ್ನು ನಿಲ್ಲಿಸಿ ಮತ್ತು ಈಗಲೇ ಹಾಗೆ ಮಾಡಿ... ನೀವು ಇನ್ನೂ ಇದ್ದೀರಾ? ನಿಜವಾಗಿಯೂ, ನೀವು ನಿಲ್ಲಿಸಿ ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ನೀವು ದೇವರಿಗೆ ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನೀವು ಹಿಂತಿರುಗಿದಾಗ ನಾವು ಇಲ್ಲೇ ಇರುತ್ತೇವೆ. (2 ನಿಮಿಷಗಳು)

ಹಂತ ಎರಡು - "ನಿಮ್ಮ ಹೋರಾಟಗಳನ್ನು ಹಂಚಿಕೊಳ್ಳುವುದು" ಮತ್ತು "ಒಬ್ಬರಿಗೊಬ್ಬರು ಪ್ರಾರ್ಥಿಸುವುದು."

ಈಗ ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅವರು ಕಷ್ಟಪಡುತ್ತಿರುವುದನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವಂತೆ ಮಾಡಿ. ಅವರು ಹಂಚಿಕೊಂಡ ವಿಷಯಕ್ಕಾಗಿ ಬೇರೆಯವರು ಅವರಿಗೆ ಪ್ರಾರ್ಥಿಸುವಂತೆ ಮಾಡಿ. ವಿರಾಮವನ್ನು ಒತ್ತಿ, ನಂತರ ಹಂಚಿಕೊಳ್ಳಿ ಮತ್ತು ಪ್ರಾರ್ಥಿಸಿ. (8 ನಿಮಿಷಗಳು)

ಹಂತ ಮೂರು - "ಗುಂಪನ್ನು ಕೇಂದ್ರೀಕರಿಸುವುದು."

ನೀವು ಭೇಟಿಯಾದ ಸಮಯದಲೆಲ್ಲಾ, ನೀವು ಸಮಯವನ್ನು ತೆಗೆದುಕೊಂಡು ನೀವು ಯಾಕೆ ಒಟ್ಟಾಗಿ ಇದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಲು ಬಯಸಬಹುದು - ದೇವರನ್ನು ಪ್ರೀತಿಸಲು, ಇತರರನ್ನು ಪ್ರೀತಿಸಲು, ಯೇಸುವನ್ನು ಕುರಿತು ಸಾರಲು ಮತ್ತು ಇತರರು ಆತನನ್ನು ಕುರಿತು ಸಾರಲು ಅವರಿಗೆ ಸಹಾಯ ಮಾಡುವುದು. ಸೇವೆಯಲ್ಲಿ ಗುಂಪನ್ನು ಕೇಂದ್ರೀಕರಿಸಲು ಸಾಕಷ್ಟು ಮಾರ್ಗಗಳಿವೆ, ಆದರೆ ಈ ಅಭ್ಯಾಸದ ಅವಧಿಗೆ ಯಾರಾದರೂ ಮತ್ತಾಯ 22:37-38 ನ್ನು ಗುಂಪಿನವರಿಗೆ ಜೋರಾಗಿ ಓದುವರು. ವಿರಾಮವನ್ನು ಒತ್ತಿ, ನಂತರ ಓದಿ. (2 ನಿಮಿಷಗಳು)

ಹಂತ ನಾಲ್ಕು - "ಚೆಕ್ ಇನ್."

ಇದು ಕೆಲವು ಗುಂಪುಗಳನ್ನು ಬಿಟ್ಟುಬಿಡಲು ಬಯಸುವ ಭಾಗವಾಗಿದೆ, ಯಾಕೆಂದರೆ ಇದು ಕೆಲವೊಮ್ಮೆ ಕಷ್ಟಕರವಾದ ಪ್ರಶ್ನೆಗಳನ್ನು ಕೇಳುವುದು ಎಂದರ್ಥ. ದಯವಿಟ್ಟು ಬಿಟ್ಟುಬಿಡ ಬೇಡಿ.

