ಈ ಅಧಿವೇಶನದಲ್ಲಿ, ಹೇಗೆನಂಬಿಗಸ್ತಿಕೆಆತ್ಮಿಕ ಪರಿಪಕ್ವತೆ,ಜ್ಞಾನ ಮತ್ತು ತರಬೇತಿಗಿಂತ ಉತ್ತಮ ಅಳತೆಯಾಗಿದೆ ಎಂಬುದನ್ನು ನಾವು ಕಲಿಯೋಣ. ಇಂದು ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿರುವ ಎರಡು ಕಲ್ಪನೆಗಳಿವೆ.
ಮೊದಲನೆಯ ಕಲ್ಪನೆಯು ಒಬ್ಬರ ಆತ್ಮಿಕ ಪರಿಪಕ್ವತೆಯು ಅವರು ದೇವರ ವಾಕ್ಯವನ್ನು ಕುರಿತು ಎಷ್ಟಾಗಿ ತಿಳಿದಿದ್ದಾರೆ ಎಂಬುದಕ್ಕೆ ಜೋಡಣೆಯಾಗಿದೆ. ಅವರು ಸರಿಯಾದ ವಿಶ್ವಾಸ ಅಥವಾ ಸಾಂಪ್ರದಾಯಿಕ ಎಂದು ಅವರು ನಡೆದುಕೊಳ್ಳುವದು ಒಬ್ಬರ ನಂಬಿಕೆಯ ಒಳ್ಳೆಯ ಅಳತೆಯಾಗಿದೆ.
ಎರಡನೆಯ ಕಲ್ಪನೆಯು ಸೇವೆಯನ್ನು ಆರಂಭಿಸುವದಕ್ಕಿಂತ ಮುಂಚಿತವಾಗಿ ಒಬ್ಬರ ಸಾಮರ್ಥ್ಯವು ನಡೆಸಲು “ಪೂರ್ಣ ತರಬೇತಿ” ಅಗತ್ಯವಾಗಿದೆ. ಒಬ್ಬರು ಸೇವೆಮಾಡುವ ಸಾಮರ್ಥ್ಯವು ಸಂಪೂರ್ಣ ತಿಳುವಳಿಕೆಯು ಒಳ್ಳೆಯ ಅಳತೆಯೆಂದು ಆಲೋಚಿಸುವರು.
ಸೈತಾನನು ತಾನೇ ಮನುಷ್ಯನಿಗಿಂತ ಹೆಚ್ಚಿನ ವಾಕ್ಯಗಳನ್ನು ತಿಳಿದಿದ್ದಾನೆ ಎಂದು ಸಾಂಪ್ರದಾಯಿಕ ಅಥವಾ “ಸರಿಯಾದ ವಿಶ್ವಾಸ” ದ ಮೇಲೆ ಆತುಕೊಳ್ಳುವದು ಮೊದಲನೆಯ ಕಲ್ಪನೆಯೊಂದಿಗಿರುವ ಸಮಸ್ಯೆಯಾಗಿದೆ. ದೇವರ ವಾಕ್ಯವು ಹೇಳುವದೇನೆಂದರೆ – ಒಬ್ಬನೇ ದೇವರು ಇದ್ದಾನೆಂದು ನೀವು ನಂಬುವಿರಿ.
ಒಳ್ಳೆಯದು! ದೆವ್ವಗಳು ಸಹ ಹೀಗೆ ನಂಬಿ ನಡುಗುತ್ತವೆ.
ಒಬ್ಬರ ಆತ್ಮಿಕ ಪರಿಪಕ್ವತೆಯು ಸಾಂಪ್ರದಾಯಿಕ ಅಥವಾ - “ಸರಿಯಾದ ಅಭ್ಯಾಸವು ಒಳ್ಳೆಯ ಅಳತೆಯಾಗಿದೆ. ನಾವು ತಿಳಿದಿರುವವುಗಳ ಮೇಲೆ ಮಾತ್ರ ಆಧಾರಗೊಂಡು ಪರಿಪಕ್ವತೆಯನ್ನು ಅಳತೆ ಮಾಡುವದಕ್ಕಿಂತ ನಾವು ವಿಧೇಯರಾಗುವದರಲ್ಲಿ ಮತ್ತು ಹಂಚಿಕೊಳ್ಳುವದರಲ್ಲಿ ನಂಬಿಗಸ್ತರಾಗಿರುವದನ್ನು ಕುರಿತು ಹೆಚ್ಚಾಗಿ ಚಿಂತಿಸಬೇಕಾಗಿದೆ.
ಎರಡನೆಯ ಕಲ್ಪನೆಯೊಂದಿಗಿರುವ ಸಮಸ್ಯೆ ಏನೆಂದರೆ – ಒಬ್ಬರು ನಡೆಸುವದಕ್ಕಿಂತ ಮುಂಚಿತವಾಗಿ ಪೂರ್ಣ ತರಬೇತಿಯನ್ನು ಹೊಂದಿರಬೇಕು ಎಂಬುದೇ ಆದರೆ ಒಬ್ಬರಾದರೂ ಎಂದಿಗೂ ಪೂರ್ಣ ತರಬೇತಿಯನ್ನು ಹೊಂದಿರುವದಿಲ್ಲ.