ಕಠಿಣ ಪ್ರಶ್ನೆಗಳನ್ನು ಕೇಳುವಷ್ಟು ಯೇಸು ತನ್ನ ಹಿಂಬಾಲಕರನ್ನು ಪ್ರೀತಿಸಿದನು. ನಾವು ಯೇಸುವಿನ ಹಾಗೆ ಇರಲು ಬಯಸಿದರೆ, ಹಾಗೆ ಮಾಡಲು ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕಾಗಿದೆ. ಈ ಹಂತದಲ್ಲಿ, ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅವರು ಕೇಳಿದವುಗಳಿಗೆ ವಿಧೇಯರಾಗಿದ್ದಾರೋ ಎಂದು ನೀವು ವರದಿಯನ್ನು ಹೊಂದಿರುವಿರಿ.

ನೀವು ಕೊನೆಯ ಸಾರಿ ಒಟ್ಟಾಗಿ ಇದ್ದುದನ್ನು ಮಾಡಲು ಅವರನ್ನು ಕೇಳಿರಿ. ಪ್ರತಿ ಜುಮೆ ಅಧಿವೇಶನದಲ್ಲಿ, ನಾವು ಈ ಸಮರ್ಪಣೆಗಳನ್ನು ನಮ್ಮ ಮುಂದೆ ನೋಡುತ್ತಿರುವ ಹಂತದಲ್ಲಿ ರೂಪಿಸಿದ್ದೇವೆ, ಅಲ್ಲಿ ನಾವು ನಿಮ್ಮನ್ನು ವಿಧೇಯರಾಗಲು, ಹಂಚಿಕೊಳ್ಳಲು ಮತ್ತು ಪ್ರಾರ್ಥಿಸಲು ಕೇಳುತ್ತೇವೆ. ನಮ್ಮ ಹಿಂದಕ್ಕೆ ನೋಡುವುದು ಎಂಬ ಹಂತದಲ್ಲಿ ನಾವು ಹೊಣೆಗಾರಿಕೆಯನ್ನು ಮಾದರಿಯಾಗಿ ಮಾಡುತ್ತೇವೆ, ಅದೇ ಸಮರ್ಪಣೆಗಳ ಮೇಲೆ ಚೆಕ್-ಇನ್ ಮಾಡಲು ನಾವು ನಿಮ್ಮನ್ನು ಕೇಳುತ್ತೇವೆ.

ನೀವು ಇಲ್ಲಿಯವರೆಗೆ ತರಬೇತಿಯಲ್ಲಿ ಈ ಹಂತಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯದಿದ್ದರೆ, ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ.

ದೇವರನ್ನು ಪ್ರೀತಿಸುವ ಭಾಗವು ಆತನು ನಮಗೆ ಹೇಳುವವುಗಳಿಗೆ ವಿಧೇಯರಾಗುವುದು. ಒಬ್ಬರನ್ನೊಬ್ಬರು ಪ್ರೀತಿಸುವ ಭಾಗವು ದೇವರಿಂದ ಕೇಳಿಸಿಕೊಳ್ಳುವದಕ್ಕೆ ವಿಧೇಯರಾಗಲು ಸಹಾಯ ಮಾಡುವುದು ಎಂದರ್ಥ. ಪ್ರೀತಿ ಎಂದರೆ ಬೇರೆಯವರ ಸಮರ್ಪಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು - ಮತ್ತು ಒಂದೇ ಸಮಯದಲ್ಲಿ ಅವರಿಗೆ ಪ್ರೀತಿಯನ್ನು ಉದಾರತೆಯಿಂದ ತೋರಿಸುವುದು.

ವಿರಾಮವನ್ನು ಒತ್ತಿ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಿ:

(12 ನಿಮಿಷಗಳು)

ನಮ್ಮ 3/3 ಗುಂಪಿನ ಹಿಂದಕ್ಕೆ ನೋಡುವುದು ಎಂಬ ಭಾಗವನ್ನು ನಾವು ಮುಗಿಸುತ್ತಿರುವಾಗ, ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯುವುದಕ್ಕಾಗಿ ಸಹಾಯ ಮಾಡಲು ಇಲ್ಲಿ ಕೆಲವು ಸಂಗತಿಗಳು ಕೊಡಲ್ಪಟ್ಟಿವೆ:

ಜುಮೆ ತರಬೇತಿ ಸಲಹೆ

ಕೆಲವೊಮ್ಮೆ ಗುಂಪಿನಲ್ಲಿ, ಒಬ್ಬ ವ್ಯಕ್ತಿಯೇ ಹೆಚ್ಚಿನ ಸಮಯ ಮಾತನಾಡುತ್ತಿರಬಹುದು. ಹೀಗಾಗಲು ಬಿಡಬೇಡಿ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಮೌಲ್ಯವನ್ನು ಹೊಂದಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಹಂಚಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಇತರರಿಗೆ ಮಾತನಾಡಲು ಅವಕಾಶ ಸಿಗದಿದ್ದರೆ, ಯಾರು ಹೆಚ್ಚು ಮಾತನಾಡುತ್ತಾರೋ ಅವರು ಪ್ರತಿಯೊಬ್ಬರಿಗೂ ಕೇಳಿಸಿಕೊಳ್ಳಬೇಕೆಂದು ನಿಧಾನವಾಗಿ ನೆನಪಿಸಿ.

ಮೇಲಕ್ಕೆ ನೋಡುವುದು

ನಾವು ಒಟ್ಟಾಗಿ ಇರುವ ಸಮಯದ ಮಧ್ಯಭಾಗದ ಮೂರನೇ ಅವಧಿಯಲ್ಲಿ, ದೇವರ ವಾಕ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮ್ಮ ಗುಂಪನ್ನು ನಡೆಸಲು ನಾವು ದೇವರಾತ್ಮನನ್ನು ಆಮಂತ್ರಿಸುತ್ತೇವೆ. ನಾವು ಸತ್ಯವೇದದಿಂದ ಒಂದು ಭಾಗವನ್ನು ಜೋರಾಗಿ ಓದುತ್ತೇವೆ, ನಂತರ ಉತ್ತಮವಾದ ದೇವರ ಉದ್ದೇಶಗಳು ಮತ್ತು ಯೋಜನೆಗಳನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಗುಂಪಾಗಿ ಕೆಲವು ಸರಳ ಪ್ರಶ್ನೆಗಳನ್ನು ಕೇಳುತ್ತೇವೆ ಮತ್ತು ಉತ್ತರಿಸುತ್ತೇವೆ.

ಹಂತ ಒಂದು - ಮುನ್ನಡೆಸಲು ದೇವರ ಪವಿತ್ರಾತ್ಮನನ್ನು ಆಮಂತ್ರಿಸಿ

ಪ್ರಾರ್ಥಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿರಿ. ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ನೀವು ಓದಲಿರುವ ವಾಕ್ಯಭಾಗದಿಂದ ನಿಮಗೆ ಕಲಿಸಲು ಆತನ ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ. ವಿರಾಮವನ್ನು ಒತ್ತಿ ಮತ್ತು ಪ್ರಾರ್ಥಿಸಿ. (2 ನಿಮಿಷಗಳು)

ಹಂತ ಎರಡು - ದೇವರ ವಾಕ್ಯವನ್ನು ಓದಿ ಮತ್ತು ಪ್ರಶ್ನೆಗಳನ್ನು ಕೇಳಿರಿ

ಗುಂಪಿನಲ್ಲಿರುವ ಯಾರಾದರೂ ಸತ್ಯವೇದದಿಂದ ಓದುವ ಹಾಗೆ ಮಾಡಿ. ಈ ಅಭ್ಯಾಸಕ್ಕಾಗಿ, ಲೂಕ 18:9-14 ಓದಿ. ನೀವು ಓದುವುದನ್ನು ಮುಗಿಸಿದಾಗ, ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು:

ಮೌಖಿಕವಾಗಿ ಕಲಿಯುವವರು ಇದ್ದರೆ - ಚೆನ್ನಾಗಿ ಓದದೆ ಇರುವ ಅಥವಾ ಕೇಳುವ ಮೂಲಕ ಕಲಿಯಲು ಇಷ್ಟಪಡುವ ಜನರು - ನಿಮ್ಮ ಗುಂಪಿನಲ್ಲಿ, ನೀವು ವಾಕ್ಯಭಾಗವನ್ನು ಕನಿಷ್ಟ ಎರಡು ಸಾರಿ ಓದುತ್ತೀರೆಂದು ಖಚಿತಪಡಿಸಿಕೊಳ್ಳಿರಿ.