ದೇವರ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯವಾದ ಕೆಲಸವನ್ನು ಮಾಡಲು ಇನ್ನು ಅನೇಕ ಸಂಗತಿಗಳನ್ನು ಕಳೆಯಬೇಕಾಗಿದ್ದ ಯೌವನಸ್ಥರನ್ನು ಕಳುಹಿಸುವದರಲ್ಲಿ ಯೇಸು ಮಾದರಿಯಾಗಿದ್ದನು.
ದೇವರ ವಾಕ್ಯವು ಹೇಳುವದೇನೆಂದರೆ – ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತರಕ್ಕೆ ಕರೆದು ದೆವ್ವಗಳನ್ನು ಬಿಡಿಸುವದಕ್ಕೂ ಎಲ್ಲಾ ತರದ ರೋಗಗಳನ್ನು ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವದಕ್ಕೂ ಅವರಿಗೆ ಅಧಿಕಾರ ಕೊಟ್ಟನು.
ಯೇಸು ರಕ್ಷಕನೆಂದು ಪೇತ್ರನು ತನ್ನ ನಂಬಿಕೆಯನ್ನು ಹಂಚಿಕೊಳ್ಳುವದಕ್ಕಿಂತ ಮುಂಚಿತವಾಗಿ ಈ ಮನುಷ್ಯರನ್ನು ಕಳುಹಿಸಿದನು – ಇದನ್ನು ನಾವು ನಂಬಿಕೆಯ ಮೊದಲನೆಯ ನಿಲುಗಡೆ ಎಂದು ಪರಿಗಣಿಸುತ್ತೇವೆ. ಅವರನ್ನು ಕಳುಹಿಸಿಕೊಟ್ಟ ನಂತರವೂ ಸಹ ತಪ್ಪುಗಳನ್ನು ಮಾಡಿದ್ದಕ್ಕಾಗಿ ಯೇಸು ಪೇತ್ರನನ್ನು ಅನೇಕ ಖಂಡಿಸಿದನು ಮತ್ತು ಪೇತ್ರನು ನಂತರ ಯೇಸುವನ್ನು ಇನ್ನೂ ಸಂಪೂರ್ಣವಾಗಿ ನಿರಾಕರಿಸಿದನು. ದೇವರ ರಾಜ್ಯದಲ್ಲಿ ಯಾರು ದೊಡ್ಡವನೆಂದು ಪ್ರತಿಯೊಬ್ಬರು ಯಾವ ಪಾತ್ರವನ್ನು ವಹಿಸುವರೆಂದು ಇತರೆ ಹಿಂಬಾಲಕರು ವಾಗ್ವಾದ ಮಾಡಿದರು.
ಅವರು ಕಲಿಯಬೇಕಾದ ಇನ್ನು ಅನೇಕ ಸಂಗತಿಗಳಿದ್ದವು ಆದರೆ ಅವರು ಈಗಾಗಲೇ ತಿಳಿದವುಗಳನ್ನು ಹಂಚಿಕೊಳ್ಳುವದಕ್ಕಾಗಿ ಯೇಸು ಅವರನ್ನು ಕೆಲಸಕ್ಕೆ ಹಾಕಿದನು.
ನಂಬಿಗಸ್ತಿಕೆ – ತಿಳುವಳಿಕೆಗಿಂತ ಹೆಚ್ಚಾದದ್ದು – ಇದನ್ನು ಯಾರಾದರೂ ಯೇಸುವನ್ನು ಹಿಂಬಾಲಿಸಲು ಆರಂಭಿಸಿದ ಕೂಡಲೇ ಆರಂಭಿಸಬಹುದು.
ನಂಬಿಗಸ್ತಿಕೆಯು – ತರಬೇತಿಗಿಂತ ಹೆಚ್ಚಾದದ್ದು – ಇದು ನಮಗೆ ಕೊಡಲ್ಪಟ್ಟವುಗಳೊಂದಿಗೆ ನಾವು ಏನು ಮಾಡುತ್ತೇವೆ ಎಂಬುದರ ಮೂಲಕ ಅಳೆಯಬಹುದು.
ನಾವು ಬೇರೆಯವರಿಂದ ಕೇಳಿಸಿಕೊಂಡವುಗಳಿಗೆ ವಿಧೇಯರಾಗಿ ಹಂಚಿಕೊಂಡರೆ, ನಾವು ನಂಬಿಗಸ್ತರಾಗಿದ್ದೇವೆ.
ನಾವು ಕೇಳಿ ಆದರೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಿರಾಕರಿಸಿದರೆ, ನಾವು ಅಪನಂಬಿಗಸ್ತರಾಗಿದ್ದೇವೆ.
ನಾವು ಶಿಷ್ಯರನ್ನು ಹೆಚ್ಚಿಸುತ್ತಿರುವಾಗ, ನಾವು ಸರಿಯಾದ ಸಂಗತಿಗಳನ್ನು ಅಳತೆಮಾಡುತ್ತಿದ್ದೇವೆಂದು ಖಚಿತಪಡಿಸಿಕೊಳ್ಳೋಣ.