ವಿರಾಮವನ್ನು ಒತ್ತಿ, ನಂತರ ಪ್ರಶ್ನೆಗಳನ್ನು ಓದಿ ಮತ್ತು ಉತ್ತರಿಸಿ. (10 ನಿಮಿಷಗಳು)

ಈಗ ಬೇರೆಯವರು ಅದೇ ವಾಕ್ಯಭಾಗವನ್ನು ಎರಡನೇ ಸಾರಿ ಓದುವಂತೆ ಮಾಡಿ, ನಂತರ ಈ ಎರಡು ಪ್ರಶ್ನೆಗಳಿಗೆ ಗುಂಪು ಉತ್ತರಿಸುವಂತೆ ಮಾಡಿ:

ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಅದನ್ನು ಸರಳವಾಗಿಡಿ! (10 ನಿಮಿಷಗಳು)

ಅದು ನಮ್ಮ 3/3 ಗುಂಪಿನ ಮೇಲಕ್ಕೆ ನೋಡಿರಿ ಭಾಗದ ಮುಕ್ತಾಯವಾಗಿದೆ, ಮತ್ತು ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯಲು ಸಹಾಯ ಮಾಡಲು ಇಲ್ಲಿ ಕೆಲವು ಸಂಗತಿಗಳು ಕೊಡಲ್ಪಟ್ಟಿವೆ:

ಜುಮೆ ತರಬೇತಿ ಸಲಹೆ

ನೀವು ದೇವರ ವಾಕ್ಯವನ್ನು ಅಧ್ಯಯನ ಮಾಡುವಾಗ, ಇತರ ಪುಸ್ತಕಗಳು, ಶಿಕ್ಷಕರು ಅಥವಾ ಅಭಿಪ್ರಾಯಗಳ ಬದಲಿಗೆ ಆತನ ಮಾತುಗಳನ್ನು ಕೇಂದ್ರೀಕರಿಸಿ. "ಇದರ ಅರ್ಥವೇನೆಂದು ನೀವು ಆಲೋಚಿಸುತ್ತೀರಿ?" ಎಂದು ಕೇಳುವದಕ್ಕೆ ಬದಲಾಗಿ "ಈ ವಾಕ್ಯವು ಏನು ಹೇಳುತ್ತದೆ?" ಎಂದು ಕೇಳಿರಿ. ನಿಮ್ಮ ಗುಂಪಿನಲ್ಲಿರುವ ಯಾರಾದರೂ ಕಲಿಸಲು ಇಷ್ಟಪಟ್ಟರೆ, ದೇವರ ಪವಿತ್ರಾತ್ಮನು ಮತ್ತು ಪರಿಪೂರ್ಣ ವಾಕ್ಯವು ಗುಂಪಿನವರಿಗೆ ಕಲಿಸುತ್ತದೆ ಎಂದು ಅವರಿಗೆ ನಿಧಾನವಾಗಿ ನೆನಪಿಸಿ. ನಾವೆಲ್ಲರೂ ಒಟ್ಟಾಗಿ ಕಲಿಯಲು ಇಲ್ಲಿದ್ದೇವೆ. ಮತ್ತು ಚರ್ಚೆಯಲ್ಲಿ ಮೌನ ಅಥವಾ ವಿರಾಮಕ್ಕೆ ಹೆದರಬೇಡಿ. ಅದು ಶಾಂತವಾಗಿದ್ದರೂ ದೇವರು ಕೆಲಸ ಮಾಡುತ್ತಾನೆ. ಆತನ ಮಾತುಗಳನ್ನು ಕೇಂದ್ರೀಕರಿಸಿ, ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಉಳಿದದ್ದನ್ನು ಮಾಡಲು ದೇವರನ್ನು ನಂಬಿರಿ.

ಮುಂದಕ್ಕೆ ನೋಡುವುದು  

ನಮ್ಮ ಸಮಯದ ಕೊನೆಯ ಮೂರನೇ ಭಾಗದಲ್ಲಿ, ನಾವು ದೇವರ ವಾಕ್ಯದಿಂದ ಕಲಿತವುಗಳಿಗೆ ಹೇಗೆ ವಿಧೇಯರಾಗಬಹುದು ಮತ್ತು ಇತರರಿಗೆ ತರಬೇತಿ ಕೊಡಬಹುದು ಎಂದು ಕಂಡುಕೊಳ್ಳಲು ನಾವು ಎದುರುನೋಡುತ್ತೇವೆ. ಗುಂಪಿನ ಪ್ರತಿಯೊಬ್ಬ ಸದಸ್ಯರು ದೇವರಿಗೆ ಕೆಲವು ಸರಳ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಪ್ರಾರ್ಥನೆಯಲ್ಲಿ ಅವರ ಉತ್ತರಕ್ಕಾಗಿ ಕಾಯುತ್ತಾರೆ. ನಂತರ ನಾವು ನಮ್ಮ ಸಮರ್ಪಣೆಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಅಭ್ಯಾಸ ಮಾಡುತ್ತೇವೆ ಮತ್ತು ನಮ್ಮ ಸಮಯವನ್ನು ಒಟ್ಟಾಗಿ  ಮುಕ್ತಾಯ ಮಾಡಲು ಪ್ರಾರ್ಥಿಸುತ್ತೇವೆ.

ಹಂತ 1 - ದೇವರ ಉದ್ದೇಶಕ್ಕಾಗಿ ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಮೌನವಾಗಿ ಪ್ರಾರ್ಥಿಸಿ ಮತ್ತು ದೇವರಿಗೆ ಈ ಪ್ರಶ್ನೆಗಳನ್ನು ಕೇಳಲಿ:

ವಿರಾಮವನ್ನು ಒತ್ತಿ ನಂತರ ಪ್ರಾರ್ಥಿಸಿ. (5 ನಿಮಿಷಗಳು)

ಈಗ ಮತ್ತು ನಿಮ್ಮ ಗುಂಪು ತಿರಿಗಿ ಭೇಟಿಯಾಗುವ ಸಮಯದಲ್ಲಿ ನೀವು ತೆಗೆದುಕೊಳ್ಳಬಹುದಾದ ನಿರ್ದಿಷ್ಟ ಉತ್ತರಗಳು, ನಿರ್ದಿಷ್ಟ ಹೆಸರುಗಳು ಮತ್ತು ನಿರ್ದಿಷ್ಟ ಕ್ರಮಗಳನ್ನು ಕೊಡಲು ದೇವರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ಸಮರ್ಪಣೆಗಳನ್ನು ಒಟ್ಟುಗೂಡಿಸುವುದು

ಪ್ರತಿಯೊಂದು ಪ್ರಶ್ನೆಗೆ ಕರ್ತನಿಂದ ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಲು ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿರಿ. ಯಾರಾದರೂ ಒಂದು, ಎರಡು ಅಥವಾ ಎಲ್ಲಾ ಮೂರು ಪ್ರಶ್ನೆಗಳಿಗೆ ಕರ್ತನಿಂದ ಏನನ್ನೂ ಕೇಳದಿರಬಹುದು. ಅವರು ಕೇಳಿಸಿಕೊಳ್ಳಲಿಲ್ಲ ಎಂದು ಅವರು ಸರಳವಾಗಿ ಹೇಳಬಹುದು.

ಆದರೆ ನೆನಪಿಡಿ, ಗುಂಪು ಕರ್ತನಿಂದ ಕೇಳಬೇಕು. ಯೇಸು ಹೇಳಿದ್ದು - "ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ." ಮತ್ತು ನಿಮ್ಮ ವಿಧೇಯತೆಯ ಹಂತಗಳು ಹೆಚ್ಚು ನಿರ್ದಿಷ್ಟವಾಗಿದಷ್ಟು, ನಾವು ಮತ್ತೆ ಭೇಟಿಯಾಗುವುದಕ್ಕೆ ಮೊದಲು ಅವುಗಳಿಗೆ  ವಿಧೇರಾಗಲು ಸುಲಭವಾಗುತ್ತದೆ.

ವಿರಾಮವನ್ನು ಒತ್ತಿ, ನಂತರ ನೀವು ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಿರಿ. (10 ನಿಮಿಷಗಳು)

ಹಂತ 3 - ನಿಮ್ಮ ಯೋಜನೆಯನ್ನು ಅಭ್ಯಾಸ ಮಾಡುವುದು

ನೀವು ಒಟ್ಟಾಗಿ ನಿಮ್ಮ ಸಮಯವನ್ನು ಕೊನೆಗೊಳಿಸುವುದಕ್ಕೆ ಮೊದಲು, ನಿಮ್ಮ 3/3 ಗುಂಪನ್ನು ಎರಡು ಅಥವಾ ಮೂರರ ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಮತ್ತು ನೀವು ಮಾಡಬೇಕೆಂದು ಕರ್ತನಿಂದ ಕೇಳಿಸಿಕೊಂಡ ವಿಷಯವನ್ನು ಅಭ್ಯಾಸ ಮಾಡಿ.

ನೆನಪಿಡಿ - ಅಭ್ಯಾಸವು ವಿಧೇರಾಗುವುದು, ತರಬೇತಿ ಕೊಡುವುದು ಅಥವಾ ಹಂಚಿಕೊಳ್ಳುವುದಲ್ಲ, ಆದರೆ ಆ ಕೆಲಸಗಳನ್ನು ಉತ್ತಮವಾಗಿ ಮಾಡಲು ಅದು ನಿಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರತಿಯೊಂದು ಚಿಕ್ಕ ಗುಂಪು ತನ್ನ ಅಭ್ಯಾಸದ ಸಮಯವನ್ನು ಪ್ರಾರ್ಥನೆಯಿಂದ ಒಟ್ಟಾಗಿ ಮುಕ್ತಾಯಗೊಳಿಸುತ್ತದೆ. ದೇವರು ನಿಮ್ಮ ಹೃದಯದಲ್ಲಿ ಇಟ್ಟಿರುವ ಆ ಜನರಿಗೆ ಮತ್ತು ಯೋಜನೆಗಳಿಗಾಗಿ ನಿರ್ದಿಷ್ಟವಾಗಿ ಪ್ರಾರ್ಥಿಸಿ.

ಗುಂಪಿನಲ್ಲಿ ನೀವು ಮೌಖಿಕವಾಗಿ ಕಲಿಯುವವರನ್ನು ಹೊಂದಿದ್ದರೆ, ನೀವು ಮೊದಲು ಓದಿದ ದೇವರ ವಾಕ್ಯಭಾಗವನ್ನು ತಿರಿಗಿ ಓದಲು ನಿಮ್ಮ ಅಭ್ಯಾಸದ ಸಮಯವನ್ನು ಮೀಸಲಿಡಿ. ಕೂಟಗಳ ನಡುವೆ ಅವರು ಭೇಟಿಯಾಗುವ ಇತರರೊಂದಿಗೆ ಹಂಚಿಕೊಳ್ಳಲು ಇಡೀ ಗುಂಪಿಗೆ ಇದು ಸಹಾಯ ಮಾಡುತ್ತದೆ.

ವಿರಾಮವನ್ನು ಒತ್ತಿ, ನಂತರ ಅಭ್ಯಾಸ ಮಾಡಲು ಮತ್ತು ಪ್ರಾರ್ಥನೆ ಮಾಡಲು ಗುಂಪುಗಳಾಗಿ ವಿಂಗಡವಾಗಿರಿ. ನಿರ್ದಿಷ್ಟ ಸಮರ್ಪಣೆಗಳನ್ನು ಹೊಂದಿರದ ಯಾರಾದರೂ ತಮ್ಮ ಸಾಕ್ಷಿಯ ಕಥೆ ಅಥವಾ ದೇವರ ಕಥೆಯನ್ನು ಹಂಚಿಕೊಳ್ಳಲು ಅಭ್ಯಾಸ ಮಾಡಬೇಕು. (10 ನಿಮಿಷಗಳು)

ನಮ್ಮ ಸಮಯವನ್ನು ಒಟ್ಟಾಗಿ ಪೂರ್ಣಗೊಳಿಸುವುದು

ನಿಮ್ಮ ಗುಂಪನ್ನು ನೀವು ತಿರಿಗಿ ಒಟ್ಟಾಗಿ ಸೇರಿಸಿದಾಗ, ಆಚರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿರಿ! ನೀವು ಮುಂದಕ್ಕೆ ನೋಡಿರಿ ಎಂಬ ಭಾಗವನ್ನು ಪೂರ್ಣಗೊಳಿಸಿದ್ದೀರಿ ಮತ್ತು ಈಗ ಸಂಪೂರ್ಣ 3/3 ಗುಂಪಿನ ಮಾದರಿಯನ್ನು ಅಭ್ಯಾಸ ಮಾಡಿದ್ದೀರಿ.

ನಂತರದ ಅವಧಿಗಳಲ್ಲಿ ಈ ವೀಡಿಯೊ ಮಾರ್ಗದರ್ಶಿ ಇಲ್ಲದೆಯೇ ನಿಮ್ಮ ಗುಂಪು ಅಭ್ಯಾಸವನ್ನು ಮುಂದುವರಿಸುತ್ತದೆ. ಪ್ರಕ್ರಿಯೆಯ ಮೂಲಕ ಗುಂಪಿಗೆ ಮಾರ್ಗದರ್ಶನ ಕೊಡಲು ಇತರರಿಗೆ ಅವಕಾಶ ಕೊಡುವ ತಿರುವುಗಳನ್ನು ತೆಗೆದುಕೊಳ್ಳಲು ಮರೆಯದಿರಿ. ನೀವು ಪ್ರತಿಭಾನ್ವಿತ ಶಿಕ್ಷಕರಾಗಿರಬೇಕಾಗಿಲ್ಲ, ಈ ಸರಳ ಹಂತಗಳನ್ನು ಅನುಸರಿಸಿ. ನೀವು ಹೋಗುವುದಕ್ಕೆ ಮುಂಚಿತವಾಗಿ, ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯುವುದಕ್ಕಾಗಿ ಸಹಾಯ ಮಾಡಲು ಇನ್ನೊಂದು ಸಲಹೆ ಇಲ್ಲಿ ಕೊಡಲ್ಪಟ್ಟಿದೆ:

ಜುಮೆ ತರಬೇತಿ ಸಲಹೆ

ಪ್ರಪಂಚದಾದ್ಯಂತ, 3/3 ಗುಂಪುಗಳು ಸಾಮಾನ್ಯವಾಗಿ ಕರ್ತನ ಭೋಜನ ಅಥವಾ ಊಟ ಮತ್ತು ಹೆಚ್ಚು ಸಾಂದರ್ಭಿಕ ಸಂಭಾಷಣೆಗಳನ್ನು ಒಟ್ಟಾಗಿ ತಮ್ಮ ಸಮಯದ ಭಾಗವಾಗಿ ಹಂಚಿಕೊಳ್ಳುತ್ತವೆ. ದೇವರು ನಮಗೆ ಈ ರೀತಿಯ ಸಹಭಾಗಿತ್ವವನ್ನು ಕೊಟ್ಟಿದ್ದಾನೆ -- ಉದ್ದೇಶಪೂರ್ವಕ ಕಲಿಕೆ ಮತ್ತು ಬೆಳವಣಿಗೆ ಮತ್ತು ಉದ್ದೇಶಪೂರ್ವಕ ಜೀವನ ಮತ್ತು ಸಂಬಂಧವು ಆತನ ಮಗನಾದ ಯೇಸುವಿನ ಹಾಗೆ ನಮ್ಮನ್ನು ಬಲಪಡಿಸಲು, ಉತ್ತೇಜಿಸಲು ಮತ್ತು ಬೆಳೆಸಲು ಸಹಾಯ ಮಾಡುತ್ತದೆ.

ಮತ್ತು ಈಗ - ನಿಮ್ಮ ಗುಂಪು ಎಲ್ಲಾ ಮೂರು ಭಾಗಗಳನ್ನು ಅಭ್ಯಾಸ ಮಾಡಿದೆ -- ನಾವು ಕಳೆದ ಸಾರಿ ಭೇಟಿಯಾದ ಸಮಯದಿಂದ ನಾವು ಏನನ್ನು ಸಾಧಿಸಿದ್ದೇವೆ ಎಂಬುದನ್ನು ಪರಿಶೀಲಿಸಲು ಹಿಂತಿರುಗಿ ನೋಡುವುದು, ಈ ಸಮಯದಲ್ಲಿ ನಾವು ಒಟ್ಟಾಗಿ ಕಲಿಯಲು ದೇವರು ನಮಗಾಗಿ ಏನನ್ನು ಹೊಂದಿದ್ದಾನೆ ಎಂದು ಅರ್ಥಮಾಡಿಕೊಳ್ಳಲು ಮೇಲಕ್ಕೆ ನೋಡುವುದು, ಮತ್ತು ನಾವು ಬೇರೆಯಾಗಿರುವಾಗ ದೇವರು ನಮ್ಮ ಹೃದಯದಲ್ಲಿ ಇಟ್ಟಿರುವುದ್ದನ್ನು ಕಾರ್ಯರೂಪಕ್ಕೆ ತರಲು ಮುಂದಕ್ಕೆ ನೋಡುವುದು.

3/3 ಗುಂಪುಗಳು - ನಾವು ಹೆಚ್ಚಾಗಿ ಯೇಸುವಿನ ಹಾಗೆ ಆಗಲು ಸಹಾಯ ಮಾಡುವ ಸರಳ ಮತ್ತು ಪ್ರಾಯೋಗಿಕ ಮಾರ್ಗವಾಗಿದೆ.